ಲಕ್ನೋ: ನೂರಾರು ಕೋಟಿ ಅಭಿಮಾನಿಗಳ ಕನಸು ನನಸಾಗುವ ದಿನವಿಂದು. ಇಂದು ಭಾರತ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾದೊಂದಿಗೆ ಸೆಣಸಾಟ ನಡೆಸುತ್ತಿದ್ದು, ಭಾರತದ ಕನಸಿಗೆ ಇನ್ನೊಂದೆ ಹೆಜ್ಜೆ ಬಾಕಿ ಇದೆ. ಹೀಗಾಗಿ ಇಂದು ಎಲ್ಲರೂ ಭಾರತವನ್ನು ಹಾರೈಸುತ್ತಿದ್ದಾರೆ.
ಈ ವೇಳೆ ಭಾರತ ತಂಡದಲ್ಲಿ ಉತ್ತಮ ಸಾಧನೆ ತೋರುತ್ತಿರುವ ಮೊಹಮ್ಮದ್ ಶಮಿ ಅವರು ತಾಯಿ, ನನ್ನ ಮಗ ವಿಶ್ವಕಪ್ ನೊಂದಿಗೆ ಮನೆಗೆ ಮರಳುತ್ತಾನೆ ಎಂದು ಹೇಳುವುದರ ಮೂಲಕ ಭಾರತ ತಂಡ ಇಂದು ಗೆಲುವು ಸಾಧಿಸಲಿದೆ ಎಂದು ಹೇಳಿ, ಆಶೀರ್ವದಿಸಿದ್ದಾರೆ.
ತಾಯಿ ಅಂಜುಂ ಅರಾ (Anjum Ara) ಅವರು ಮೊದಲು ಟೀಂ ಇಂಡಿಯಾಗೆ (Team India) ಆಲ್ ದಿ ಬೆಸ್ಟ್ ಹೇಳಿದ್ದಾರೆ. ಇಂದು ಕೂಡ ನನ್ನ ಮಗ ಇಡೀ ದೇಶವೇ ಹೆಮ್ಮೆ ಪಡುವಂತೆ ಆಟವಾಡುತ್ತಾನೆ. ದೇವರು ಅವನಿಗೆ ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದ್ದಾರೆ.
ಭಾರತ ತಂಡಕ್ಕೆ ಇಂದು ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸೆ ಸೇರಿದಂತೆ ಭಾರತದ ಕ್ರಿಕೆಟ್ ದಿಗ್ಗಜರು, ಟೀಮ್ ಇಂಡಿಯಾ ಆಟಗಾರರ, ಅಭಿಮಾನಿಗಳು ಶುಭ ಹಾರೈಕೆ ತಿಳಿಸುತ್ತಿದ್ದಾರೆ.