ಹಿಂದೂ ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ, ಗರ್ಭಿಣಿಯರನ್ನಾಗಿ ಮಾಡುವುದೇ ನನ್ನ ಗುರಿ ಮತ್ತು ಪ್ಯಾಷನ್ – ಇದು ಸಚಿನ್ ಎಂಬ ಹಿಂದೂ ಹೆಸರಿನಲ್ಲಿ ವಂಚಿಸುತ್ತಿದ್ದ ಶಾದ್ ಸಿದ್ದಿಖಿ ಎಂಬ ಯುವಕ ಪೊಲೀಸರ ಮುಂದೆ ನೀಡಿರುವ ಬೆಚ್ಚಿಬೀಳಿಸುವ ಹೇಳಿಕೆ. ಈ ಹೇಳಿಕೆ ಕೇವಲ ಒಂದು ಅಪರಾಧದ ಕಥೆಯಲ್ಲ, ಬದಲಿಗೆ ವ್ಯವಸ್ಥಿತ ಷಡ್ಯಂತ್ರದ ಕರಾಳ ಮುಖವನ್ನು ಅನಾವರಣಗೊಳಿಸಿದೆ.
ನಕಲಿ ಹೆಸರಿನಲ್ಲಿ ವಂಚನೆಯ ಜಾಲ
ಶಾದ್ ಸಿದ್ದಿಖಿ ತನ್ನ ನಿಜವಾದ ಧರ್ಮವನ್ನು ಮುಚ್ಚಿಟ್ಟು, ‘ಸಚಿನ್’ ಎಂಬ ಹಿಂದೂ ಹೆಸರಿನ ಮೂಲಕ ಹಿಂದೂ ಯುವತಿಯರನ್ನು ಚಾಣಾಕ್ಷತನದಿಂದ ಪರಿಚಯಿಸಿಕೊಳ್ಳುತ್ತಿದ್ದ. ಅವರನ್ನು ನಂಬಿಸಿ, ಪ್ರೀತಿಯ ನಾಟಕವಾಡಿ, ದೈಹಿಕವಾಗಿ ಬಳಸಿಕೊಂಡು ನಂತರ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಇದೀಗ ಇಂದೋರ್‌ನಲ್ಲಿ 26 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಈತನ ನಿಜವಾದ ಬಣ್ಣ ಬಯಲಾಗಿದೆ.








