ಮೈಸೂರ: ಲೋಕಸಭೆಯಲ್ಲಿ ಸ್ಮೋಕ್ ಬಾಂಬ್ (Smoke Bomb) ಎಸೆದಿದ್ದ ಮನೋರಂಜನ್ (Manoranjan) ಮೈಸೂರು (Mysuru) ಮೂಲದವನಾಗಿದ್ದರೂ ಸ್ನೇಹಿತರ ಸಂಪರ್ಕವನ್ನೇ ಕಳೆದುಕೊಂಡಿದ್ದ ಎನ್ನಲಾಗಿದೆ.
ಮನೋರಂಜನ್ ಮೈಸೂರಿನ ಎಲ್ಲಾ ಸ್ನೇಹಿತರ ಸಂಪರ್ಕ ಕಳೆದುಕೊಂಡಿದ್ದ. ಈತ ಬೆಂಗಳೂರಿನಲ್ಲಿಯೇ ನೆಟ್ ವರ್ಕ್ ಇಟ್ಟುಕೊಂಡಿದ್ದ. ಹೀಗಾಗಿ ಪೊಲೀಸರು ಬೆಂಗಳೂರಿನಲ್ಲಿ ಅವನ ವಾಸಸ್ಥಳದ ಪರಿಶೀಲನೆಗೆ ತೆರಳಿದ್ದಾರೆ.
ಮನೋರಂಜನ್ ಹೆಸರಿನಲ್ಲಿ ಯಾವುದೇ ಅಧಿಕೃತವಾಧ ಸೋಷಿಯಲ್ ಮೀಡಿಯಾ ಖಾತೆ ಇಲ್ಲ ಎನ್ನಲಾಗಿದ್ದು, ಮನೋರಂಜನ್‌ಗೆ ಉತ್ತರ ಭಾರತದವರ ಪರಿಚಯ ಹೇಗಾಯಿತು ಎಂಬುದೇ ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಆತ ನಕಲಿ ಅಕೌಂಟ್ ಹೊಂದಿರುವ ಸಾಧ್ಯತೆ ಇದ್ದು, ವ್ಯವಸ್ಥಿತ ಪ್ಲ್ಯಾನ್ ಮಾಡಿಯೇ ಸಂಸತ್ ಭವನಕ್ಕೆ ನುಗ್ಗಿರುವ ಶಂಕೆ ವ್ಯಕ್ತವಾಗುತ್ತಿದೆ.