ರೈಸ್ ಬಾತ್
ಅನ್ನ – 1 ಕಪ್
ಕಡಲೆಬೀಜ – 2 ಚಮಚ
ಗೋಡಂಬಿ – 6
ಸಾಸಿವೆ – 1 ಚಮಚ
ಜೀರಿಗೆ – 1 ಚಮಚ
ಕಡಲೆಬೇಳೆ -1 ಚಮಚ
ಕರಿಬೇವು – ಸ್ವಲ್ಪ
ಕೊತ್ತಂಬರಿಸೊಪ್ಪು – ಸ್ವಲ್ಪ
ಈರುಳ್ಳಿ-1
ಹಸಿಮೆಣಸು-2
ಕ್ಯಾರೆಟ್-1
ಬೀನ್ಸ್-3
ಕ್ಯಾಪ್ಸಿಕಂ -1
ನಿಂಬೆ ಹಣ್ಣಿನ ರಸ-2 ಚಮಚ
ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಾಸಿವೆ ಸೇರಿಸಿ. ಅದು ಸಿಡಿದ ಬಳಿಕ ಜೀರಿಗೆ, ಕಡಲೆಬೇಳೆ, ಕಡಲೆಬೀಜ, ಗೋಡಂಬಿ ಸೇರಿಸಿ 2 ನಿಮಿಷ ಹುರಿಯಿರಿ. ಈಗ ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸು, ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಕೆಂಪಗಾದ ಬಳಿಕ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ ಸೇರಿಸಿ ಚೆನ್ನಾಗಿ ಕೈಯಾಡಿಸಿ. ನಂತರ ಉಪ್ಪನ್ನು ಸೇರಿಸಿ ಮಿಶ್ರ ಮಾಡಿ. ಬಳಿಕ ಇದಕ್ಕೆ ಅನ್ನವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಈಗ ನಿಂಬೆ ಹಣ್ಣಿನ ರಸವನ್ನು ಸೇರಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಈಗ ರುಚಿಯಾದ ರೈಸ್ ಬಾತ್ ಸವಿಯಲು ಸಿದ್ಧವಾಗಿದೆ.
ಗೆಣಸಿನ ಚಿಪ್ಸ್
ಬೇಕಾಗುವ ಪದಾರ್ಥಗಳು
ಗೆಣಸು – 2
ರುಚಿಗೆ ತಕ್ಕಷ್ಟು ಉಪ್ಪು
ಮೆಣಸಿನ ಪುಡಿ – 2 ಚಮಚ
ಎಣ್ಣೆ
ಮಾಡುವ ವಿಧಾನ
ಮೊದಲಿಗೆ ಗೆಣಸನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಗೆಣಸಿನ ಚೂರುಗಳನ್ನು ಎಣ್ಣೆಯಲ್ಲಿ ಕರಿದು ತೆಗೆಯಿರಿ. ನಂತರ ಹುರಿದ ಗೆಣಸಿನ ಚೂರುಗಳಿಗೆ ಬಿಸಿ ಇರುವಾಗಲೇ ಉಪ್ಪು, ಮೆಣಸಿನ ಪುಡಿ ಉದುರಿಸಿ ಮಿಶ್ರ ಮಾಡಿ. ಗರಿಗರಿಯಾದ ಗೆಣಸಿನ ಚಿಪ್ಸ್ ಸವಿಯಲು ಸಿದ್ಧವಾಗಿದೆ.
ಅಕ್ಕಿ ಲಡ್ಡು
ಬೇಕಾಗುವ ಸಾಮಗ್ರಿಗಳು
ಅಕ್ಕಿ -3/4 ಕೆಜಿ
ತುಪ್ಪ – 1/2 ಕೆಜಿ
ಸಕ್ಕರೆ -1/2 ಕೆಜಿ
ಏಲಕ್ಕಿ – 4
ಮಾಡುವ ವಿಧಾನ
ಮೊದಲಿಗೆ ಅಕ್ಕಿಯನ್ನು ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿ. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟನ್ನು ಜರಡಿ ಹಿಡಿದು ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಮತ್ತು ಬಿಸಿ ಮಾಡಿದ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಉಂಡೆ ಕಟ್ಟಿ. ತುಪ್ಪ ಕಡಿಮೆಯಾದರೆ ಇನ್ನೂ ಸ್ವಲ್ಪ ತುಪ್ಪ ಹಾಕಿ ಉಂಡೆ ಕಟ್ಟಿ.. ಈಗ ಅಕ್ಕಿಯ ಲಡ್ಡು ಸವಿಯಲು ಸಿದ್ಧ.
ಬಾಳೆಕಾಯಿ ಮಸಾಲಾ ಪರೋಟ
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು – 1ಕಪ್
ಓಂ ಕಾಳು – ಚಿಟಿಕೆಯಷ್ಟು
ಜೀರಿಗೆ ಪುಡಿ – 1/4 ಚಮಚ
ಎಣ್ಣೆ – 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ದೊಡ್ಡ ಬಾಳೆಕಾಯಿ – 2
ಆಲೂಗಡ್ಡೆ – 2
ಚಿಲ್ಲಿ ಫ್ಲೇಕ್ಸ್ – 1 ಚಮಚ
ಮೆಣಸಿನ ಪುಡಿ – 1/2 ಚಮಚ
ಅರಿಶಿನ ಪುಡಿ – 1/4 ಚಮಚ
ಗರಂ ಮಸಾಲಾ ಹುಡಿ – 1 ಚಮಚ
ಜೀರಾ ಹುಡಿ – 1/2 ಚಮಚ
ಚಾಟ್ ಮಸಾಲ ಹುಡಿ – 1/2 ಚಮಚ
ಬ್ಲಾಕ್ ಸಾಲ್ಟ್/ ಉಪ್ಪು
ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಪುದಿನ – ಸೊಪ್ಪು
ನಿಂಬೆರಸ – 1 ಚಮಚ
ಮಾಡುವ ವಿಧಾನ
ಮೊದಲಿಗೆ ಗೋಧಿ ಹಿಟ್ಟು, ಓಂ ಕಾಳು, ಜೀರಿಗೆ ಹುಡಿ, ಉಪ್ಪು, ಎಣ್ಣೆ, ಅಗತ್ಯವಿರುವಷ್ಟು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಅರ್ಧ ಗಂಟೆ ನೆನೆಯಲು ಬಿಡಿ.
ಬಾಳೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಬೇಯಿಸಿಟ್ಟುಕೊಳ್ಳಿ. ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಬೆಂದ ಬಾಳೆಕಾಯಿ, ಆಲೂಗಡ್ಡೆ ಸೇರಿಸಿ ಚೆನ್ನಾಗಿ ಮ್ಯಾಶ್ ಮಾಡಿ. ಅದಕ್ಕೆ ಚಿಲ್ಲಿ ಫ್ಲೇಕ್ಸ್, ಚಿಲ್ಲಿ ಪೌಡರ್, ಹಳದಿ, ಗರಂ ಮಸಾಲಾ ಪೌಡರ್, ಜೀರಾ ಪೌಡರ್, ಚಾಟ್ ಮಸಾಲ ಹುಡಿ, ಬ್ಲಾಕ್ ಸಾಲ್ಟ್ ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಪುದಿನ, ನಿಂಬೆರಸ ಸೇರಿಸಿ ಚೆನ್ನಾಗಿ ಕಲಸಿ.
ನಂತರ ಚಪಾತಿ ಹಿಟ್ಟಿನಲ್ಲಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಪೂರಿಯಂತೆ ಲಟ್ಟಿಸಿ. ಅದರೊಳಗೆ ಮಸಾಲೆಯನ್ನು ಇಟ್ಟು ಅದನ್ನು ಮಡಚಿ ಚಪಾತಿಯಂತೆ ಲಟ್ಟಿಸಿ. ಕಾದ ತವಾ ಮೇಲೆ ಎಣ್ಣೆ ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ. ಈಗ
ರುಚಿಯಾದ ಬಾಳೆಕಾಯಿ ಮಸಾಲಾ ಪರೋಟ ಸವಿಯಲು ಸಿದ್ಧವಾಗಿದೆ.
ಮಸಾಲೆ ಪೋಡಿ ಇಡ್ಲಿ
ಬೇಕಾಗುವ ಸಾಮಗ್ರಿಗಳು
ಉಳಿದ ಇಡ್ಲಿಗಳು
ಕೆಂಪು ಮೆಣಸು -5
ಕಡ್ಲೆಬೇಳೆ – 1/4 ಕಪ್
ಉದ್ದಿನಬೇಳೆ -1/4 ಕಪ್
ಅಕ್ಕಿ -1 ಚಮಚ
ಎಳ್ಳು -1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಒಂದು ಕಡಾಯಿ ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ. ನಂತರ ಕೆಂಪು ಮೆಣಸು, ಕಡ್ಲೆಬೇಳೆ, ಉದ್ದಿನಬೇಳೆ, ಅಕ್ಕಿ, ಎಳ್ಳು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಇದನ್ನು ತಣ್ಣಗಾಗಿಸಿ.
ಬಳಿಕ ಮಿಕ್ಸರ್ ಜಾರ್ ಗೆ ಇದನ್ನು ಹಾಕಿ, ಸ್ವಲ್ಪ ಇಂಗು ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಹುಡಿ ಮಾಡಿ.
ನಂತರ ತವಾ ಬಿಸಿ ಮಾಡಿ ಸ್ವಲ್ಪ ತುಪ್ಪ ಸವರಿ. ಇಡ್ಲಿಯ ಎರಡೂ ಬದಿಗಳನ್ನು ಅರ್ಧ ನಿಮಿಷ ಹುರಿಯಿರಿ. ನಂತರ ರುಬ್ಬಿದ ಪುಡಿಯನ್ನು ಸೇರಿಸಿ. ಇಡ್ಲಿಗೆ ಮಸಾಲೆ ಹುಡಿಯನ್ನು ಚೆನ್ನಾಗಿ ಬೆರೆಸಿ. ಈಗ ಮಸಾಲೆ ಪೋಡಿ ಇಡ್ಲಿ ಸವಿಯಲು ಸಿದ್ಧವಾಗಿದೆ. ಇದನ್ನು ಬಿಸಿಯಾಗಿ ಬೆಳಿಗ್ಗೆಯ ಬ್ರೇಕ್ ಫಾಸ್ಟ್ ಆಗಿ ಅಥವಾ ಸಂಜೆಯ ಸ್ಯಾಕ್ಸ್ ಆಗಿ ಸೇವಿಸಬಹುದು.