Sports | ಕ್ರೀಡಾ ಜಗತ್ತಿನ ಟಾಪ್ ಫೈವ್ ಸ್ಟೋರೀಸ್ Sports | Top Five Stories of the Sports World
01. ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಹೊಸ ಸೀಜನ್.. ಹೊಸ ಜರ್ಸಿ ಎನ್ನುತ್ತಾ ತಂಡದ ನ್ಯೂ ಜರ್ಸಿಯನ್ನು ರಿಲೀಸ್ ಮಾಡಿದೆ. ಆರೆಂಜ್, ಬ್ಲಾಕ್ ಕಲರ್ ನಲ್ಲಿರುವ ಜರ್ಸಿಗೆ ಎಸ್ ಆರ್ ಹೆಚ್ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಜೆರ್ಸಿಯಲ್ಲಿ ರಸ್ನಾ ವೈಬ್ಸ್ ಇದೆ ಎಂದು ಕೆಲವರು ತಮಾಷೆಯ ಕಾಮೆಂಟ್ಗಳನ್ನು ಮಾಡಿದ್ರೆ.. ಇನ್ನು ಕೆಲವರು ಫನ್ನಿ ಮೀಮ್ಗಳೊಂದಿಗೆ ಟ್ರೋಲ್ ಮಾಡುತ್ತಿದ್ದಾರೆ.
02. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರಸಿದ್ಧ್ ಕೃಷ್ಣ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಪ್ರಸಿದ್ಧ ಕೃಷ್ಣ ವಿಂಡೀಸ್ ಬ್ಯಾಟರ್ಗಳನ್ನು ಅದ್ಭುತ ವೇಗದಿಂದ ಬೆದರಿಸಿದರು. ಇದುವರೆಗೂ ಭಾರತದ ಪಿಚ್ಗಳಲ್ಲಿ ಇಂತಹ ಸ್ಪೆಲ್ ಅನ್ನು ನಾನು ನೋಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
03. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಒಡಿಯನ್ ಸ್ಮಿತ್ ಕೊಟ್ಟ ಕ್ಯಾಚ್ ಅನ್ನು ತೆಗೆದುಕೊಂಡ ವಿರಾಟ್ ಕೊಹ್ಲಿ, ತಮ್ಮದೇಯಾದ ಶೈಲಿಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ವೆಸ್ಟ್ ಇಂಡೀಸ್ ನ 45ನೇ ಓವರನ್ನು ವಾಷಿಂಗ್ ಟನ್ ಸುಂದರ್ ಎಸೆದಿದ್ದು, ಒಡಿಯನ್ ಸ್ಮಿತ್ ಭಾರಿ ಶಾಟ್ ಗೆ ಮುಂದಾದರು. ಅದು ಮಿಸ್ ಟೈಮ್ ಆಗಿತ್ತು. ಈ ವೇಳೆ ಬೌಂಡರಿ ಲೈನ್ ನಲ್ಲದ್ದ ವಿರಾಟ್ ಕೊಹ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದರು.
04. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಲ್ ರೌಂಡರ್ ದೀಪಕ್ ಹೂಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಹೂಡಾ, ವಿರಾಟ್ ಕೊಹ್ಲಿಯಿಂದ ಟೀಂ ಇಂಡಿಯಾದ ಕ್ಯಾಪ್ ಪಡೆದಿದ್ದು ಖುಷಿ ತಂದಿದೆ. ಅವರಿಗೆ ಕ್ಯಾಪ್ ಪಡೆಯೋದು ನನ್ನ ಚಿಕ್ಕಂದಿನ ಕನಸು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
05. ಅಂಡರ್ 19 ವಿಶ್ವಕಪ್ನಲ್ಲಿ ಸಂಚಲನ ಮೂಡಿಸಿದ್ದ ದಕ್ಷಿಣ ಆಫ್ರಿಕಾದ ಬೇಬಿ ಡಿವಿಲಿಯರ್ಸ್ ಖ್ಯಾತಿತ ಡೆವಾಲ್ಡ್ ಬ್ರೆವಿಸ್ ಅಪರೂಪದ ಸಾಧನೆ ಮಾಡಿದ್ದಾರೆ. ಸಿನಿಯರ್ ತಂಡದಲ್ಲಿ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನಾಡದ ಬ್ರೆವಿಸ್, ಪ್ರತಿಷ್ಠಿತ ICC ಪ್ಲೆಯರ್ ಆಫ್ ದಿ ಮಂತ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ









