ದೆಹಲಿ: ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ಶುರುವಾಗಿದ್ದು, ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ರಾಹುಲ್ ಗಾಂಧಿ ಅವರಿಗೆ ಸಚಿವೆ ಸ್ಮೃತಿ ಇರಾನಿ ಸವಾಲು ಹಾಕಿದ್ದಾರೆ.
ವೈಯನಾಡಿನ ಹಾಲಿ ಸಂಸದ ರಾಹುಲ್ ಗಾಂಧಿ ಅವರು ಅಮೇಠಿ ಜನರಿಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಅಮೇಠಿ ಸಂಕಷ್ಟಕ್ಕೆ ಸಿಲುಕಿದೆ. ರಾಮ್ ಲಲ್ಲಾ ಪ್ರತಿಷ್ಠಾಪನೆಯ ಆಹ್ವಾನವನ್ನು ರಾಹುಲ್ ಮತ್ತು ಅವರ ಕುಟುಂಬ ತಿರಸ್ಕರಿಸಿದೆ.
ನ್ಯಾಯ ಯಾತ್ರೆಯ ಬೆಂಗಾವಲು ಪಡೆ ಪಟ್ಟಣಕ್ಕೆ ಆಗಮಿಸಿದಾಗ ಅದನ್ನು ಖಾಲಿ ಬೀದಿಗಳಲ್ಲಿ ಸ್ವಾಗತಿಸಿದ್ದರಿಂದ ಅಮೇಠಿಯ ಜನರು ರಾಹುಲ್ ಗಾಂಧಿಯವರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಕೋಪಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೃಂಗಸಭೆಯಲ್ಲಿ ಅಮೇಠಿಗೆ 6523 ಕೋಟಿ ರೂ. ಬಂಡವಾಳ ಬಂದಿದೆ. ಇಂದು ಅವರಿಗೆ ಖಾಲಿ ಕುರ್ಚಿಗಳು ಸ್ವಾಗತಿಸಿವೆ. ನಾನು ಅಮೇಠಿಯಲ್ಲಿ ಅನೇಕ ಜನರ ಬೆಂಬಲ ಹೊಂದಿದ್ದ ಅಭ್ಯರ್ಥಿ ವಿರುದ್ಧ ಹೋರಾಟ ಮಾಡಿದ್ದೆ. ನನಗೂ ಗಾಂಧಿ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುವುದನ್ನು ಖಾಲಿ ಬೀದಿಗಳು ತೋರಿಸುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ 15 ರಾಜ್ಯಗಳಲ್ಲಿ ಮಣಿಪುರದಿಂದ ಮುಂಬೈಗೆ ಭಾರತ್ ಜೋಡೋ ಯಾತ್ರೆಯ ಎರಡನೇ ಆವೃತ್ತಿಯನ್ನು ಈಗಾಗಲೇ ರಾಹುಲ್ ಆರಂಭಿಸಿದ್ದಾರೆ.