Karnataka politics | ಸಿದ್ದರಾಮಯ್ಯರಿಂದ ದೂರ ಸರಿದ್ರಾ ಸತೀಶ್ ಜಾರಕಿಹೊಳಿ ?
ಬೆಳಗಾವಿ : ವಿಪಕ್ಷ ನಾಯಕ ಸಿದ್ದರಾಮಯ್ಯರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸತೀಶ್ ಜಾರಕಿಹೊಳಿ ಈಗ ಹುಲಿಯಾ ವಿರುದ್ಧ ಮುನಸಿಕೊಂಡಿದ್ದಾರೆ ಅನ್ನೋವ ಮಾತುಗಳು ಕೇಳಿಬರುತ್ತಿವೆ.
ಇದಕ್ಕೆ ಕಾರಣ ಸಿದ್ದರಾಮಯ್ಯ ರಾಮದುರ್ಗ ಬಂದಾಗ ಆ ಕಾರ್ಯಕ್ರಮದಿಂದ ಸತೀಶ್ ಜಾರಕಿಹೊಳಿ ದೂರ ಇದ್ದರು.
ಹೀಗಾಗಿ ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ನಡುವೆ ಮನಸ್ತಾಪ ಏರ್ಪಟ್ಟಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಸ್ವತಃ ಸತೀಶ್ ಜಾರಕಿಹೊಳಿ ಮಾತನಾಡಿದ್ದು, ಹಾಗೇನೂ ಇಲ್ಲ, ನಾವು ಅಲ್ಲಿಂದ ಸ್ಟೆಪ್ ಬೈ ಸ್ಟೆಪ್ ಮೇಲೆ ಬಂದಿಲ್ವಾ, ನಾವು ಪಕ್ಷದಲ್ಲಿಯೇ ಇದ್ದೇವೆ.
ಅವರು ನಮ್ಮ ಜೊತೆಗೆ ಇದ್ದಾರೆ. ಇಬ್ಬರೂ ಮಧ್ಯೆ ಯಾವುದೇ ಡಿಸ್ಟನ್ಸ್ ಇರುವ ಪ್ರಶ್ನೆ ಇಲ್ಲ. ನಾವು ಕೂಡಿಯೇ ಇದ್ದೇವೆ ಎಂದು ಹೇಳಿದ್ದಾರೆ.
ಅಲ್ಲದೇ ಸಿದ್ದರಾಮಯ್ಯ ರಾಮದುರ್ಗ ಬಂದಾಗ ಬೇರೆಬೇರೆ ಕಾರ್ಯಕ್ರಮ ಇತ್ತು.
ಹಾಗಾಗಿ ಬೇರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ.
ಸಿದ್ದರಾಮಯ್ಯ ನನ್ನ ಮಧ್ಯೆ ಮನಸ್ತಾಪ ಪ್ರಶ್ನೆ ಇಲ್ಲ, ಅವರೊಂದಿಗೆ ಹಿಂದೆಯೂ ಇದ್ವಿ, ಈಗಲೂ ಇದ್ವಿ, ಮುಂದೆಯೂ ಇರುತ್ತೀವೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.