ಕೇಂದ್ರ ಸರ್ಕಾರದಿಂದ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಸದ್ಯ ದೇಶದಲ್ಲಿ ಲೋಕಸಭೆ ನಡೆಯಲಿದ್ದು, ಎಲ್ಲ ಪಕ್ಷಗಳು ತಯಾರಿ ನಡೆಸಿವೆ. ಈ ನಿಟ್ಟಿನಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲು ಮುಂದಾಗಿದೆ.
ಕೇಂದ್ರ ಸರ್ಕಾರ ಈಗಾಗಲೇ ಪ್ರತಿ ಸಿಲಿಂಡರ್ ಅನಿಲಕ್ಕೆ 200 ರೂ. ಸಬ್ಸಿಡಿ ನೀಡುತ್ತಿದೆ. ಸರ್ಕಾರವು ಮೂರು ಉಚಿತ ಸಿಲಿಂಡರ್ ಗಳಿಗೆ ವಿಶೇಷವಾಗಿ ದುರ್ಬಲ ವರ್ಗಗಳು ಮತ್ತು ಬಡತನ ರೇಖೆಗಿಂತ ಕೆಳಗಿರುವವರಿಗೆ ಬೆಂಬಲ ನೀಡಿದೆ.
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಸಬ್ಸಿಡಿಯಾಗಿ ವಾರ್ಷಿಕವಾಗಿ 9,000 ಕೋಟಿ ರೂಪಾಯಿಗಳಿಂದ 10,000 ಕೋಟಿ ರೂಪಾಯಿಗಳವರೆಗೆ ನೀಡುತ್ತಿದೆ. ಸದ್ಯ ಸಿಲಿಂಡರ್ ಬೆಲೆ ಇಳಿಕೆಯತ್ತ ಚಿಂತನೆ ನಡೆಸಿದೆ. ಈ ಮೂಲಕ ಜನರ ಮತ ಗಳಿಸಲು ತಂತ್ರ ಹೆಣೆಯುತ್ತಿದೆ.