ಫಾಕ್ಸ್ ಸ್ಪೋಟ್ರ್ಸ್ ಕ್ರೀಡಾ ಪತ್ರಕರ್ತೆ ಈಗ ಸ್ಟಾರ್ ಸ್ಪೋಟ್ರ್ಸ್ ನಿರೂಪಕಿ
ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ 2020ರ ಐಪಿಎಲ್ ಟೂರ್ನಿ ನಡೆಯಲಿದೆ. ಈಗಾಗಲೇ ಕಣದಲ್ಲಿರುವ ಎಂಟು ತಂಡಗಳು ಕಠಿಣ ಅಭ್ಯಾಸದಲ್ಲಿ ನಿರತವಾಗಿವೆ. ಇನ್ನೊಂದೆಡೆ ಬಿಸಿಸಿಐ ಜೈವಿಕ ಸುರಕ್ಷತೆ ಮತ್ತು ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಟೂರ್ನಿಯನ್ನು ಆಯೋಜಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಈ ನಡುವೆ, ಬಿಸಿಸಿಐ ಪಂದ್ಯಗಳ ವೀಕ್ಷಕ ವಿವರಣೆಕಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮತ್ತೊಂದೆಡೆ ಪಂದ್ಯಗಳ ಪ್ರಸಾರದ ಹಕ್ಕನ್ನು ಪಡೆದುಕೊಂಡಿರುವ ಸ್ಟಾರ್ ಸ್ಪೋಟ್ರ್ಸ್ ವಾಹಿನಿಯೂ ಹೊಸ ನಿರೂಪಕಿಯನ್ನು ಆಯ್ಕೆ ಮಾಡಿಕೊಂಡಿದೆ.
ಆಸ್ಟ್ರೇಲಿಯಾದ ಪ್ರಮುಖ ಕ್ರೀಡಾ ಪತ್ರಕರ್ತೆ ಹಾಗೂ ನಿರೂಪಕಿಯಾಗಿರುವ ನೆರೋಲಿ ಮೆಡೋಸ್ ಅವರು ಸ್ಟಾರ್ ಸ್ಟೋಟ್ರ್ಸ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.
ಶಾರ್ಜಾ ಕ್ರೀಡಾಂಗಣವನ್ನು ಪರಿಶೀಲನೆ ನಡೆಸಿದ ಬಿಸಿಸಿಐ ಬಾಸ್ ಸೌರವ್ ಗಂಗೂಲಿ
ಯುಎಇ ನಲ್ಲಿ ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿರುವ ಟೂರ್ನಿಗೆ ಈಗಾಗಲೇ ಎಂಟೂ ಫ್ರಾಂಚೈಸಿಗಳು ಯುಎಇನಲ್ಲಿ ಬೀಡು ಬಿಟ್ಟಿವೆ. ಅಲ್ಲದೆ ಕಠಿಣ ಅಭ್ಯಾಸದಲ್ಲೂ ನಿರತವಾಗಿವೆ. ಯುಎಇ ನ ಮೂರು ಮೈದಾನಗಳಲ್ಲಿ ನಡೆಯಲಿರುವ ಟೂರ್ನಿಯ ಸಿದ್ಧತೆಗಳ ಬಗ್ಗೆ ಬಿಸಿಸಿಐ ಬಾಸ್ ಪರಿಶೀಲನೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಸೌರವ್ ಗಂಗೂಲಿ ಅವರು ಶಾರ್ಜಾ ಕ್ರೀಡಾಂಗಣಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲದೆ ನವೀಕರಣಗೊಂಡಿರುವ ಶಾರ್ಜಾ ಮೈದಾನದ ಬಗ್ಗೆ ಸೌರವ್ ಗಂಗೂಲಿ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.
ಕೆಕೆಆರ್ ತಂಡವನ್ನು ಸೇರಿಕೊಂಡ ಅಮೆರಿಕಾದ ವೇಗಿ ಆಲಿ ಖಾನ್
ಅಮೆರಿಕಾದ ವೇಗದ ಬೌಲರ್ ಆಲಿ ಖಾನ್ ಅವರು ಯುಎಇಗೆ ಆಗಮಿಸಿದ್ದಾರೆ. ಆಲಿ ಖಾನ್ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಲಿದ್ದಾರೆ. ಈ ಮೂಲಕ ಐಪಿಎಲ್ ನಲ್ಲಿ ಆಡಲಿರುವ ಮೊದಲ ಅಮೆರಿಕಾದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. ಸ್ಟೈಲೀಶ್ ಲುಕ್ ನಲ್ಲಿ ಬಂದಿರುವ ಆಲಿ ಖಾನ್ ಗೆ ಕೆಕೆಆರ್ ತಂಡದ ಸ್ವಾಗತ ಕೋರಿದೆ. ಆಲಿಖಾನ್ ಅವರು ಅಬುಧಾಬಿಯ ಹೊಟೇಲ್ಗೆ ಆಗಮಿಸುತ್ತಿರುವ ವಿಡಿಯೋವನ್ನು ಕೆಕೆಆರ್ ತಂಡ ತನ್ನ ಇನ್ ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದೆ. 29ರ ಹರೆಯದ ಆಲಿ ಖಾನ್ ಅವರು ಕಡೆಯ ಕ್ಷಣದಲ್ಲಿ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ.
ಐಪಿಎಲ್ 2020 ಡೆತ್ ಓವರ್ ಗಳಲ್ಲಿ ಬೌಲಿಂಗ್ ಮಾಡುವುದೇ ನನ್ನ ಗುರಿ – ಝಂಪಾ
ಆಸ್ಟ್ರೇಲಿಯಾದ ಸ್ಪಿನ್ನರ್ ಆಡಂ ಝಂಪಾ ಅವರು ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆಸ್ಟ್ರೇಲಿಯಾದ ಟ್ರಂಪ್ ಕಾರ್ಡ್ ಸ್ಪಿನ್ನರ್ ಝಂಪಾ ಅವರು ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಪರ ಶ್ರೇಷ್ಠ ಪ್ರದರ್ಶನವನ್ನು ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮುಖ್ಯವಾಗಿ ಆರ್ ಸಿಬಿ ಇನ್ನೊಬ್ಬ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಜೊತೆ ಸೇರಿಕೊಂಡು ಬೌಲಿಂಗ್ ಮಾಡುವುದನ್ನು ಝಂಪಾ ಅವರು ಎದುರು ನೋಡುತ್ತಿದ್ದಾರೆ. ಡೆತ್ ಓವರ್ ಗಳಲ್ಲಿ ಬೌಲಿಂಗ್ ಮಾಡುವುದನ್ನು ನಾನು ತುಂಬಾನೇ ಇಷ್ಟಪಡುತ್ತೇನೆ. ಇದೊಂದು ರೀತಿಯ ಒತ್ತಡ ಹಾಗೂ ಸವಾಲು. ಇಂತಹ ಸವಾಲು ಹಾಗೂ ಒತ್ತಡಗಳನ್ನು ನಿಭಾಯಿಸಿಕೊಂಡು ಹೋಗುವಂತಹ ಸಾಮಥ್ರ್ಯ ಮತ್ತು ವಿಶ್ವಾಸ ನನ್ನಲ್ಲಿದೆ ಎಂದು ಝಂಪಾ ಆತ್ಮವಿಶ್ವಾಸದಿಂದಲೇ ಹೇಳಿಕೊಂಡಿದ್ದಾರೆ.