Kodagu: ಏಕಕಾಲಕ್ಕೆ 6 ಜನರ ಅಂತ್ಯಸಂಕ್ಕಾರ ನೆರವೇರಿಸಿದ ಗ್ರಾಮಸ್ಥರು
1 min read
ಏಕಕಾಲಕ್ಕೆ 6 ಶವಗಳ ಅಂತ್ಯಸಂಕ್ಕಾರ ನೆರವೇರಿಸಿದ ಗ್ರಾಮಸ್ಥರು
ಕೊಡಗು: ಒಂದೇ ಸಲಕ್ಕೆ 6 ಶವಗಳ ಸಾಮೂಹಿಕ ಅಂತ್ಯಸಂಸ್ಕಾರ ಮಾಡಿರುವ ಮನಕಲಕುವ ಪ್ರಸಂಗ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮದಲ್ಲಿ ಕಂಡುಬಂದಿದೆ.
ಒಂದೇ ಊರಿನ ಅನಿಲ್ (44), ಸಂತೋಷ್(42) ಬಾಬು(48), ರಾಜೇಶ್(40), ದಯಾನಂದ್(42), ವಿನೀತ್ (37) ಮೃತ ದುರ್ದೈವಿಗಳು. ಇವರೊಂದಿಗೆ ಕೀರ್ತನ(22), ಏಂಜಲ್ (14) ಹಾಗೂ ಫಿಲಿಪ್ (65) ಒಟ್ಟು 9 ಜನರು ಸ್ನೇಹಿತ ಸದಾನಂದರ ಮದುವೆಗೆ ಹುಣಸೂರಿಗೆ ಹೋಗಿದ್ದರು.
ಮದುವೆ ಮುಗಿಸಿಕೊಂಡು ತಮ್ಮೂರಿಗೆ ವಾಪಸ್ ಆಗುತ್ತಿದ್ದಾಗ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ಅನಿಲ್, ಸಂತೋಷ್ ಬಾಬು, ರಾಜೇಶ್, ದಯಾನಂದ್, ವಿನೀತ್ ಮೃತಪಟ್ಟಿದ್ದಾರೆ. ಉಳಿದ ಕೀರ್ತನ, ಏಂಜಲ್ ಹಾಗೂ ಫಿಲಿಪ್ ಮೂವರಿಗೆ ಗಾಯಗಳಾಗಿದ್ದು, ಸ್ಥಳೀಯರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು.
ಇಂದು ಇಡೀ ಗ್ರಾಮದ ಜನರು ಸೇರಿ 6 ಶವಗಳನ್ನು ಅಂತ್ಯಸಂಸ್ಕಾರ ಮಾಡಿದರು. ಇಡೀ ಗ್ರಾಮವನ್ನು ಬಂದ್ ಮಾಡಿ 6 ಶವಗಳ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.