ವಿದ್ಯಾರ್ಥಿಗಳ ಪರ ಸರ್ಕಾರಕ್ಕೆ ಸೋನು ಸೂದ್ ಮಾಡಿದ ಮನವಿ ಏನ್ ಗೊತ್ತಾ..?
ಮುಂಬೈ : ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಬಡಬಗ್ಗರು, ವಿದ್ಯಾರ್ಥಿಗಳು ವಲಸೆ ಕಾರ್ಮಿಕರಿಗೆ ನೆರವಾಗಿ ರಿಯಲ್ ಲೈಫ್ ಹೀರೋ ಎನಿಸಿಕೊಂಡಿರುವ ಸೋನು ಈಗಲೂ ಸಮಾಜಮುಖಿ ಕೆಲಸಗಳನ್ನ ಮಾಡುತ್ತಾ ಜನಮನ ಸೆಳಯುತ್ತಿದ್ದಾರೆ. ಇದೀಗ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆಫ್ ಲೈನ್ ಬೋರ್ಡ್ ಪರೀಕ್ಷೆ ನಡೆಸುತ್ತಿರುವುದಕ್ಕೆ ಚಲನಚಿತ್ರ ನಟ ಸೋನು ಸೂದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ ಖಾತೆಯಲ್ಲಿ ವಿಡಿಯೋ ಮಾಡಿರುವ ಅವರು ದೇಶದಲ್ಲಿ ಸದ್ಯ ಎರಡನೇ ಹಂತದ ಕೋವಿಡ್ ಅಲೆ ವ್ಯಾಪಕವಾಗಿ ಹಬ್ಬುತ್ತಿದೆ. ದಿನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಇಂತಹ ಕಠಿಣ ಸಂದರ್ಭದಲ್ಲಿ ಸಿಬಿಎಸ್ಸಿ ಹಾಗೂ ಬೋರ್ಡ್ ಎಕ್ಸಾಂಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಆಫ್ ಲೈನ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಿದ್ಧರಾಗಿಲ್ಲ ಎನ್ನುವುದು ನನ್ನ ಅಭಿಮತ ಎಂದಿದ್ದಾರೆ.