Sourav Ganguly Biopic : ಸೌರವ್ ಗಂಗೂಲಿ ಜೀವನ ಕಥೆಗೆ ರೆಡಿಯಾಯ್ತು ಸ್ಕ್ರಿಪ್ಟ್…
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಬಯೋಪಿಕ್ ಮಾಡುವ ಕುರಿತು ನಾಲ್ಕೈದು ವರ್ಷಗಳಿಂದ ಟಾಕ್ ನಡೆಯುತ್ತಿದೆ. ಇದೀಗ ಚಿತ್ರದ ಸ್ಕ್ರಿಪ್ಟ್ ರೆಡಿಯಾಗಿದ್ದು ಸೌರವ್ ಗಂಗೂಲಿ ಅದನ್ನ ಓದಿ ಅನುಮೋದಿಸುವುದೊಂದೆ ಭಾಕಿ ಇದೆ.
ಭಾರತದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ ಗಂಗೂಲಿ ಕುರಿತು ಸಿನಿಮಾ ಮಾಡುವುದಾಗಿ ಬಹಳ ದಿನಗಳ ಹಿಂದೆಯೇ ಘೋಷಿಸಲಾಗಿದೆ. ಇದನ್ನ ಲವ್ ಫಿಲ್ಮ್ಸ್ ಮತ್ತು ಸೌರವ್ ಒಟ್ಟಾಗಿ ಘೋಷಿಸಿದ್ದರು. ಇದೀಗ ಸೌರವ್ ಗಂಗೂಲಿ ಕಥೆಯನ್ನ ಅಂತಿಮಗೊಳಿಸಲು ಮುಂಬೈಗೆ ಆಗಮಿಸುತ್ತಿದ್ದಾರೆ.
ಸೆಪ್ಟೆಂಬರ್ 9, 2021 ರಂದು, ಲವ್ ಫಿಲ್ಮ್ಸ್ ಮತ್ತು ಸೌರವ್ ಗಂಗೂಲಿ ಒಟ್ಟಾಗಿ ಈ ಬಯೋಪಿಕ್ ಅನ್ನು ಘೋಷಿಸಿದರು. ಎರಡು ವರ್ಷಗಳ ಸಂಶೋಧನೆಯ ನಂತರ ಚಿತ್ರದ ಸ್ಕ್ರಿಪ್ಟ್ ಬಹುತೇಕ ಸಿದ್ಧವಾಗಿದೆ. ಭಾರತದ ಮಾಜಿ ನಾಯಕ ಸೌರವ್ ತಮ್ಮ ಸ್ನೇಹಿತ ಸಂಜಯ್ ದಾಸ್ ಜೊತೆ ಸೋಮವಾರ ರಾತ್ರಿ ಮುಂಬೈಗೆ ತೆರಳಿ ಚಿತ್ರದ ಸ್ಕ್ರಿಪ್ಟ್ ಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ.
ಈ ಬಯೋಪಿಕ್ನಲ್ಲಿ ಸೌರವ್ ಗಂಗೂಲಿ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬ ಬಗ್ಗೆ ಇನ್ನು ಯಾವುದೇ ಮಾಹಿತಿ ಹೊರಬಂದಿಲ್ಲ. ಈ ಚಿತ್ರದ ಬಜೆಟ್ ಸುಮಾರು 250 ಕೋಟಿ ರೂ.
Sourav Ganguly Biopic : Sourav Ganguly biopic script ready…