ಬೆಂಗಳೂರು: ಇಂದು ವಿಶ್ವಕಪ್ ಫೈನಲ್ ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ಬಿಗ್ ಫೈಟ್ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಗೆಲುವಿಗಾಗಿ ದೇಶದಲ್ಲಿನ ಎಲ್ಲ ಸಮುದಾಯದವರು ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡುತ್ತಿದ್ದಾರೆ.
ರತ (India) ಗೆದ್ದು ಬರಲಿ ಎಂದು ಎಲ್ಲೆಡೆ ಪೂಜೆ, ಹೋಮಗಳು ನಡೆಯುತ್ತಿವೆ. ಜಾತಿ, ಧರ್ಮ ಮೀರಿ ಭಾರತ ತಂಡದ ಗೆಲುವಿಗಾಗಿ ಎಲ್ಲರೂ ಒಂದಾಗಿ ವಿಶೇಷ ಪೂಜೆ ನೆರವೇರಿಸುತ್ತಿದ್ದಾರೆ. ನಗರದ ಗಣಪತಿ ದೇವಾಲಯದಲ್ಲಿ ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ನರು ವಿಶೇಷ ಪೂಜೆ ಸಲ್ಲಿಸಿ ರಾಷ್ಟ್ರಧ್ವಜ ವಿಡಿದು ಭಾವೈಕ್ಯತೆ ಮೆರೆದು, ಕಪ್ ಗೆಲ್ಲಲಿ ಎಂದು ಪ್ರಾರ್ಥಿಸಿದ್ದಾರೆ.
ದೇಶ ಹಾಗೂ ವಿದೇಶದಲ್ಲಿನ ಪ್ರತಿಯೊಬ್ಬ ಭಾರತೀಯ ಹಾಗೂ ಭಾರತದ ಅಭಿಮಾನಿಗಳು ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲ್ಲಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ದೇವರ ಮುಂದೆ ಕ್ರಿಕೆಟ್ ಬ್ಯಾಟ್ ಬಾಲ್ ಇಟ್ಟು ಪೂಜೆ ಸಲ್ಲಿಸಿದ್ದಾರೆ. ವಿನಾಯಕನಿಗೆ ಸಿಹಿ ನೈವೇದ್ಯ ವಿಟ್ಟು, ಕುಂಬಳಕಾಯಿ, ತೆಂಗಿನಕಾಯಿ ಹೊಡೆದು ಆಟಗಾರರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.