ರಾಂಪುರ: ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನೇ ಜೂಜಾಟದಲ್ಲಿ ಪಣಕ್ಕೆ ಇಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೇ, ಸೋತ ನಂತರ ತನ್ನ ಪತ್ನಿ ಮೇಲೆ ತನ್ನ ಗೆಳೆಯರು ಲೈಂಗಿಕ ದೌರ್ಜನ್ಯ ಎಸಗಲು ಕೂಡ ಸಹಕಾರ ನೀಡಿದ್ದ ಎಂಬ ಆರೋಪ ಕೇಳಿ ಬಂದಿದೆ.
ಈತನ ಕೃತ್ಯ ಇಷ್ಟಕ್ಕೆ ನಿಂತಿಲ್ಲ. ಆತನ ಕಾರ್ಯದಿಂದ ಬೇಸತ್ತು ತವರಿಗೆ ಹೋಗಿದ್ದ ಹೆಂಡತಿಯನ್ನು ಮರಳಿ ಕರೆ ತರಲು ಹೋಗಿ ಬರಲು ನಿರಾಕರಿಸಿದಾಗ ಆಕೆಯ ಬೆರಳನ್ನೇ ಮುರಿದಿದ್ದಾನೆ.
ಉತ್ತರ ಪ್ರದೇಶದ ರಾಂಪುರದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ಕುರಿತು ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಕುಡಿತ ಹಾಗೂ ಜೂಜಾಟದ ದಾಸನಾಗಿದ್ದ ಈಕೆಯ ಪತಿ ತನ್ನ ಹೆಸರಿನಲ್ಲಿ ಇದ್ದ 7 ಎಕರೆ ಭೂಮಿಯನ್ನೂ ಜೂಜಾಟದಲ್ಲಿ ಕಳೆದುಕೊಂಡಿದ್ದ. ಪತ್ನಿ ಬಳಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆಗಳು ಹಾಗೂ ಚಿನ್ನಾಭರಣಗಳೂ ಜೂಜಿನಿಂದಾಗಿ ಹಾಳು ಮಾಡಿದ್ದ. ಈಗ ನನ್ನನ್ನೇ ಪಣಕ್ಕೆ ಇಟ್ಟಿದ್ದಾನೆ ಎಂದು ಪತ್ನಿ ದೂರು ಸಲ್ಲಿಸಿದ್ದಾರೆ.
ಹಿಂದೆಯೂ ಹಲವು ಬಾರಿ ಮಹಿಳೆ ದೂರು ನೀಡಿದ್ದಾರೆ. ಆದರೂ ತ ಬದಲಾಗಿಲ್ಲ. ಹೀಗಾಗಿ ಗಂಡನ ಹಿಡಿತದಿಂದ ತಪ್ಪಿಸಿಕೊಂಡು ತನ್ನ ತಾಯಿಯ ಮನೆಗೆ ಹೆಂಡತಿ ಪರಾರಿಯಾಗಿದ್ದಳು. ಅಲ್ಲಿಯೂ ಸ್ನೇಹಿತರೊಂದಿಗೆ ಬಂದಿದ್ದನೆ. ಹಲ್ಲೆ ನಡೆಸಿ ಬೆರಳು ಮುರಿದಿದ್ದ. ಬಟ್ಟೆ ಹರಿದು ಹಾಕಿದ್ದ. ಈ ವೇಳೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದಾಗ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸದ್ಯ ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.








