Singapore Open – ರೋಚಕ ಪಂದ್ಯದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಪಿ ವಿ ಸಿಂಧು …
ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಸಿಂಗಾಪುರ ಓಪನ್ ಸೂಪರ್ 500 ಸಿರೀಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಚೀನಾದ ಆಟಗಾರ್ತಿಯನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನ ಅಲಂಕರಿಸಿದ್ದಾರೆ. ಪೈನಲ್ ಪಂದ್ಯದಲ್ಲಿ ಪಿವಿ ಸಿಂಧು ಅವರು ಚೀನಾದ ವಾಂಗ್ ಜಿ ಯಿ ಅವರನ್ನು 21-9, 11-21, 21-15 ಸೆಟ್ಗಳಿಂದ ಮಣಿಸಿ ಗೆಲುವು ದಾಖಲಿಸಿದರು.
ಈ ವರ್ಷದಲ್ಲಿ ಪಿ ವಿ ಸಿಂಧುಗೆ ಇದು ಮೂರನೇ ಪ್ರಶಸ್ತಿ. ಈ ಹಿಂದೆ ಅವರು ಕೊರಿಯಾ ಓಪನ್ ಮತ್ತು ಸ್ವಿಸ್ ಓಪನ್ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದರು. ಆದರೆ ಮೊದಲ ಬಾರಿಗೆ ಸಿಂಧು ಸಿಂಗಾಪುರ್ ಓಪನ್ ಗೆದ್ದಿದ್ದಾರೆ. ಸಿಂಧು ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ನ ಸೈನಾ ಕವಾಕಮಿ ಅವರನ್ನು 21-15, 21-7 ಸೆಟ್ಗಳಿಂದ ಸೋಲಿಸಿ ಫೈನಲ್ ಗೆರಿದ್ದರು.
Delighted as our ace badminton player @Pvsindhu1 claims gold by winning first Super 500 Title of 2022 at the Singapore Open. Congratulations to her. The whole nation revels in your victory. Best wishes for future. #SingaporeOpen2022 #PVSindhu pic.twitter.com/4HGYVu6DKT
— Basavaraj S Bommai (@BSBommai) July 17, 2022
ರೋಚಕ ಪಂದ್ಯದಲ್ಲಿ ಗೆದ್ದ ಸಿಂಧು
ವಿಶ್ವದ 11ನೇ ಶ್ರೇಯಾಂಕಿತ ಆಟಗಾರ್ತಿ ವಾಂಗ್ ಜಿ ಯಿ ಅವರೊಂದಿಗೆ ಸಿಂಧು ಸಾಕಷ್ಟು ಹೋರಾಟ ನಡೆಸಿ ಕೊನೆಯಲ್ಲಿ ಗೆದ್ದ ಬೀಗಿದರು. ಪಂದ್ಯದ ಮೊದಲ ಸೆಟ್ ನಲ್ಲಿ ಸಿಂಧು 21-9 ಅಂತರದಿಂದ ನಿರಾಯಾಸವಾಗಿ ಗೆದ್ದಿದ್ದರು. ಎರಡನೇ ಸೆಟ್ ನಲ್ಲಿ ಚೀನಾದ ಆಟಗಾರ್ತಿ ತಿರುಗೇಟು ನೀಡಿ 21-11 ರಿಂದ ಎರಡನೇ ಸೆಟ್ ನ್ನ ತಮ್ಮದಾಗಿಸಿಕೊಂಡರು. ಆಗ ಪಂದ್ಯ ಟೈ ಆಗಿದ್ದು, ಮೂರನೇ ಸೆಟ್ ನಿರ್ಣಾಯಕವಾಗಿತ್ತು. ಅಂತಿಮ ಸೆಟ್ ನಲ್ಲಿ ಉಭಯ ಆಟಗಾರ್ತಿಯರ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದು ಕೊನೆಯಲ್ಲಿ ಸಿಂಧು 21-15ರ ಅಂತರದಿಂದ ಜಯ ಸಾಧಿಸಿದರು.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕದ ಭರವಸೆ
ಕಾಮನ್ವೆಲ್ತ್ ಗೇಮ್ಸ್ಗೂ ಮುನ್ನ ಸಿಂಧು ಮತ್ತೆ ಫಾರ್ಮ್ ಗೆ ಮರಳಿರುವುದು ಭಾರತಕ್ಕೆ ಖುಷಿ ತಂದಿದೆ. ಇದೀಗ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಸಿಂಧು ಅವರಿಂದ ಪದಕದ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ. ಸಿಂಧು ಈಗಾಗಲೇ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಹೊಂದಿದ್ದರು, ಆದರೆ ಸಿಂಗಾಪುರ್ ಓಪನ್ ಗೆದ್ದ ನಂತರ, ಭರವಸೆ ಮತ್ತಷ್ಟು ಹೆಚ್ಚಿದೆ.