2.42 ಲಕ್ಷ ಕೋಟಿ ಇದ್ದ ಸಾಲ 4.50 ಲಕ್ಷ ಕೋಟಿ ರೂ. ಆಗಿದೆ : ಕೇಂದ್ರದ ವಿರುದ್ಧ ಸಿದ್ದು ಆಕ್ರೋಶ
ಬೆಂಗಳೂರು : ಬಿಜೆಪಿ 2014ರಲ್ಲಿ ಅಧಿಕಾರಕ್ಕೆ ಬಂದಾಗ 430 ರೂ. ಇದ್ದ ಅಡುಗೆ ಅನಿಲ ಬೆಲೆ 840 ರೂ. ಗಡಿ ದಾಟಿದೆ. ಜಿಡಿಪಿ ನೆಲಕಚ್ಚಿದೆ. ಶೇ.7.14 ಇದ್ದದ್ದು -2.13 ಕ್ಕೆ ತಲುಪಿದೆ. 100 ರೂ. ಆದಾಯ ಬಂದರೆ 40 ರೂ. ಬಡ್ಡಿ ಕಟ್ಟುವ ಸ್ಥಿತಿ ಇದೆ. ಸಾಲ ಹಿಂದೆಯೂ ಇತ್ತು. ಆದರೆ ಈಗ ಸಾಲ ತೀರಿಸುವ ಕಾರ್ಯ ಆಗುತ್ತಿಲ್ಲ. 2.42 ಲಕ್ಷ ಕೋಟಿ ಇದ್ದ ಸಾಲ 4.50 ಲಕ್ಷ ಕೋಟಿ ರೂ. ತಲುಪಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆಗಿದೆ, 70 ರೂ ಇದ್ದದ್ದು 100 ರೂ. ತಲುಪಿದೆ. ಮೇ ತಿಂಗಳಲ್ಲಿ ಒಟ್ಟು 14 ಬಾರಿ ಇಂಧನ ಬೆಲೆ ಏರಿಸಲಾಗಿದೆ. 2014ರಲ್ಲಿ ಅಧಿಕಾರಕ್ಕೆ ಬಂದಾಗ 430 ರೂ. ಇದ್ದ ಅಡುಗೆ ಅನಿಲ ಬೆಲೆ 840 ರೂ. ಗಡಿ ದಾಟಿದೆ. ಜಿಡಿಪಿ ನೆಲಕಚ್ಚಿದೆ. ಶೇ.7.14 ಇದ್ದದ್ದು -2.13 ಕ್ಕೆ ತಲುಪಿದೆ. 100 ರೂ. ಆದಾಯ ಬಂದರೆ 40 ರೂ. ಬಡ್ಡಿ ಕಟ್ಟುವ ಸ್ಥಿತಿ ಇದೆ. ಸಾಲ ಹಿಂದೆಯೂ ಇತ್ತು. ಆದರೆ ಈಗ ಸಾಲ ತೀರಿಸುವ ಕಾರ್ಯ ಆಗುತ್ತಿಲ್ಲ. 2.42 ಲಕ್ಷ ಕೋಟಿ ಇದ್ದ ಸಾಲ 4.50 ಲಕ್ಷ ಕೋಟಿ ರೂ. ತಲುಪಿದೆ ಎಂದು ಹೇಳಿದರು.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.