2 ರೀತಿಯಲ್ಲಿ ಬಾಳೆಹಣ್ಣಿನ ಪ್ಯಾನ್ ಕೇಕ್ ಮಾಡುವ ವಿಧಾನ..! without egg and with egg

1 min read

2 ರೀತಿಯಲ್ಲಿ ಬಾಳೆಹಣ್ಣಿನ ಪ್ಯಾನ್ ಕೇಕ್ ಮಾಡುವ ವಿಧಾನ..! without egg and with egg

ಬನಾನಾ ಪ್ಯಾನ್ ಕೇಕ್
ಬೇಕಾಗುವ ಪದಾರ್ಥಗಳು
ಸಕ್ಕರೆ 1 ಕಪ್
ಬಾಳೆಹಣ್ಣು 2
ಮೊಟ್ಟೆ 1
ಮೈದಾ ಹಿಟ್ಟು 1 ವರೆ ಕಪ್
ಹಾಲು ಅರ್ಧ ಕಪ್
ಏಲಕ್ಕಿ ಅಥವ ವೆನ್ನಿಲಾ ಎಸೆನ್ಸ್
ಬೆಣ್ಣೆ
ಜೇನುತುಪ್ಪ
ಬೇಕಿಂಗ್ ಸೋಡಾ

ಮೊಟ್ಟೆ ಹಾಕಿ ಮಾಡುವ ವಿಧಾನ
ಮೊದಲಿಗೆ ಒಂದು ಮಿಕ್ಸಿ ಜಾರ್ ನಲ್ಲಿ 2 ಬಾಳೆಹಣ್ನನ್ನ ಹಾಕಿ. ಅದಕ್ಕೆ ಅರ್ಧ ಕಪ್ ಅಥವ ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ. ಬಳಿಕ ಏಲಕ್ಕೆ ಚೆಚ್ಚಿ ಹಾಕಿ. ಆದ್ರೆ ಏಲಕ್ಕಿ ಹಾಕಿದರೆ ವೆನ್ನಿಲಾ ಎಸೆನ್ಸ್ ಹಾಕಬಾರದು. ಒಂದು ವೇಳೆ ವೆನಿಲಾ ಎಸೆನ್ಸ್ ಹಾಕಿದ್ರೆ ಏಲಕ್ಕಿ ಸೇರಿಸಬೇಡಿ. ಇದಕ್ಕೆ ಅರ್ಧ ಕಪ್ ಹಾಲು ಹಾಕಿ. ಇದೇ ಜಾರಿಗೆ 2 ಮೊಟ್ಟೆ ಹೊಡೆದು ಹಾಕಿ. ಈಗ ಈ ಮಿಶ್ರಣ ನುಣ್ಣಗಾಗುವರೆಗೂ ರುಬ್ಬಿ. ಬಳಿಕ ಒಂದು ಬೌಲ್ ಗೆ ಮೈದಾ ಹಿಟ್ಟು ಹಾಕಿ ಮೊದಲಿಗೆ 1 ಕಪ್ ಹಾಕಿ ಹಾಕಿ. ಇದಕ್ಕೆ ಚಿಟಕೆ ಅಡುಗೆ ಸೋಡಾ ಹಾಕಿ ಮೊದಲಿಗೆ ಕಲಿಸಿ. ನಂತರ ರುಬ್ಬಿದ ಮಿಶ್ರಣವನ್ನ ಇದಕ್ಕೆ ಸೇರಿಸಿ ಗಂಟು ಆಗದಂತೆ ಚೆನ್ನಾಗಿ ಸ್ಪೂನ್ ನ ಸಹಾಯದಿಂದ ಕಲಸಿ. ಈ ಮಿಶ್ರಣ ದೋಸೆ ಹಿಟ್ಟಿನ ಮಿಶ್ರಣದ ಹದಕ್ಕಿಂತ ಸ್ವಲ್ಪ ಗಟ್ಟಿಯಿರಬೇಕು. ಈಗ ಒಂದು ಪ್ಯಾನ್ ಕಾಯಲು ಸ್ಟವ್ ಮೇಲಿಡಿ. ಮೀಡಿಯಮ್ ಫ್ಲೋ ನಲ್ಲಿ ಪ್ಯಾನ್ ಕಾದ ನಂತರ, ಬೆಣ್ಣೆ ಅಥವಾ ತುಪ್ಪವನ್ನ ಪ್ಯಾನ್ ಮೇಲೆ ಸವರಿ. ಬಳಿಕ ಒಂದೊಂದೇ ಸೌಟ್ ನಲ್ಲಿ ಮಿಶ್ರಣವನ್ನ ಚಿಕ್ಕ ಚಿಕ್ಕ ದೋಸೆಗಳಂತೆ ಪ್ಯಾನ್ ಮೇಲೆ ಹಾಕಿ ಆದ್ರೆ ಅದರ ಮೇಲೆ ಸವರವುದಾಗಲಿ ಬಳೆಯುವುದಾಗಲಿ ಮಾಡದಿರಿ. ನೆನಪಿಡಿ ಸ್ವವ್ ನ ಫ್ಲೇಮ್ ತುಂಬ ಸಿಮ್ ಅಥವಾ ಮೀಡಿಯಮ್ ಆಗಿಯೇ ಇರಬೇಕು. ಪ್ಯಾನ್ ಕೇಕ್ ಒಂದು ಕಡೆ ಬೆಂದ ತಕ್ಷಣ ಅದರ ಮೇಲೆ ಚುಕ್ಕಿಗಳು ಕಾಣಿಸುತ್ತದೆ. ಇದಾದ ನಂತರ ಮತ್ತೊಂದು ಕಡೆ ತೆರುಗಿಸಿ ಬೇಯಿಸಿ. ಈಗ ಈ ಪ್ಯಾನ್ ಕೇಕ್ ಅನ್ನು ಸರ್ವಿಂಗ್ ಪ್ಲೇಟ್ ಗೆ ಹಾಕಿ ಬಿಸಿ ಇರುವಾಗಲೇ ಜೇನುತುಪ್ಪ ಒಂದು ಸ್ಪೂನ್, ಹಾಗೂ ಬೇಕಿದ್ರೆ ಬೆಣ್ಣೆಯನ್ನ ಅದರ ಮೇಲೆ ಹಾಕಿ. ಜೊತೆಗೆ ಸಕ್ಕರೆ ಪುಡಿಯಿಂದಲೂ ಗಾರ್ನಿಶ್ ಮಾಡಿ ಸವಿಯಬಹುದು. ಕೊನೆಯ ಸ್ಟೆಪ್ ಆಪ್ಷನಲ್.

ಮೊಟ್ಟೆ ಇಲ್ಲದೆ ಮಾಡುವ ವಿಧಾನ

ಮೊದಲಿಗೆ ಒಂದು ಮಿಕ್ಸಿ ಜಾರ್ ನಲ್ಲಿ 2 ಬಾಳೆಹಣ್ನನ್ನ ಹಾಕಿ. ಬಳಿಕ ಏಲಕ್ಕೆ ಚೆಚ್ಚಿ ಹಾಕಿ. ಆದ್ರೆ ಏಲಕ್ಕಿ ಹಾಕಿದರೆ ವೆನ್ನಿಲಾ ಎಸೆನ್ಸ್ ಹಾಕಬಾರದು. ಇದಕ್ಕೆ ಅರ್ಧ ಕಪ್ ಹಾಲು ಹಾಕಿ. ಈಗ ಈ ಮಿಶ್ರಣ ನುಣ್ಣಗಾಗುವರೆಗೂ ರುಬ್ಬಿ. ಈಗ ಒಂದು ಬೌಲ್ ಗೆ ಮೆಲ್ಟೆಡ್ ಬಟರ್ / ಬೆಣ್ಣೆ ಹಾಕಿ ಅದಕ್ಕೆ ಪುಡಿ ಮಾಡಿದ ಸಕ್ಕರೆಯನ್ನ ರುಚಿಗೆ ತಕ್ಕಷ್ಟು ಹಾಕಿ. ಬೇಕಿದ್ರೆ ಕಂಡೆನ್ಸಡ್ ಮಿಲ್ಕ್ ಅನ್ನು ಸಹ ಸಕ್ಕರೆ ಬದಲಾಗಿ ಉಪಯೋಗಿಸಬಹುದು. ಈಗ ಇದನ್ನ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನ ಹಾಗೂ ಮೊದಲು ರುಬ್ಬಿಟ್ಟುಕೊಂಡ ಮಿಶ್ರಣವನ್ನ ಒಂದು ಅಥವಾ 1 ವರೆ ಕಪ್ ಮೈದಾ ಜೊತೆಗೆ ಗಂಟು ಇಲ್ಲದ ರೀತಿಯಲ್ಲಿ ಒಟ್ಟಿಗೆ ಸೇರಿಸಿ ಕಲಸಿ ದೋಸೆ ಹಿಟ್ಟಿನ ಹದಕ್ಕೆ ತನ್ನಿ. ಈಗ ಇದಕ್ಕೆ ಚಿಟಕೆ ಅಡಿಗೆ ಸೋಡಾ ಸೇರಿಸಿ ಕಲಸಿ. ಬಳಿಕ ಪ್ಯಾನ್ ಬಿಸಿ ಮಾಡಿ ಹಿಂದೆನ ವಿದಾನದಲ್ಲಿ ಹೇಳಿದಂತೆಯೇ ಪ್ಯಾನ್ ಕೇಕ್ ತಯಾರಿಸಿ. ರುಚಿಕರ ಪ್ಯಾನ್ ಕೇಕ್ ನೀವೂ ಟ್ರೈ ಮಾಡಿ ಅಭಿಪ್ರಾಯ ತಿಳಿಸಿ.

ಆಲೂಗಡ್ಡೆ ಸಮೋಸ

ಗೋಧಿಹಿಟ್ಟಿನ ಎಗ್ ಲೆಸ್ ಚಾಕೊಲೇಟ್ ಕೇಕ್

ಗರಿಗರಿಯಾದ ಬೆಳ್ಳುಳ್ಳಿ ಮಂಡಕ್ಕಿ / ಹುರಿಯಕ್ಕಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd