ADVERTISEMENT
Saturday, May 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಮತ್ತೆ ಮುಂದುವರಿಯುತ್ತಾರಾ ?

admin by admin
July 22, 2020
in Newsbeat, Sports, ಕ್ರೀಡೆ
jai sha sourav ganguly saakshatv
Share on FacebookShare on TwitterShare on WhatsappShare on Telegram

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಮತ್ತೆ ಮುಂದುವರಿಯುತ್ತಾರಾ ?

ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಮತ್ತೆ ಅಧಿಕಾರ ನಡೆಸುತ್ತಾರಾ ? ಕಾರ್ಯದರ್ಶಿಯಾಗಿ ಜೈ ಶಾ ಅವರು ಮತ್ತೆ ಮುಂದುವರಿಯುತ್ತಾರಾ ? ಈ ಪ್ರಶ್ನೆಗಳಿಗೆ ಇವತ್ತು ಉತ್ತರ ಸಿಗಲಿದೆ. ಇಂದು ಸುಪ್ರೀಂ ಕೋರ್ಟ್‍ನಲ್ಲಿ ಈ ವಿಷ್ಯದ ಬಗ್ಗೆ ವಿಚಾರಣೆ ನಡೆಯಲಿದೆ.
ಗಂಗೂಲಿಯವರ ಅಧಿಕಾರ ಅವಧಿ ಇದೇ ತಿಂಗಳ 27ರಂದು ಕೊನೆಗೊಳ್ಳಲಿದೆ. ಹಾಗೇ ಕಾರ್ಯದರ್ಶಿ ಜೈ ಶಾ ಅವರ ಅವಧಿಯೂ ಈಗಾಗಲೇ ಅಂತ್ಯಗೊಂಡಿದೆ. ಈ ಬಗ್ಗೆ ಜೈ ಶಾ ಅವರು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.
2013ರಲ್ಲಿ ಐಪಿಎಲ್ ಸ್ಟಾಟ್ ಫಿಕ್ಸಿಂಗ್ ಆದ ನಂತರ ಬಿಸಿಸಿಐನಲ್ಲಿ ಮಹತ್ತರವಾದ ಬದಲಾವಣೆಗಳಾಗಿದ್ದವು. ಸುಪ್ರೀಂ ಕೋರ್ಟ್ ನೇಮಿಸಿದ್ದ ಲೋಧಾ ಸಮಿತಿಯು ಕ್ರಿಕೆಟ್ ಆಡಳಿತಾಧಿಕಾರಿ ಎಂಬ ಹುದ್ದೆಯ ಮೂಲಕ ಬಿಸಿಸಿಐ ಅಧಿಕಾರವನ್ನು ನಡೆಸಿದ್ದರು. ಇದೇ ವೇಳೆ ಬಿಸಿಸಿಐ ಅಪೆಕ್ಸ್ ಸಮಿತಿಯೂ ರಚನೆಯಾಯ್ತು. ಈ ವೇಳೆ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಈ ನಿಯಮದ ಪ್ರಕಾರ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪದಾಧಿಕಾರಿಗಳ ಒಟ್ಟು ಅಧಿಕಾರಾವಧಿ ಆರು ವರ್ಷಗಳಿಂದ ಹೆಚ್ಚಿರಬಾರದು. ಹಾಗೇ ಮೂರು ವರ್ಷಗಳ ನಂತರ ಅವರು ಆಯಾ ಸಂಸ್ಥೆಗಳಿಗೆ ಮತ್ತೆ ಪದಾಧಿಕಾರಿಗಳಾಗಬಹುದು ಎಂಬ ನಿಯಮವನ್ನು ರಚಿಸಲಾಗಿತ್ತು.
ಈ ನಿಯಮದ ಪ್ರಕಾರ ಸೌರವ್ ಗಂಗೂಲಿ ಅವರು ಪಶ್ವಿಮ ಬಂಗಾಳದ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿಯೂ ಅಧಿಕಾರ ನಡೆಸಿದ್ದರು. ಹಾಗೇ ಜೈ ಶಾ ಕೂಡ ಗುಜರಾತ್ ಕ್ರಿಕೆಟ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಹುದ್ದೆಯ ಚುಕ್ಕಾಣಿ ಹಿಡಿದಾಗ ಅವರಿಗೆ ಕೇವಲ 9 ತಿಂಗಳ ಅಧಿಕಾರಾವಧಿ ಇತ್ತು. ಈಗ ಒಂಬತ್ತು ತಿಂಗಳು ಮುಗಿಯುತ್ತಿದೆ. ಇದ್ರಲ್ಲಿ ಕಳೆದ ನಾಲ್ಕು ತಿಂಗಳು ಕೋವಿಡ್-19, ಲಾಕ್ ಡೌನ್‍ಗೆ ಸೀಮಿತವಾಯ್ತು. ಗಂಗೂಲಿ ಪೂರ್ಣ ಪ್ರಮಾಣದಲ್ಲಿ ಬಿಸಿಸಿಐನ ಅಧಿಕಾರ ನಡೆಸಿದ್ದು ಕೇವಲ ಐದು ತಿಂಗಳು ಮಾತ್ರ. ಸದ್ಯ ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಇನ್ನೊಂದು ಅವಧಿಗೆ ಮುಂದುವರಿಯಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೆ ಪೂರಕವಾಗಿ 2013ರ ಸ್ಪಾಟ್ ಫಿಕ್ಸಿಂಗ್ ಹಗರಣದ ಪ್ರಮುಖ ಅರ್ಜಿದಾರ ಆದಿತ್ಯ ವರ್ಮಾ ಸೌರವ್ ಗಂಗೂಲಿ ಮತ್ತು ಜೈ ಶಾ ಬೆಂಬಲಕ್ಕೆ ನಿಂತಿದ್ದಾರೆ. ಆದಿತ್ಯ ವರ್ಮಾ ಅವರು ಬಿಹಾರ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಯೂ ಆಗಿದ್ದರು. ವರ್ಮಾ ಅವರು ಬಿಸಿಸಿಐನ ಅಪೆಕ್ಸ್ ಸಮಿತಿ ಮತ್ತು ಲೋಧಾ ಸಮಿತಿಯನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದೀಗ ಆದಿತ್ಯ ವರ್ಮಾ ಅವರು ಬಿಸಿಸಿಐ ನ ಸ್ಥಿರತೆಗೆ ಸೌರವ್ ಗಂಗೂಲಿ ಮತ್ತು ಜೈ ಶಾ ಅವರ ಅಗತ್ಯ ಇದೆ. ಬಿಸಿಸಿಐ ಮುನ್ನಡೆಸಲು ಸೌರವ್ ಗಂಗೂಲಿಯೇ ಅತ್ಯುತ್ತಮ ವ್ಯಕ್ತಿ. ಹೀಗಾಗಿ ಬಿಸಿಸಿಐ ಆಡಳಿತ ಸುಧಾರಣೆಗೆ ಅವರಿಗೆ ಪೂರ್ಣ ಪ್ರಮಾಣದ ಅಧಿಕಾರವನ್ನು ನೀಡಬೇಕು. ಇದನ್ನು ನಾನು ಯಾವಾಗಲೂ ಸಮರ್ಥಿಸಿಕೊಳ್ಳುತ್ತೇನೆ. ಹೀಗಾಗಿ ನಾನು ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸುವುದಿಲ್ಲ ಎಂದು ಆದಿತ್ಯ ವರ್ಮಾ ಹೇಳಿದ್ದಾರೆ.

Related posts

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ  : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

May 8, 2026
ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

May 8, 2026
Tags: #bcci apex Committee#IPL spot-fixing scandal#jai sha#Lodha CommitteebcciCricket Association of Bihar secretary adithya VermaSourav GangulySupreme Court
ShareTweetSendShare
Join us on:

Related Posts

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ  : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

by Shwetha
May 8, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಸಮರ ತಾರಕಕ್ಕೇರಿದ್ದು, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಭೀಕರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಆಪ್ತ...

ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

by Shwetha
May 8, 2026
0

ಬೆಂಗಳೂರು ಪಶ್ಚಿಮ ಬಂಗಾಳದ ರಾಜಕೀಯ ರಣಕಣದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮೇ 10 ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎಂದು ಬೆಂಗಳೂರು...

ಮ್ಯಾಜಿಕ್ ಫಿಗರ್ ತಲುಪದ ಟಿವಿಕೆ; ಸೂಪರ್ ಸ್ಟಾರ್ ಸರ್ಕಾರ ರಚನೆಗೆ ಸ್ಟಾಲಿನ್ ಅಡ್ಡಗಾಲು ಹಾಕದಿರಲು ಕಾರಣವೇನು?

ಮ್ಯಾಜಿಕ್ ಫಿಗರ್ ತಲುಪದ ಟಿವಿಕೆ; ಸೂಪರ್ ಸ್ಟಾರ್ ಸರ್ಕಾರ ರಚನೆಗೆ ಸ್ಟಾಲಿನ್ ಅಡ್ಡಗಾಲು ಹಾಕದಿರಲು ಕಾರಣವೇನು?

by Shwetha
May 8, 2026
0

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಹಿಂದೆಂದೂ ಕಾಣದಂತಹ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆಯ ಕುರಿತು...

ನಿವೃತ್ತಿ ಸೌಲಭ್ಯಗಳಿಗಾಗಿ ಡಿಜಿಪಿ ಅಮಾನತು ಆದೇಶ ವಾಪಸ್: ರಾಮಚಂದ್ರ ರಾವ್ ಅವರಿಗೆ ಬಿಗ್ ರಿಲೀಫ್ ನೀಡಿದ ಸರ್ಕಾರ

ನಿವೃತ್ತಿ ಸೌಲಭ್ಯಗಳಿಗಾಗಿ ಡಿಜಿಪಿ ಅಮಾನತು ಆದೇಶ ವಾಪಸ್: ರಾಮಚಂದ್ರ ರಾವ್ ಅವರಿಗೆ ಬಿಗ್ ರಿಲೀಫ್ ನೀಡಿದ ಸರ್ಕಾರ

by Shwetha
May 8, 2026
0

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಡಿಜಿಪಿ ಡಾ. ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು...

ಜನಾದೇಶಕ್ಕೆ ಬೆಲೆ ನೀಡದ ದೀದಿ ಅಹಂಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಗಾಳಿಗೆ ತೂರಿದ ಪಶ್ಚಿಮ ಬಂಗಾಳ ನಾಯಕಿ ಈಗ ಮಾಜಿ ಸಿಎಂ

ಜನಾದೇಶಕ್ಕೆ ಬೆಲೆ ನೀಡದ ದೀದಿ ಅಹಂಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಗಾಳಿಗೆ ತೂರಿದ ಪಶ್ಚಿಮ ಬಂಗಾಳ ನಾಯಕಿ ಈಗ ಮಾಜಿ ಸಿಎಂ

by Shwetha
May 8, 2026
0

ಭಾರತದ ರಾಜಕೀಯ ಭೂಪಟದಲ್ಲಿ ಪಶ್ಚಿಮ ಬಂಗಾಳದ ರಾಜಕಾರಣ ಯಾವಾಗಲೂ ಒಂದು ಕುತೂಹಲದ ಕೇಂದ್ರಬಿಂದು. ಅಲ್ಲಿನ ಕೆಚ್ಚೆದೆಯ ನಾಯಕಿ ಎಂದು ಕರೆಸಿಕೊಳ್ಳುವ ಮಮತಾ ಬ್ಯಾನರ್ಜಿ ಅವರ ಇತ್ತೀಚಿನ ನಡೆಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram