ಪ್ರತಿಯೊಬ್ಬ ಮಕ್ಕಳಿಗೂ ತಂದೆ-ತಾಯಿಯೇ ದೇವರು ಹಾಗೂ ಪ್ರಪಂಚ. ಆದರೆ, ನನ್ನ ತಾಯಿಯೇ ಬೇರೆ ಎಂದಾಗ ಮಕ್ಕಳ ಚಡಪಡಿಕೆ ಹೇಗಿದ್ದೀತು?
ಲಂಡನ್ ನಲ್ಲಿ ಇಂತಹ ಘಟನೆಯೊಂದು ನಡೆದಿದೆ. ಸ್ಟೀವನ್ ಸ್ಮಿತ್ಗೆ ತನ್ನ ನಿಜವಾದ ತಾಯಿ ಬೇರೆ ಎಂದು ತಿಳಿದಾಗ ಅವರನ್ನು ಹುಡಕಲು ಆರಂಭಿಸಿದ್ದಾನೆ. ಬರೋಬ್ಬರಿ 41 ವರ್ಷಗಳ ನಂತರ ತಾಯಿ ಇರುವ ವಿಳಾಸ ಸಿಕ್ಕಿದೆ. ಖುಷಿಯಿಂದ ತಾಯಿ ನೋಡಲು ಹೋದವನಿಗೆ ಶಾಕ್ ಆಗಿದೆ. ಮನೆಗೆ ತೆರಳಿ ನೋಡುವಷ್ಟರಲ್ಲಿ ಬಾತ್ ರೂಮ್ ನಲ್ಲಿ ತಾಯಿ ಶವವಾಗಿ ಕಾಣಿಸಿಕೊಂಡಿದ್ದಾರೆ.
ಸ್ಟೀವ್ ಸ್ಮಿತ್ ಜನಿಸಿದಾಗ ಅವರ ತಂದೆ ಜೈಲು ಶಿಕ್ಷೆಯಲ್ಲಿದ್ದರು. ಹೀಗಾಗಿ ತಾಯಿ ಮಗನ ಭವಿಷ್ಯ ರೂಪಿಸುವುದಕ್ಕಾಗಿ ದತ್ತು ಕೊಟ್ಟಿದ್ದರು. ತಾನು ದತ್ತು ಪುತ್ರ ಎಂದು ಆತನಿಗೆ ಅರ್ಥವಾಗುತ್ತಿದ್ದಂತೆ ತಾಯಿ-ತಂದೆ ಹುಡುಕಲು ಆರಂಭಿಸಿದ್ದ. 41 ವರ್ಷಗಳ ನಂತರ ನಿಜವಾದ ತಾಯಿ ಯಾರೆಂದು ತಿಳಿದರೂ ಭೇಟಿಯಾಗುವ ಯೋಗ ಅವರಿಗಿರಲಿಲ್ಲ. ಅಮ್ಮ ಎಂದರೂ ಆಕಡೆಯಿಂದ ಒಂದು ಮಾತು ಕೂಡ ಕೇಳಿ ಬರಲಿಲ್ಲ. ಬಾತ್ ರೂಂನಲ್ಲಿ ಶವವಾಗಿ ಮಲಗಿದ್ದರು. ಈಗ ಅವರು ತನ್ನ ತಂದೆ ಫ್ರಾಂಕ್ ಎಂಬುವವರ ಹುಡುಕಾಟ ನಡೆಸಿದ್ದಾರೆ.