Sports | ಕ್ರೀಡಾ ಜಗತ್ತಿನ ಇಂದಿನ ಟಾಪ್ 5 ಸುದ್ದಿಗಳು
ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ 20 ಪಂದ್ಯಗಳಿಗೆ ಶೇ.75 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಬಂಗಾಳ ಸರ್ಕಾರ ಒಪ್ಪಿಗೆ ನೀಡಿದೆ.
ಹೆಚ್ಚಿನ ಮಾಹಿತಿ : IND vs WI : ಭಾರತೀಯ ಅಭಿಮಾನಿಗಳಿ ಗುಡ್ ನ್ಯೂಸ್
ಈ ಬಾರಿಯ ಐಪಿಎಲ್ ನಲ್ಲಿ ಭಾಗವಹಿಸಲು ನಿರ್ಧರಿಸಿ, ಕೊನೆ ಕ್ಷಣದಲ್ಲಿ ಹಿಂದೆ ಸರಿದ ಆಸ್ಟ್ರೇಲಿಯಾದ ಸ್ಪೀಡ್ ಗನ್ ಮಿಚೆಲ್ ಸ್ಟಾರ್ಕ್, ತಮ್ಮ ನಿರ್ಧಾರಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ. ಐಪಿಎಲ್‌ಗಿಂತ ನನಗೆ ದೇಶವೇ ಮುಖ್ಯ, ಎಂದಿಗೂ ಆಸ್ಟ್ರೇಲಿಯಾಗೆ ನನ್ನ ಮೊದಲ ಆದ್ಯತೆಯಾಗಿರುತ್ತದೆ ಎಂದಿದ್ದಾರೆ.
ಹೆಚ್ಚಿನ ಮಾಹಿತಿ : IPLನಲ್ಲಿ ಭಾಗವಹಿಸದೇ ಇರುವ ಕಾರಣ ಬಿಚ್ಚಿಟ್ಟ ಸ್ಟಾರ್ಕ್
ಐಪಿಎಲ್ 2022 ಮೆಗಾ ಹರಾಜು ಹಿನ್ನೆಲೆಯಲ್ಲಿ 1214 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಈ ಪೈಕಿ 590 ಕ್ರಿಕೆಟಿಗರನ್ನು ಬಿಸಿಸಿಐ ಹರಾಜಿಗೆ ಆಯ್ಕೆ ಮಾಡಿದೆ. ಇದರಲ್ಲಿ 228 ಮಂದಿ ಕ್ಯಾಪ್ಡ್ ಆಟಗಾರರಾಗಿದ್ದು, 355 ಅನ್‌ಕ್ಯಾಪ್ಡ್ ಆಟಗಾರರು, ಏಳು ಮಂದಿ ಅಸೋಸಿಯೇಟ್ ದೇಶದ ಮೂಲದವರಾಗಿದ್ದಾರೆ.
ಹೆಚ್ಚಿನ ಮಾಹಿತಿ : IPL 2022 Auction : 590 ಆಟಗಾರರಿಗೆ ಫೈನಲ್ ಪಟ್ಟಿಯಲ್ಲಿ ಸ್ಥಾನ
ಮಿಲಿಯನ್ ಡಾಲರ್ ಟೂರ್ನಿ ಅಂತಾನೆ ಕರೆಸಿಕೊಳ್ಳುವ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರ್ಯಾಂಕಿಂಗ್ ನಲ್ಲಿ ಧೂಳೆಬ್ಬಿಸಿದೆ. ಯುಗೋವ್ಸ್ 2022 ಸ್ಫೋರ್ಟ್ಸ್ ಬಝ್ ಶ್ರೇಯಾಂಕದಲ್ಲಿ ಐಪಿಎಲ್ ಅಗ್ರಸ್ಥಾನದಲ್ಲಿ ನಿಂತಿದೆ. ಎರಡನೇ ಸ್ಥಾನದಲ್ಲಿ ಟೋಕಿಯೊ ಒಲಿಂಪಿಕ್ಸ್ ಇದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ ಮೂರನೇ ಸ್ಥಾನದಲ್ಲಿದೆ. ರಾಷ್ಟ್ರವ್ಯಾಪಿ ಸಮೀಕ್ಷೆಯನ್ನು ಆಧರಿಸಿ ಶ್ರೇಯಾಂಕಗಳನ್ನು ನೀಡಲಾಗಿದೆ ಎಂದು Yugovs ತಿಳಿಸಿದೆ.
ಹೆಚ್ಚಿನ ಮಾಹಿತಿ : yougov-2022-sports-buzz-rankings | ಧೂಳೆಬ್ಬಿಸಿದ ಐಪಿಎಲ್
ಟೀಂ ಇಂಡಿಯಾದ ಉಪನಾಯಕ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಲೋಗೋ ಇಂದು ಬಿಡುಗಡೆಯಾಗಿದೆ. ಲೋಗೋವನ್ನು ಬಹಳ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ ಎಂದು ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಹೇಳಿದ್ದಾರೆ. ಆದರೆ, ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಲೋಗೋದಲ್ಲಿ ದೊಡ್ಡ ತಪ್ಪೊಂದು ಎದ್ದು ಕಾಣುತ್ತಿದೆ.
ಹೆಚ್ಚಿನ ಮಾಹಿತಿ : IPL 2022 | ಲಕ್ನೋ ಸೂಪರ್ ಜೈಂಟ್ಸ್ ನ ಲೋಗೋದಲ್ಲಿ ‘ಮಿಸ್ಟೇಕ್’








