ಸಾಮಾಜಿಕ ಜಾಲತಾಣ ಆಮ್ಲಜನಕ..!?

1 min read
Social Media Saaksha Tv

ಸಾಮಾಜಿಕ ಜಾಲತಾಣ ಆಮ್ಲಜನಕ..!? Saaksha Tv

ಸಾಮಾಜಿಕ ಜಾಲತಾಣ ಜೀವನಕ್ಕೆ ಆಮ್ಲಜನಕ ಇದ್ದ ಹಾಗೆಯೇ? ಈ ಪ್ರಶ್ನೆಗೆ ಹೌದು ಮತ್ತು ಇಲ್ಲ ಎಂಬ ಎರಡು ಉತ್ತರ ನೀಡಬೇಕಾಗುತ್ತದೆ. ಕಾರಣ ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣ ಬಹು ಮುಖ್ಯ ಪಾತ್ರ ವಹಿಸುತ್ತದೆ. ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿದೆ. ಒಂದು ರೀತಿ ಊಟದಲ್ಲಿ ಉಪ್ಪಿನಕಾಯಿ ಇದ್ದ ಹಾಗೆ, ಆದರೆ ಕೆಲವೊಂದು ಸಲ ಅದೆ ಊಟವಾಗಿ ಬಿಡುತ್ತದೆ. ಆಮ್ಲಜನಕ ಇಲ್ಲದಿದ್ದರೆ ನಮಗೆ ಹೇಗೆ ಬದುಕಲು ಅಸಾಧ್ಯವೊ ಹಾಗೆ ಸಾಮಾಜಿಕ ಜಾಲತಾಣ ಇಲ್ಲದಿದ್ದರೆ ಬದುಕು ಅಸಾಧ್ಯ ಅನ್ನೊ ಮಟ್ಟಿಗೆ ಇರುವ ಕೆಲವೊಂದು ವರ್ಗವನ್ನು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾತಾಣಗಳಲ್ಲಿ ಸಕ್ರಿಯವಾಗಿ ಇರದ ವ್ಯಕ್ತಿಯನ್ನು ಕಾಣಲು ಅಸಾಧ್ಯ ಎನ್ನುವ ಮಟ್ಟಿಗೆ ನಾವು ಬಂದು ತಲುಪಿದ್ದೇವೆ. ಒಬ್ಬ ವ್ಯಕ್ತಿ ಕಡೆಪಕ್ಷ ವಾಟ್ಸಪ್‌ನ್ನಾದರು ಉಪಯೋಗಿಸುತ್ತಿರುತ್ತಾನೆ.

ನಾವು ಪೇಸ್‌ಬುಕ್, ಇನ್‌ಸ್ಟಾಗ್ರಮ್‌ನ್ನು ನೋಡಿದಾಗ ಅದರಲ್ಲಿ ಜಗತ್ತಿನ ಎಲ್ಲ ಮಾಹಿತಿಗಳು ನಮಗೆ ದೊರೆಯುತ್ತವೆ. ಕೆಲವೊಂದು ಸಲ ಇದರಲ್ಲಿ ಬರುವ ವಿಷಯಗಳು ಸತ್ಯ ಎಂಬ ಭ್ರಮೆಗೆ ಒಳಗಾಗಿರುತ್ತೇವೆ. ಅದು ಕೆಲವೊಂದು ಸಲ ಸತ್ಯವಾಗಬಹು ಅಥವಾ ಸುಳ್ಳು ವಾಗಿರಬಹುದು. ಹೇಗೆಂದರೆ ಪ್ರಸಿದ್ಧ ವ್ಯಕ್ತಿಗಳ ಚಿತ್ರ, ಹೆಸರನ್ನು ಹಾಕಿ ಅವರ ಕುರಿತು ನಿಮಗೆ ತಿಳಿಯದ ಮಾಹಿತಿ ಎಂಬ ಪೋಸ್ಟ್ಗಳನ್ನು ನಾವು ನೋಡಿದ್ದೇವೆ. ಇದು ಕೆವೊಂದು ಸಾರಿ ಸತ್ಯವಾಗಿರಬಹುದು ಅಥವಾ ಮಿಥ್ಯವಾಗಿರಬಹುದು. ಇದು ಕೆಲವೊಬ್ಬರಿಗೆ ವೃತ್ತಿಯಾಗಿರುತ್ತದೆ, ಈ ತರಹದ ಸುದ್ಧಿಗಳನ್ನು ಹಬ್ಬಿಸೊದು ಇದೆ ಅವರಿಗೆ ಆಮ್ಲಜನಕವಾಗಿದೆ. ಇನ್ನೂ ಯುಟ್ಯೂಬ್‌ನ್ನು ತೆಗೆದುಕೊಂಡರೆ ಸಾಕಷ್ಟು ಚಾನಲ್‌ಗಳನ್ನು ನಾವು ನೋಡಬಹುದು, ಅದರಲ್ಲಿ ಲೈಕ್, ಸಬ್ಸೆ÷್ಕçöÊಬ್ ಮಾಡುವುದರಿಂದ ಇಂತಿಷ್ಟು ಸಬ್ಸೆ÷್ಕçöÊಬ್ ಆದರೆ ಹಣವನ್ನು ನೀಡುತ್ತಾರೆ. ಇದನ್ನು ವೃತ್ತಿಯಾಗಿಸಿಕೊಂಡವರು ಸಾಕಷ್ಟು ಜನರ ಪಾಲಿಗೆ ಇದು ಆಮ್ಲಜನಕ. ಇನ್ನೂ ವೆಬ್‌ಪೋರ್ಟಲ್, ಬ್ಲಾಗ್‌ಗಳು ಕೂಡ ನಾವು ಕಾಣಬಹದು ಇದು ಕೂಡ ಆಮ್ಲಜನಕವೇ!..

Social Media Saaksha tv

ಇನ್ನೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ನೋಡಿದರೆ ಆನ್‌ಲೈನ್ ಜರ್ನಲಿಸಂ/ ಸೋಶಿಯಲ್ ಮಿಡಿಯಾ ಫ್ಲಾಟ್‌ಫಾರಂ ಎಂಬ ಹೆಸರುಗಳನ್ನು ನೋಡಬಹದು. ಪತ್ರಿಕೆಗಳು ಮನೆ ಮನೆಗೆ ತಲುಪುವುದಲ್ಲದೆ ಆನ್‌ಲೈನ್‌ನಲ್ಲಿಯು ಲಭ್ಯವಾಗುತ್ತದೆ. ಮನೆಗೆ ಬರುವ ಮುಂಚೆ ನಮ್ಮ ಕೈಯಲ್ಲಿ ಪತ್ರಿಕೆ ಬಂದಿರುತ್ತದೆ ಆನ್‌ಲೈನ್‌ನಲ್ಲಿ. ಇದು ಕೂಡ ಸ್ವಲ್ಪ ಮಟ್ಟಿಗೆ ಆಮ್ಲಜನಕ, ಮತ್ತು ನ್ಯೂಸ್ ಚಾನಲ್, ರೇಡಿಯೋಗಳು ಕೂಡ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸುವುದಾದರೆ ಪತ್ರಿಕೆಗಳು ತಮ್ಮ ಪತ್ರಿಕೆಯ ಹೆಸರಿನ ಪೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟ್‌ರ್ ಖಾತೆಯನ್ನು ಹೊಂದಿವೆ. ಇದರಿಂದ ಮರುದಿನ ಪತ್ರಿಕೆಯಲ್ಲಿ ಬರಬೇಕಾದ ಸುದ್ದಿ ಇಂದೆ ಸಾಮಾಜಿಕ ಜಾಲತಾಣದಲ್ಲಿ ಅವರ ಪೇಜ್‌ನಲ್ಲಿ ಕಾಣಬಹುದು. ಇದು ಕೂಡ ಅವರಿಗೆ ಲಾಭದಾಯಕವಾಗಿದೆ.

ಮಾಧ್ಯಮ ಕ್ಷೇತ್ರಕ್ಕೆ ಬಂದರೆ ಎಲ್ಲ ತರಹದ ಮಾಧ್ಯಮ ಉದಾ: ನ್ಯೂಸ್ ಚಾನಲ್ಸ್, ಮನರಂಜನಾ ಜಾನಲ್‌ಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾತೆಗಳನ್ನು ಹೊಂದಿವೆ. ಯುಟ್ಯುಬ್‌ನಲ್ಲಿ ನ್ಯೂಸ್ ಚಾನಲ್‌ಗಳು ತಮ್ಮ ಚಾನಲ್‌ನ ಎಲ್ಲ ಕಾರ್ಯಕ್ರಮಗಳು ಲೈವ್ ಆಗಿ ಬರುತ್ತವೆ. ಇದರಿಂದ ಟಿ.ಆರ್.ಪಿ ನೋಡುಗರ ಸಂಖ್ಯೆ ಹೆಚ್ಚಿಸಿಕೊಂಡು ಸಬ್‌ಸ್ಕೆçöÊಬ್ ಹೆಚ್ಚಾಗಿ ಹಣಗಳಿಸಬಹುದು. ಸದ್ಯ ನ್ಯೂಸ್ ೧sಣ  ಚಾನಲ್ ತನ್ನ ಕಾರ್ಯಾರಂಭ ಮಾಡಿ ಸಧ್ಯಕ್ಕೆ ಟಿವಿ ಮಾಧ್ಯಮವಾಗಿ ಬೆಳೆದು ನಿಲ್ಲುವಷ್ಟು ಸಾಮರ್ಥ್ಯ ಹೊಂದಿದೆ. ಇದು ನ್ಯೂಸ್ ೧sಣ ನಂತಹ ಚನಲ್‌ಗಳಿಗೆ ಆಮ್ಲಜನಕವಾಗಿ ಪರಿಣಮಿಸಿದೆ. ಇನ್ನು ಮನರಂಜನಾ ಚಾನೆಲ್‌ಗಳು ಸಮಾಜಿಕ ಜಾಲತಾಣಗಳಲ್ಲಿ ಸಣ್ಣ ಸಣ್ಣ ತುಣುಕಗಳಾಗಿ ತಮ್ಮ ಕಾರ್ಯಕ್ರಮಗಳನ್ನು ಹಾಕುವುದರಿಂದ ತಮ್ಮ ಚಾನಲ್‌ನ್ನು ನೋಡುವರ ಸಂಖ್ಯೆಯಲ್ಲಿ ಏರಿಕೆ ಕಾಣಬಹುದು.

ಜಾಹೀರಾತು ಕ್ಷೇತ್ರದಲ್ಲಂತು ಸಾಮಾಜಿಕ ಜಾಲತಾಣ ಆಮ್ಲಜನಕವಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಯಾಕೆಂದರೆ ಸದಾ ಸಾಮಜಿಕ ಜಾಲತಾಣದಲ್ಲಿ ಇರುವ ಜಗತ್ತು, ಸ್ವಲ್ಪ ಮಟ್ಟಿಗೆ ಟಿವಿ, ಪತ್ರಿಕೆಗಳನ್ನು ನೂಡುವದು ಕಡಿಮೆಯಾಗಿದೆ ಎನ್ನಬಹುದು. ಇಲ್ಲಿ ಜಾಹಿರಾತು ನೀಡಿದರೆ ಹೆಚ್ಚಿನ ಜನರಿಗೆ ತಲಪುತ್ತದೆ ಎಂಬುವುದ ಜಾಹೀರಾತು ನೀಡುವವರಿಗೆ ಖಡಾಖಂಡಿತವಾಗಿ ಗೊತ್ತಿರುತ್ತದೆ, ಮತ್ತು ಯುವಜನತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ಸಾಧ್ಯವಾಗುತ್ತದೆ ಇದರಿಂದ ತಮ್ಮ ಪ್ರೊಡೆಕ್ಟಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ ಲೆಕ್ಕಾಚಾರ ಇದು ಜಾಹಿರಾತು ಕಂಪನಿಗಳಿಗೆ ಒಂದು ರೀತಿ ಆಮ್ಲಜನಕವೆ ಸರಿ. ಮತ್ತು ಆನ್‌ಲೈನ್ ಶಾಪಿಂಗ್ ಮಾಡಲು ಕೂಡ ಇದು ಸಹಾಯಕಾರಿಯಾಗಿದೆ.

ಇನ್ನೊಂದು ಆಯಾಮದ ಪ್ರಕಾರ ನೋಡಿದರೆ ವ್ಯಕ್ತಿಯ ಬೆಳವಣಿಗೆಗು ಇದು ಆಮ್ಲಜನಕವಾಗಿದೆ. ಉದಾ: ಕೆಲವು ವರ್ಷಗಳ ಹಿಂದೆ ಅಂದರೆ ಇತ್ತೀಚಿಗೆ ೨-೩ ವರ್ಷಗಳ ಹಿಂದೆ ಹಾವೇರಿ ಜಿಲ್ಲೆಯ ಕುರಿÀಗಾಯಿ ಹುಡುಗ ಹನುಮಂತಪ್ಪ ಯಾರೆಂಬುವುದು ನಮಗೆ ಅರಿವಿರಲಿಲ್ಲ ಆದರೆ ಅವನು ಒಂದೆ ಒಂದು ಹಾಡನ್ನು ಹಾಡಿ ಸಾಮಜಿಕ ಜಾಲತಾಣದಲ್ಲಿ ಅನಾವರಣ ಮಾಡಿದನಷ್ಟೆ ಅವನ ನಸಿಬ್ ಬದಲಾಯಿತು. ಸರಿಗಮಪ ಎಂಬ ಜೀ ಕನ್ನಡದ ದೊಡ್ಡ ಕಾರ್ಯಕ್ರಮದಲ್ಲಿ ಮಿಂಚಿ, ಜಗತ ಪ್ರಸಿದ್ಧಿಯಾದ. ಇವನು ಅಷ್ಟೆ ಅಲ್ಲದೆ ಇತ್ತೀಚಿಗೆ ಬ್ಯಾನ ಆದ ಟಿಕ್ ಟಾಕನಲ್ಲಿ ಸಾಕಷ್ಟು ಜನರು ತಮ್ಮ ಕಲಾ ಕೌಶಲ್ಯವನ್ನು ಮೆರೆದು ಪ್ರಸಿದ್ಧಿಯಾದದನ್ನು ಕಾಣಬಹದು. ಉದಾ: ಸ್ಕೆಂಡಿ ಮೆನ್, ಬಸು ಹಿರೇಮಠ, ಸೋನು ಶ್ರೀನಿವಾಸಗೌಡ ಹೀಗೆ ಹಲವಾರು ಜನ ಯುವಕರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಷ್ಟು ಬೆಳದಿದ್ದಾರೆ. ಮತ್ತು ಶೋಶಿಯಲ್ ಮೀಡಿಯಾ ಪ್ಲೆಟ್‌ಫಾರಂ ಎಂಬ ಹೊಸ ವೇದಿಕೆ ಸಜ್ಜಾಗಿ ಎಲ್ಲ ರಂಗದ ಸಾಕಷ್ಟು ಪ್ರತಿಭೆಗಳಿಗೆ ಇದು ಬೆಳಕಾಗಿದೆ.

ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣವು ನ್ಯೂಸ್, ಮನರಂಜನೆ, ಜಾಹಿರಾತು ,ಮತ್ತು ಪತ್ರಿಕೋದ್ಯಮ ಎಲ್ಲಕ್ಷೇತ್ರಗಳಲ್ಲು ತನ್ನ ಛಾಪನ್ನು ಮೂಡಿಸಿದೆ. ಇದು ಬೆಳೆಯುವ ಸಸಿಗಳಿಗೆ ಒಂದು ಮುಕ್ತ ಅವಕಾಶವನ್ನು ನೀಡುತ್ತಾ ಬಂದಿದೆೆ. ಆದರೆ ಒಂದು ಖೇದರದ ಸಂಗತಿಯAದರೆ, ಮುಖ್ಯವಾಹಿನಿಗಳಾದ ಮತ್ತು ನಮ್ಮ ಮೂಲ ವಾಹಿನಿಗಳಾದ ನಾಟಕ, ಬೀದಿನಾಟಕ ಇವು ಮರೆಮಾಚುತ್ತಿವೆ ಮತ್ತು ಪ್ರತಿಭೆಗಳು ಒಂದು ಕ್ಯಾಮರಾ ಮುಂದೆ ಅನಾವರಣಗೊಳ್ಳುತ್ತಿವೆ ಹೊರತು ಮುಕ್ತವಾಗಿ ಜನರ ಮುಂದೆ ಅನಾವರಣಗೊಳ್ಳುತ್ತಿಲ್ಲ ಎಂಬುವುದು ಬೇಸರದ ಸಂಗತಿ.

ವಿ.ಬಿ.ಹೆಚ್

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd