Sonu sood
ಬಾಲಿವುಡ್ ನಟ ಸೋನು ಸೂದ್ ಅವರು ರೀಲ್ ಲೈಪ್ ನಲ್ಲಿ ಖಳನಾಯಕನಾದ್ರೂ ರಿಯಲ್ ಲೈಫ್ ನ ಹೀರೋ ಆಗಿ ಗುರುತಿಸಿಕೊಂಡಿರುವ ಮಾನವೀಯ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿರುವ ನಟರಾಗಿದ್ದಾರೆ.. ಲಾಕ್ ಡೌನ್ ಆದಾಗಿನಿಂದಲೂ ಸಹ ಒಂದಲ್ಲಾ ಒಂದು ಸಮಾಜಮುಖಿ ಕಾರ್ಯಗಳಿಂದ ಸುದ್ದಿಯಲ್ಲಿರುವ ಸೋನು ಅನೇಕ ಬಡಬಗ್ಗರು ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.
ಹೀಗೆ ನಿರಂತರವಾಗಿ ಸಮಾಜಸೇವೆಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಸೋನು ಇದೀಗ ಇದೀಗ ಉತ್ತರ ಪ್ರದೇಶದ ಮಿರ್ಜಾಪುರ ಹಾಗೂ ಸೋನ್ಭದ್ರಾ ಜಿಲ್ಲೆಯಲ್ಲಿರುವ ವಿದ್ಯಾರ್ಥಿನಿಯರಿಗೆ ಸೈಕಲ್ಗಳನ್ನ ನೀಡೋದಾಗಿ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ತಿಳಿಸಿದ್ದಾರೆ ಸೋನು. ಈ ಹೆಣ್ಣುಮಕ್ಕಳು ವ್ಯಾಸಂಗಕ್ಕಾಗಿ 8 ರಿಂದ 15 ಕಿಲೋಮೀಟರ್ ಪ್ರಯಾಣಿಸಬೇಕು ಎಂಬ ವಿಚಾರ ತಿಳಿದ ಸೂದ್ ಈ ಸಹಾಯ ಮಾಡೋಕೆ ಮುಂದಾಗಿದ್ದಾರೆ. ಸಂತೋಷ್ ಚೌಹಾಣ್ ಎಂಬ ಟ್ವೀಟರ್ ಬಳಕೆದಾರರು ಈ ಹುಡುಗಿಯರ ಸಂಕಷ್ಟವನ್ನ ಟ್ವೀಟ್ ಮಾಡುವ ಮೂಲಕ ಸೂದ್ ಗಮನ ಸೆಳೆದಿದ್ದರು. ಸಂತೋಷ್ ಟ್ವೀಟ್ ಗೆ ಕೂಡಲೇ ಪ್ರತಿಕ್ರಿಯಿಸಿದ ಸೂದ್, ಈ ಹಳ್ಳಿಯ ಪ್ರತಿಯೊಬ್ಬ ಹುಡುಗಿಯೂ ಸೈಕಲ್ ಹೊಂದುತ್ತಾಳೆ. ಸದ್ಯದಲ್ಲೇ ನಿಮಗೆಲ್ಲ ಸೈಕಲ್ ತಲುಪಲಿದೆ ಎಂದು ಭರವಸೆ ನೀಡಿ ಮತ್ತೊಮ್ಮೆ ತಾವು ನಿಜ ಜೀವನದ ಹೀರೋ ಎಂಬುದನ್ನ ಸಾಬೀತು ಪಡಿಸಿದ್ದಾರೆ.
ಈ ಹಿಂದೆ ಆನ್ ಲೈನ್ ಶಿಕ್ಷಣಕ್ಕಾಗಿ ಹಸು ಮಾರಿದ್ದಾರೆ ಎನ್ನಲಾದ ರೈತರಿಗೆ ನೆರವಾಗಿ, ರೈತರೊಬ್ಬರಿಗೆ ಟ್ರ್ಯಾಕ್ಟರ್ ಗಿಫ್ಟ್ ನೀಡಿ, ನಿರುದ್ಯೋಗಿಗಳಿಗೆ ಉದ್ಯೋಗ, ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಊರಿಗೆ ತಲುಪಲು ಸಹಾಯ ಹೀಗೆ ನಾನಾ ಸಮಾಜಮುಖಿ ಕಾರ್ಯಗಳನ್ನ ಮಾಡಿ ನಿಜಕ್ಕೂ ಜನರ ರಿಯಲ್ ಹೀರೋ ಆಗಿದ್ದಾರೆ.
Sonu sood
ಶಿವಣ್ಣ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ ಈ ಯುವ ನಿರ್ದೇಶಕ..!
ಅಭಿಮಾನಿಗಳ “ದಿಲೋಂಕಾ ರಾಜಾ”… ಕಿಂಗ್ ಖಾನ್ ಶಾರುಖ್ ಬರ್ತ್ ಡೇ ಸಂಭ್ರಮ..!
ಕನ್ನಡದಲ್ಲಿ ಡಬ್ ಆಗುತ್ತಿದೆ ಎಸ್ ಪಿಬಿ ಅವರ ಸೂಪರ್ ಹಿಟ್ ಸಿನಿಮಾ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel