ಬೀಜಿಂಗ್ : ಇಡೀ ವಿಶ್ವಕ್ಕೆ ಮಾರಣಾಂತಿಕ ಕೊರೊನಾ ಸೋಂಕನ್ನು ಹಬ್ಬಿಸಿ ಸಹಜ ಸ್ಥಿತಿಯತ್ತ ಮರಳುತ್ತಿರುವ ಚೀನಾದಲ್ಲಿ ಶಾಲಾ-ಕಾಲೇಜುಗಳೂ ಪುನರಾರಂಭಗೊಂಡಿವೆ. ಜತೆಗೆ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದಕೊಳ್ಳಲು ವಿಭಿನ್ನ ವಿಧಾನವನ್ನು ಪಾಲಿಸುತ್ತಿದೆ. ಸುಮಾರು ಮೂರು ತಿಂಗಳ ನಂತರ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೋಷಿಯಲ್ ಡಿಸ್ಟಾನ್ಸ್ ಟೋಪಿಯನ್ನು ಮಕ್ಕಳಿಗೆ ನೀಡಲಾಗಿದೆ. ಒಂದು ಮೀಟರ್ ಅಂತರವಿರುವಂತೆ 2 ಕೋಲುಗಳ ಸಹಾಯದಿಂದ ಈ ಟೋಪಿಯನ್ನು ತಯಾರಿಸಿದ್ದು, ಮಕ್ಕಳೆಲ್ಲಾ ಒಟ್ಟಿಗೆ ಒಂದೆಡೆ ಸೇರಿದಾಗ ಸಾಮಾಜಿಕ ಅಂತರದ ಬಗ್ಗೆ ಅವರಿಗೆ ತಿಳಿ ಹೇಳುವುದು ಕಷ್ಟ ಎನ್ನುವ ಕಾರಣಕ್ಕೆ ಈ ಉಪಾಯ ಮಾಡಲಾಗಿದೆ.
ಈ ವಿಧಾನವನ್ನು ಹ್ಯಾಂಗ್‌ಝೌ ಎಂಬ ಪ್ರಾಂತ್ಯದ ಯಾಂಗ್‌ಜೆಂಗ್ ಪ್ರಾಥಮಿಕ ಶಾಲೆ ಅನ್ವೇಷಣೆ ಮಾಡಿದ್ದು, ನಿಯಮವನ್ನು ಕಠಿಣವಾಗಿ ಜಾರಿಗೊಳಿಸುವತ್ತ ಕಾರ್ಯಾಚರಿಸುತ್ತಿದೆ. ಮಕ್ಕಳೆಲ್ಲಾ ತಲೆಯ ಮೇಲೊಂದು ಹೆಲ್ಮೆಟ್ ರೀತಿಯ ಟೋಪಿ ಧರಿಸಿ ಹೋಗುತ್ತಿರುವ ವಿಡಿಯೋ ಚೀನಾದೆಲ್ಲಡೆ ವೈರಲ್ ಆಗಿದೆ.