ಟಾಪ್ 10 ನ್ಯೂಸ್ @ 8 PM

ಸಂಸತ್ ನಲ್ಲಿ ವಾಯುಯಾನ ನಿಯಂತ್ರಕರಿಗೆ ಶಾಸನಬದ್ಧ ಸ್ಥಾನಮಾನ: ಮಸೂದೆ ಅಂಗೀಕಾರ

ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ಸೇರಿದಂತೆ ನಿಯಂತ್ರಕ ಸಂಸ್ಥೆಗಳಿಗೆ ಭಾರತದ ವಾಯುಯಾನ ಸುರಕ್ಷತಾ ರೇಟಿಂಗ್‌ಗಳನ್ನು ಸುಧಾರಿಸಲು ಮತ್ತು ಶಾಸನಬದ್ಧ ಸ್ಥಾನಮಾನವನ್ನು ನೀಡಲು ಪ್ರಯತ್ನಿಸುವ ಮಸೂದೆಯನ್ನು ಸಂಸತ್ತು ಮಂಗಳವಾರ ಅಂಗೀಕರಿಸಿತು.

ಡಿಜಿಸಿಎ, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ (ಬಿಸಿಎಎಸ್) ಮತ್ತು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಗೆ ಶಾಸನಬದ್ಧ ಬೆಂಬಲವನ್ನು ನೀಡುವ 2020 ರ ವಿಮಾನ (ತಿದ್ದುಪಡಿ) ಮಸೂದೆಯನ್ನು ರಾಜ್ಯಸಭೆಯಲ್ಲಿ ಧ್ವನಿ ಮತದಿಂದ ಅಂಗೀಕರಿಸಲಾಯಿತು.

“ಚೀನಾ-ಭಾರತ ಗಡಿ ಸಂಘರ್ಷ ಇನ್ನೂ ಮುಗಿದಿಲ್ಲ” : ರಾಜನಾಥ್ ಸಿಂಗ್..!

ನವದೆಹಲಿ: ಚೀನಾ-ಭಾರತ ಗಡಿ ವಿವಾದ ಗಂಭೀರವಾಗಿದೆ.  ನಮಗೆ ಶಾಂತಿಯುತ ಪರಿಹಾರ ಬೇಕಿದೆ ಎಂದು ರಕ್ಷಣಾ ಸಚಿವರಾಜ ನಾಥ್‌ ಸಿಂಗ್‌ ಅವರು ಸಂಸತ್‌ ನಲ್ಲಿ ಹೇಳಿದ್ದಾರೆ.

ಚೀನಾ-ಭಾರತ ಗಡಿ ಸಂಘರ್ಷ ಇನ್ನೂ ಮುಗಿದಿಲ್ಲ. ಇನ್ನು ಚೀನಾ ಸೇನೆ ನಿಯೋಜನೆ ಏಪ್ರಿಲ್‌ನಿಂದ ಹೆಚ್ಚಳವಾಗಿದ್ದು, ಶಸ್ತ್ರಾಸ್ತ್ರಗಳ ಸಂಗ್ರಹ ಹೆಚ್ಚಿಸಿದೆ. ಹಾಗಾಗಿ ಯಥಾಸ್ಥಿತಿ ಕಾಪಾಡಲು ಭಾರತ ಎಚ್ಚರಿಕೆ ನೀಡಿದೆ ಎಂದಿದ್ದಾರೆ.

ಆಂಡಿ – ದಿಗಂತ್ ದಂಪತಿಗೆ ಸಿಸಿಬಿ ನೋಟಿಸ್..!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಬಗೆದಷ್ಟು ದೊಡ್ಡದಾಗುತ್ತಿದೆ. ದಿನೇ ದಿನೇ ಹೊಸ ಹೊಸ ಮಾಹಿತಿಗಳು ಬಹಿರಂಗವಾಗುತ್ತಿದೆ. ಈಗಾಗಲೇ ಇಬ್ಬರು ನಟಿಯರಾದ ಸಂಜನಾ ಹಾಗೂ ರಾಗಿಣಿಯನ್ನೂ ಬಂಧಿಸಲಾಗಿದೆ. ಇನ್ನೂ ಹಲವು ತಾರೆಯರ ಹೆಸರು ಈ ಪ್ರಕರಣದಲ್ಲಿ ಕೇಳಿಬರುತ್ತಿದ್ದು, ಇದೀಗ ದಿಗಂತ್ ಹಾಗೂ ಐಂದ್ರತಾಗೂ ಸಂಕಷ್ಟ ಎದುರಾಗಿದೆ. ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈಗೆ ಸಿಸಿಬಿ ನೋಟಿಸ್ ನೀಡಿದೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬನ್ನಿ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ‌.

ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯ  ಚೇತರಿಕೆ

ಕೊರೊನಾ ಹಾಗೂ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಅವರ ಪುತ್ರ ಚರಣ್ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಪುತ್ರ ಚರಣ್, ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಎಲ್ಲಾ ತರಹದ ಚಿಕಿತ್ಸೆಗೆ ತಂದೆ ಸ್ಪಂದಿಸುತ್ತಿದ್ದಾರೆ. ಅವರಿಗೆ ಫಿಸಿಯೋಥೆರಪಿ ಮಾಡಲಾಗುತ್ತಿದೆ. ಇನ್ನೂ ಅವರಿಗೆ ಆಹಾರವನ್ನು ನೇರವಾಗಿಯೇ ನೀಡಲಾಗುತ್ತಿದೆ. ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂದು ಹೇಳಿದ್ದಾರೆ.

ಜೆಡಿಎಸ್ ಶಾಸಕ ಡಿ.ಸಿ ಗೌರಿ ಶಂಕರ್ ಅವರಿಗೆ ಕೊರೊನಾ ದೃಢ

ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಡಿ.ಸಿ ಗೌರಿಶಂಕರ್ ಅವರಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ಸದ್ಯ ಅವರು ವೈದ್ಯರ ಸಲಹೆ ಪಡೆದುಕೊಂಡು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಗೌರಿ ಶಂಕರ್ ಅವರೇ ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಆಂಡಿ – ದಿಗಂತ್ ದಂಪತಿಗೆ ಸಿಸಿಬಿ ನೋಟಿಸ್..!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಬಗೆದಷ್ಟು ದೊಡ್ಡದಾಗುತ್ತಿದೆ. ದಿನೇ ದಿನೇ ಹೊಸ ಹೊಸ ಮಾಹಿತಿಗಳು ಬಹಿರಂಗವಾಗುತ್ತಿದೆ. ಈಗಾಗಲೇ ಇಬ್ಬರು ನಟಿಯರಾದ ಸಂಜನಾ ಹಾಗೂ ರಾಗಿಣಿಯನ್ನೂ ಬಂಧಿಸಲಾಗಿದೆ. ಇನ್ನೂ ಹಲವು ತಾರೆಯರ ಹೆಸರು ಈ ಪ್ರಕರಣದಲ್ಲಿ ಕೇಳಿಬರುತ್ತಿದ್ದು, ಇದೀಗ ದಿಗಂತ್ ಹಾಗೂ ಐಂದ್ರತಾಗೂ ಸಂಕಷ್ಟ ಎದುರಾಗಿದೆ. ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈಗೆ ಸಿಸಿಬಿ ನೋಟಿಸ್ ನೀಡಿದೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬನ್ನಿ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ‌.

ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯ  ಚೇತರಿಕೆ

ಕೊರೊನಾ ಹಾಗೂ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಅವರ ಪುತ್ರ ಚರಣ್ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಪುತ್ರ ಚರಣ್, ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಎಲ್ಲಾ ತರಹದ ಚಿಕಿತ್ಸೆಗೆ ತಂದೆ ಸ್ಪಂದಿಸುತ್ತಿದ್ದಾರೆ. ಅವರಿಗೆ ಫಿಸಿಯೋಥೆರಪಿ ಮಾಡಲಾಗುತ್ತಿದೆ. ಇನ್ನೂ ಅವರಿಗೆ ಆಹಾರವನ್ನು ನೇರವಾಗಿಯೇ ನೀಡಲಾಗುತ್ತಿದೆ. ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂದು ಹೇಳಿದ್ದಾರೆ.

ವಿಷ್ಣುದಾದಾ ಸ್ಮಾರಕದಲ್ಲಿ ಏನೇಲ್ಲಾ ಇರುತ್ತೆ ಗೊತ್ತಾ?

ಸಾಕಷ್ಟು ವಿವಾದ- ವಾದ, ಚರ್ಚೆಗಳ ಬಳಿಕ ಕೊನೆಗೂ ವಿಷ್ಣುದಾದಾ ಸ್ಮಾರಕ ನಿರ್ಮಾಣಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಆನ್ ಲೈನ್ ಮೂಲಕ ಚಾಲನೆ ನೀಡಿದ್ದಾರೆ.

ಮೈಸೂರಿನ ಹಾಲಾಳು ಗ್ರಾಮದಲ್ಲಿ ಶಂಕು ಸ್ಥಾಪನೆಯ ಸಮಾರಂಭ ನಡೆದಿದ್ದು, ಹಿರಿಯ ನಟಿ ಭಾರತಿ ಅವರು ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ.

ಫಾಕ್ಸ್ ಸ್ಪೋಟ್ರ್ಸ್ ಕ್ರೀಡಾ ಪತ್ರಕರ್ತೆ ಈಗ ಸ್ಟಾರ್ ಸ್ಪೋಟ್ರ್ಸ್ ನಿರೂಪಕಿ

ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ 2020ರ ಐಪಿಎಲ್ ಟೂರ್ನಿ ನಡೆಯಲಿದೆ. ಈಗಾಗಲೇ ಕಣದಲ್ಲಿರುವ ಎಂಟು ತಂಡಗಳು ಕಠಿಣ ಅಭ್ಯಾಸದಲ್ಲಿ ನಿರತವಾಗಿವೆ. ಇನ್ನೊಂದೆಡೆ ಬಿಸಿಸಿಐ ಜೈವಿಕ ಸುರಕ್ಷತೆ ಮತ್ತು ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಟೂರ್ನಿಯನ್ನು ಆಯೋಜಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಈ ನಡುವೆ, ಬಿಸಿಸಿಐ ಪಂದ್ಯಗಳ ವೀಕ್ಷಕ ವಿವರಣೆಕಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮತ್ತೊಂದೆಡೆ ಪಂದ್ಯಗಳ ಪ್ರಸಾರದ ಹಕ್ಕನ್ನು ಪಡೆದುಕೊಂಡಿರುವ ಸ್ಟಾರ್ ಸ್ಪೋಟ್ರ್ಸ್ ವಾಹಿನಿಯೂ ಹೊಸ ನಿರೂಪಕಿಯನ್ನು ಆಯ್ಕೆ ಮಾಡಿಕೊಂಡಿದೆ.
ಆಸ್ಟ್ರೇಲಿಯಾದ ಪ್ರಮುಖ ಕ್ರೀಡಾ ಪತ್ರಕರ್ತೆ ಹಾಗೂ ನಿರೂಪಕಿಯಾಗಿರುವ ನೆರೋಲಿ ಮೆಡೋಸ್ ಅವರು ಸ್ಟಾರ್ ಸ್ಟೋಟ್ರ್ಸ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.

ಶಾರ್ಜಾ ಕ್ರೀಡಾಂಗಣವನ್ನು ಪರಿಶೀಲನೆ ನಡೆಸಿದ ಬಿಸಿಸಿಐ ಬಾಸ್ ಸೌರವ್ ಗಂಗೂಲಿ

ಯುಎಇ ನಲ್ಲಿ ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿರುವ ಟೂರ್ನಿಗೆ ಈಗಾಗಲೇ ಎಂಟೂ ಫ್ರಾಂಚೈಸಿಗಳು ಯುಎಇನಲ್ಲಿ ಬೀಡು ಬಿಟ್ಟಿವೆ. ಅಲ್ಲದೆ ಕಠಿಣ ಅಭ್ಯಾಸದಲ್ಲೂ ನಿರತವಾಗಿವೆ. ಯುಎಇ ನ ಮೂರು ಮೈದಾನಗಳಲ್ಲಿ ನಡೆಯಲಿರುವ ಟೂರ್ನಿಯ ಸಿದ್ಧತೆಗಳ ಬಗ್ಗೆ ಬಿಸಿಸಿಐ ಬಾಸ್ ಪರಿಶೀಲನೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಸೌರವ್ ಗಂಗೂಲಿ ಅವರು ಶಾರ್ಜಾ ಕ್ರೀಡಾಂಗಣಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲದೆ ನವೀಕರಣಗೊಂಡಿರುವ ಶಾರ್ಜಾ ಮೈದಾನದ ಬಗ್ಗೆ ಸೌರವ್ ಗಂಗೂಲಿ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This