17 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ
ಉತ್ತರ ಪ್ರದೇಶದ ನೋಯ್ಡಾದಲ್ಲಿ ಘಟನೆ
ಇ-ರಿಕ್ಷಾ ಚಾಲಕನಿಗೆ ಥಳಿಸಿದ ಮಹಿಳೆ
ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆಯಿಂದ ಕೃತ್ಯ
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಉತ್ತರ ಪ್ರದೇಶ : ಕಾರಿಗೆ ಇ ರಿಕ್ಷಾ ತಾಕಿದ ಕಾರಣ ಮಹಿಳೆಯೊಬ್ಬರು ರಿಕ್ಷಾ ಚಾಲಕನಿಗೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಅದಲ್ಲದೆ, ರಿಕ್ಷಾ ಚಾಲಕನ ಮೊಬೈಲ್ ಹಾಗೂ ಹಣವನ್ನೂ ಮಹಿಳೆ ಕಿತ್ತುಕೊಂಡಿದ್ದಾಳೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಹಿಳೆಯ ವರ್ತನೆಗೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇ-ರಿಕ್ಷಾ ಚಾಲಕ ಮಾಡಿದ್ದು ತಪ್ಪಾದರೂ, ಅದನ್ನು ನೋಡಿಕೊಳ್ಳಲು ಪೊಲೀಸ್ ವ್ಯವಸ್ಥೆ ಅದರ ಬದಲು ನಡುರಸ್ತೆಯಲ್ಲಿಯೇ ಆತನ ಕೆನ್ನೆಗೆ ಹೊಡೆದಿರುವುದು ಅಮಾನವೀಯ ಎಂದು ಕಾಮೆಂಟ್ ಮಾಡಿದ್ದಾರೆ.
ಅಂದಾಜು 90 ನಿಮಿಷಗಳ ಅಂತರದಲ್ಲಿ 17 ಬಾರಿ ಚಾಲಕನ ಕೆನ್ನೆಗೆ ಮಗಹಿಳೆ ಬಾರಿಸಿದ್ದಾಳೆ.
ಇ-ರಿಕ್ಷಾ ಚಾಲಕನಿಗೆ ಈ ರೀತಿ ಕಪಾಳಮೋಕ್ಷ ಮಾಡಿದ ಮಹಿಳೆ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ ಎಂದು ಹೇಳಲಾಗುತ್ತಿದೆ.