Simple Suni
ಕೊನೆಯ ಹಂತದಲ್ಲಿ ಪ್ಲೇ ಆಫ್ ಪ್ರವೇಶಿಸಿದ್ದ ಆರ್‌ಸಿಬಿ ತಂಡ ಈ ಸಲವೂ ಐಪಿಎಲ್ ಟ್ರೋಫಿಯನ್ನ ಮುಡಿಗೇರಿಸಿಕೊಳ್ಳಲಿಲ್ಲ. ಈ ಮೂಲಕ ಈ ಬಾರಿಯಾದ್ರೂ ಕಪ್ ನಮ್ದೇ ಎನ್ನುತ್ತಿದ್ದ ಆರ್ ಸಿಬಿ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ.
ಆದರೆ ಅಭಿಮಾನಿಗಳಿಗೆ ಆರ್‌ಸಿಬಿ ಮೇಲಿನ ಅಭಿಮಾನ ಮಾತ್ರ ಕಡಿಮೆ ಆಗಿಲ್ಲ, ಆಗೋದೂ ಇಲ್ಲ. ಇತ್ತ ಸ್ಯಾಂಡಲ್ ವುಡ್ ನಿರ್ದೇಶಕ ಸಿಂಪಲ್ ಸುನಿ ಆರಂಭದಿಂದಲೂ ಆರ್‌ಸಿಬಿ ಪರವಾಗಿ ಬೆಂಬಲ ನೀಡುತ್ತಾ ಟ್ವೀಟ್ ಗಳನ್ನ ಮಾಡುತ್ತಾ ಬಂದಿದ್ದರು. ಇದೀಗ ಮತ್ತೊಂದು ಟ್ವೀಟ್ ಮೂಲಕ ಆರ್ ಸಿ ಬಿ ಸೋಲುಂಡ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
”ಸೋಲು ನಮಗೆ ಹೊಸತಲ್ಲ.. ಆದರೆ ಪ್ರತಿಸಲ ಸೋತಾಗಲು ಜೊತೆಗಿರುವ ಇಂತಹ “ಅಭಿಮಾನಿ”ಗಳನ್ನು ಬೇರೆಲ್ಲೂ ಕಂಡಿಲ್ಲ.. ಪ್ರತಿ #RCB ಅಭಿಮಾನಿಗಳಿಗೂ ನನ್ನ ಎದೆಯಾಳದ ವಂದನೆಗಳು. ಮತ್ತೇ ಬರೋಣ,, ಕಪ್ ಬಗ್ಗೆ ಗೊತ್ತಿಲ್ಲ ಆದರೆ “ಈ ಸಲ ಕಪ್ ನಮ್ಮದೇ” ಅನ್ನುವ ವಾಕ್ಯವಂತು ನಮ್ಮದೇ..”.
ಬದ್ಧ ವೈರಿಗಳ ಜೊತೆಗೆ ಭರ್ಜರಿ ಭೋಜನ ಸವಿದ ಕಮಲ್ : 232ನೇ ಟೈಟಲ್ ಟೀಸರ್..!
”ಬಲವಾದ ಫೀಲ್ಡಿಂಗ್ ಕೋಚ್ ತನ್ನಿ. ದುಬೆ, ಸುಂದರ್ ತರ ಆಟಗಾರರನ್ನು ಕರ್ನಾಟಕದಲ್ಲೂ ಹುಡುಕಿ. ಕೊಹ್ಲಿ, ಎಬಿಡಿ, ಚಾಹಲ್ ನಂತೆ 11 ಆಟಗಾರರ ಮೇಲು ವಿಶ್ವಾಸವಿರುವಂತ ಆಟಗಾರರನ್ನು ಆಯ್ಕೆ ಮಾಡಿ. ಬುದ್ಧಿ ಬಂದಾಗಿನಿಂದ ಬೆಂಗಳೂರನ್ನು ಪ್ರೀತಿಸಿದ್ದೀವಿ. ಗೆಲ್ಲದಿದ್ದರೂ ಗೆಲ್ಲುವಂತೆ ಆಡಿ. ಮತ್ತೇ ಬರ್ತೀವಿ “ಈ ಸಲ ಕಪ್ ನಮ್ದೇ ಅಂತ” ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
Simple Suni
13 ವರ್ಷದ ಪ್ರೀತಿ, ಗರ್ಭಪಾತ ಮಾಡಿಸಿದ ಕಿರಾತಕ, ಮದುವೆ ದಿನವೇ ವರ ಎಸ್ಪೇಪ್..!
ಲೈಂಗಿಕ ಕ್ರಿಯೆಗೆ ಒಪ್ಪದ ಅಪ್ರಾಪ್ತೆಗೆ ಬೆಂಕಿ ಹಚ್ಚಿದ ಕಿಡಿಗೇಡಿ
ಬಾ ಲೇ ಮಗನೇ ಎಂದು ತೋಳು ತಟ್ಟಿದ ಭೀಮಾನಾಯ್ಕ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel