ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್ಡಿಎ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿ ಎಂದು ಅಮೆರಿಕದಲ್ಲಿ ಕೂಡ ವಿಶೇಷ ಪೂಜೆ ನಡೆಸಲಾಗಿದೆ.
ಈ ಬಾರಿಯ ಚುನಾವಣೆಯಲ್ಲೂ ಎನ್ಡಿಎ ಭರ್ಜರಿ ಜಯ ಗಳಿಸಿ ಮತ್ತೆ ನರೇಂದ್ರ ಮೋದಿಯವರು (Narendra Modi) 3ನೇ ಅವಧಿಗೆ ಪ್ರಧಾನಿಯಾಗಲೆಂದು ಅಮೆರಿಕಾದ ಹೌಸ್ಟನ್ನಲ್ಲಿ ವಿಶೇಷ ಸಂಕಲ್ಪ ಪೂಜೆ ಕೈಗೊಳ್ಳಲಾಗಿದೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನಗಳನ್ನು ಪಡೆಯುವುದು ಖಚಿತ ಎಂದು ಬಿಜೆಪಿ ಹೇಳುತ್ತಿದೆ. ಪ್ರಧಾನಿ ಮೋದಿ ಅವರು ಹ್ಯಾಟ್ರಿಕ್ ಬಾರಿಸುವ ನಿರೀಕ್ಷೆಯಲ್ಲಿದ್ದಾರೆ. ಸದ್ಯಕ್ಕೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಧ್ಯಾನ ಮಾಡುತ್ತಿದ್ದಾರೆ. ಜೂನ್ 1ರ ಸಂಜೆಯವರೆಗೂ ಪ್ರಧಾನಿ ಧ್ಯಾನ ಮಾಡಲಿದ್ದಾರೆ.