ಐಪಿಎಲ್ 2021- ಈ ಮೂರು ಫ್ರಾಂಚೈಸಿಗಳಿಗೆ ಶಾಕ್ ನೀಡಿದ ದಕ್ಷಿಣ ಆಫ್ರಿಕಾ ಆಟಗಾರರು..!

1 min read

ಐಪಿಎಲ್ 2021- ಈ ಮೂರು ಫ್ರಾಂಚೈಸಿಗಳಿಗೆ ಶಾಕ್ ನೀಡಿದ ದಕ್ಷಿಣ ಆಫ್ರಿಕಾ ಆಟಗಾರರು..!

IPL Auctionಐಪಿಎಲ್ ನಲ್ಲಿ ಆಡುವುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾರರ ಕನಸು. ಪ್ರತಿಭೆ ಸಾಮಥ್ರ್ಯ ಪ್ರದರ್ಶಿಸಲು ಸೂಕ್ತ ವೇದಿಕೆ ಒಂದು ಕಡೆಯಾದ್ರೆ, ಹೆಚ್ಚು ಸಂಭಾವಣೆ ಸಿಗುವಂತಹ ಟೂರ್ನಿಯೂ ಹೌದು.
ಎಲ್ಲರಿಗೂ ತಿಳಿದಿರುವ ಹಾಗೇ ಐಪಿಎಲ್ ನಲ್ಲಿ ಕೋಟಿ ಕೋಟಿ ಲೆಕ್ಕಚಾರದಲ್ಲಿ ದುಡ್ಡು ಹರಿಯುತ್ತಿದೆ. ಹೀಗಾಗಿ ಐಪಿಎಲ್ ಟೂರ್ನಿಯನ್ನು ಯಾರು ಕೂಡ ಮಿಸ್ ಮಾಡಿಕೊಳ್ಳಲು ರೆಡಿ ಇಲ್ಲ.
ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ದಕ್ಷಿಣ ಆಫ್ರಿಕಾದ ಐದು ಆಟಗಾರರು ಮತ್ತು ಬಾಂಗ್ಲಾ ದೇಶದ ಒಬ್ಬ ಆಟಗಾರ ಆರಂಭದ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
ಯಾಕಂದ್ರೆ ಈ ಆರು ಮಂದಿ ಆಟಗಾರರಿಗೆ ಐಪಿಎಲ್ ಗಿಂತ ದೇಶ ಮುಖ್ಯವಾಗಿದೆ. ಇದು ಸಹಜ ಕೂಡ. ಐಪಿಎಲ್ ನಲ್ಲಿ ದುಡ್ಡು ಬಂದ್ರೂ ದೇಶದ ಪರ ಆಡುವ ಹೆಮ್ಮೆ ಗೌರವ ಇಲ್ಲಿ ಸಿಗಲ್ಲ. ಹೀಗಾಗಿ ಈ ಆರು ಮಂದಿ ಆಟಗಾರರು ರಾಷ್ಟ್ರೀಯ ತಂಡದ ಪರ ಆಡಿ ಆನಂತರ ತಮ್ಮ ಫ್ರಾಂಚೈಸಿಗಳನ್ನು ಸೇರಿಕೊಳ್ಳಲಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ ಏಪ್ರಿಲ್ 2ರಿಂದ ಏಪ್ರಿಲ್ 16ರವರೆಗೆ ತವರಿನಲ್ಲಿ ಸರಣಿ ನಡೆಯಲಿದೆ. ಹೀಗಾಗಿ ಏಪ್ರಿಲ್ 17ರ ನಂತರ ಈ ಐದು ಮಂದಿ ಆಟಗಾರರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ತಂಡಗಳನ್ನು ಸೇರಿಕೊಳ್ಳುತ್ತಾರೆ.
ಮುಂಬೈ ಇಂಡಿಯನ್ಸ್ ತಂಡದ ಕ್ವಿಂಟನ್ ಡಿಕಾಕ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಾಗಿಸೊ ರಬಾಡ ಮತ್ತು ಆನ್ರಿಚ್ ನೊರ್ಟೆಜೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫಾಪ್ ಡು ಪ್ಲೇಸಸ್, ಲುಂಗಿ ಎನ್‍ಗಿಡಿ, ಸನ್ ರೈಸರ್ಸ್ ಹೈದ್ರಬಾದ್ ತಂಡದ ಮುಸ್ತಾಫಿರ್ ರಹಮಾನ್ ಅವರು ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

#Mustafizur Rahman #Lungi Ngidi #Faf du Plessiss #Anrich Nortje #Kagiso Rabada #Quinton de Kock #ipl2021 @csk #srh #mumbaiindians #delhicapitals #saakshatvsports

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd