ಬೆಂಗಳೂರು: ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ (Spandana Vijay) ಅವರು ಹೃದಯಾಘಾತಕ್ಕೆ ಬಲಿಯಾಗಿದ್ದು, ಅರ ಪಾರ್ಥೀವ ಶರೀರ ನಾಳೆ ರಾತ್ರಿ ಬೆಂಗಳೂರಿಗೆ ಬರಲಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಅವರ ಚಿಕ್ಕಪ್ಪ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ (BK Hari Prasad) ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸ್ಪಂದನ ಮರಣೋತ್ತರ ಪರೀಕ್ಷೆ (post mortem) ಕೊನೆಗೊಂಡಿದೆ. ಕೊನೆಯವಿಧಿವಿಧಾನ ಪ್ರಕ್ರಿಯೆ ಬಾಕಿಯಿದೆ. ಸ್ಪಂದನ ಅಂತ್ಯಸಂಸ್ಕಾರ ಎಲ್ಲಿ ನಡೆಸಬೇಕು ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಸ್ಪಂದನಳ ಪಾರ್ಥೀವ ಶರೀರ ನಗರಕ್ಕೆ ಬಂದ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಅಲ್ಲದೇ, ಅಂತಿಮ ವಿಧಿ ವಿಧಾನಗಳನ್ನು ಬುಧವಾರ ನಡೆಸಲಾಗುವುದು ಎಂದು ಹೇಳಿದ್ದಾರೆ.






