ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲ ತಾಯಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಖ್ಯಾತ ಗಾಯಕ ಸಿಧು ಮೂಸೆವಾಲರನ್ನು ದುಷ್ಕರ್ಮಿಗಳು ಹತ್ಯೆಗೈದ ನಂತರ ಅವರ ತಾಯಿ, ಚರಣ್ ಕೌರ್ ಮತ್ತೊಮ್ಮೆ ಗಂಡು ಮಗುವಿನ ತಾಯಿಯಾಗಿದ್ದಾರೆ. ಈ ಕುರಿತು ಸಿಧು ಅವರ ತಂದೆ ಬಲ್ಕೌರ್ ಸಿಂಗ್ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಮಗುವಿನ ಫೋಟೋದೊಂದಿಗೆ ಹಂಚಿಕೊಂಡಿದ್ದಾರೆ.
ಶುಭದೀಪ್ನನ್ನು ಪ್ರೀತಿಸುವ ಲಕ್ಷಾಂತರ ಜನರ ಆಶೀರ್ವಾದದಿಂದ ದೇವರು ಶುಭದೀಪ್ ಅವರ ಕಿರಿಯ ಸಹೋದರರನ್ನು ನಮ್ಮ ತೋಳಿಗೆ ಹಾಕಿದ್ದಾನೆ. ಸಿಧು ಅವರ ತಾಯಿ 58ನೇ ವಯಸ್ಸಿನಲ್ಲಿ ಮತ್ತೆ ಗರ್ಭಿಣಿಯಾಗಿದ್ದಾರೆ ಎಂಬ ವಿಷಯ ಎಲ್ಲೆಡೆ ಹರಿದಾಡಿತ್ತು. ಕೆಲವರು ಇದು ಸುಳ್ಳುಸುದ್ದಿ ಎಂದು ಹೇಳಿದ್ದರು. ಇದೀಗ ಚರಣ್ ಕೌರ್ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
2022 ರ ಮೇ 29 ರಂದು ಪಂಜಾಬಿನ ಮಾನ್ಸಾ ಜಿಲ್ಲೆಯಲ್ಲಿ ಖ್ಯಾತ ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಸಿಧು ಅಲಿಯಾಸ್ ಸಿಧು ಮೂಸೆವಾಲಾ ಗುಂಡಿಕ್ಕಿ ಕೊಲೆ ಮಾಡಿದ್ದರು.