ADVERTISEMENT
Monday, August 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೇರಳ ರಣಜಿ ತಂಡದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಕೊಚ್ಚಿ ಎಕ್ಸ್ ಪ್ರೆಸ್ ಶ್ರೀಶಾಂತ್

admin by admin
June 18, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಕೇರಳ ರಣಜಿ ತಂಡದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಕೊಚ್ಚಿ ಎಕ್ಸ್ ಪ್ರೆಸ್ ಶ್ರೀಶಾಂತ್

ಟೀಮ್ ಇಂಡಿಯಾದ ವೇಗಿ ಶ್ರೀಶಾಂತ್‍ಗೆ ಇದು ಶುಭ ಸುದ್ದಿ. ಏಳು ವರ್ಷಗಳ ನಂತರ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯುವ ಅವಕಾಶವನ್ನು ಕೇರಳ ಕ್ರಿಕೆಟ್ ಮಂಡಳಿ ನೀಡಿದೆ. 2013ರ ಐಪಿಎಲ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿ ಏಳು ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ಶ್ರೀಶಾಂತ್ ಮತ್ತೆ ದೇಶಿ ಕ್ರಿಕೆಟ್‍ಗೆ ಎಂಟ್ರಿಯಾಗಲಿದ್ದಾರೆ.

Related posts

hardik-pandya-tirupati-balaji-darshan-news

Teamindia – ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದ ಹಾರ್ದಿಕ್ ಪಾಂಡ್ಯ..! ಬಾಲಾಜಿಗೆ ಮುಡಿಕೊಟ್ಟಿರುವುದು ಯಾಕೆ ಪಾಂಡ್ಯಾ..?

August 2, 2026
jaismine-lamboria-life-story-commonwealth-games-gold

cwg-2026- ಆಸ್ಪತ್ರೆಯಿಂದ ಕಾಮನ್‌ವೆಲ್ತ್ ಚಿನ್ನದವರೆಗೆ..! ಬಾಕ್ಸಿಂಗ್ ರಾಣಿಯ ಹೋರಾಟದ ಯಶೋಗಾಥೆ..!

August 2, 2026

ಏಳು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದ ಶ್ರೀಶಾಂತ್ ಅವರು ಚಡಪಡಿಸುತ್ತಿದ್ದರು. ಇದೀಗ ಅವರ ಶಿಕ್ಷೆಯ ಅವಧಿ 2020ರ ಸೆಪ್ಟಂಬರ್ ನಲ್ಲಿ ಮುಗಿಯಲಿದೆ. ಹೀಗಾಗಿ ಕೇರಳ ರಣಜಿ ತಂಡಕ್ಕೆ ಮತ್ತೆ ವಾಪಸ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಆದ್ರೆ ಅದಕ್ಕಿಂತ ಮೊದಲು ಶ್ರೀಶಾಂತ್ ಫಿಟ್‍ನೆಸ್ ಸಾಬೀತುಪಡಿಸಬೇಕಾಗಿದೆ. 2013ರ ಮೇ ತಿಂಗಳಿನಲ್ಲಿ ಶ್ರೀಶಾಂತ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಸ್ಪಾಟ್ ಫಿಕಿಂಗ್ಸ್ ಆರೋಪದಡಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಪರ ಆಡುತ್ತಿದ್ದ ಶ್ರೀಶಾಂತ್ ಸೇರಿ ಅಜಿತ್ ಚಾಂಡಿಲ್ಯ ಮತ್ತು ಅಂಕಿತ್ ಚಾವನ್‍ರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಅಲ್ಲದೆ ಬಿಸಿಸಿಐ ಈ ಮೂವರು ಆಟಗಾರರಿಗೆ ಅಜೀವ ನಿಷೇಧದ ಶಿಕ್ಷೆಯನ್ನು ವಿಧಿಸಿತ್ತು. ಆದ್ರೆ ಶ್ರೀಶಾಂತ್ ತನ್ನ ಮೇಲಿನ ಆರೋಪ ಸುಳ್ಳು ಅಂತ ಕಾನೂನು ಹೋರಾಟ ನಡೆಸಿದ್ದರು. 2015ರಲ್ಲಿ ದೆಹಲಿ ವಿಶೇಷ ಕೋರ್ಟ್ ಶ್ರೀಶಾಂತ್ ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಆದ್ರೆ ಬಿಸಿಸಿಐನ ಅಜೀವ ನಿಷೇಧದ ಶಿಕ್ಷೆ ಹಾಗೇ ಉಳಿದಿತ್ತು. ಬಳಿಕ 2018ರಲ್ಲಿ ಕೇರಳ ಹೈಕೋರ್ಟ್ ಬಿಸಿಸಿಐ ನಿಷೇಧವನ್ನು ಪ್ರಶ್ನೆ ಮಾಡಿತ್ತು. ಹಾಗೇ 2019ರಲ್ಲಿ ಸುಪ್ರೀಮ್ ಕೋರ್ಟ್ ಬಿಸಿಸಿಐಗೆ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ಆದೇಶ ನೀಡಿತ್ತು. ಹೀಗಾಗಿ ಶ್ರೀಶಾಂತ್‍ಗೆ ಏಳು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿತ್ತು.
ಕೇರಳ ಕ್ರಿಕೆಟ್ ಸಂಸ್ಥೆಗೆ ನಾನು ಅಭಾರಿಯಾಗಿದ್ದೇನೆ. ಕೇರಳ ಕ್ರಿಕೆಟ್ ಸಂಸ್ಥೆಯು ನನಗೆ ಮತ್ತೊಂದು ಅವಕಾಶ ನೀಡಿದೆ. ನಾನು ನನ್ನ ದೈಹಿಕ ಕ್ಷಮತೆಯನ್ನು ಸಾಬೀತುಪಡಿಸುತ್ತೇನೆ. ಅಲ್ಲದೆ ಮತ್ತೆ ಮೈದಾನಕ್ಕಿಳಿಯುತ್ತೇನೆ. ಎಲ್ಲಾ ಆರೋಪ, ವಿವಾದಗಳಿಗೆ ಈಗ ತೆರೆ ಎಳೆಯುವ ಸಮಯ ಅಂತ ಶ್ರೀಶಾಂತ್ ಹೇಳಿದ್ದಾರೆ.
ಕೇರಳ ಕ್ರಿಕೆಟ್ ಸಂಸ್ಥೆಯು ಶ್ರೀಶಾಂತ್ ಆಗಮನವನ್ನು ಸ್ವಾಗತಿಸುತ್ತದೆ. ಆದ್ರೆ ಅವರು ಫಿಟ್‍ನೆಸ್ ಪ್ರೂವ್ ಮಾಡಬೇಕಾಗುತ್ತದೆ. ಶ್ರೀಶಾಂತ್ ಒಬ್ಬ ಅನುಭವಿ ಬೌಲರ್. ಹಾಗಾಗಿ ಕೇರಳ ತಂಡಕ್ಕೆ ಹೆಚ್ಚಿನ ಶಕ್ತಿ ತುಂಬಲಿದ್ದಾರೆ ಎಂದು ಕೇರಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸಾಜನ್ ಕೆ ವರ್ಗೀಸ್ ಹೇಳಿದ್ದಾರೆ. ಇತ್ತೀಚೆಗೆ ಕೇರಳ ರಣಜಿ ತಂಡಕ್ಕೆ ಟೀಮ್ ಇಂಡಿಯಾದ ಮಾಜಿ ಬೌಲರ್ ಟಿನೂ ಯೋಹಾನನ್ ಅವರು ಹೆಡ್ ಕೋಚ್ ಆಗಿ ನೇಮಕಗೊಳಿಸಲಾಗಿದೆ.
ಕೇರಳದ ಕೊಚ್ಚಿ ಮೂಲದ ಶ್ರೀಶಾಂತ್, 27 ಟೆಸ್ಟ್ ಪಂದ್ಯಗಳಲ್ಲಿ 87 ವಿಕೆಟ್‍ಗಳನ್ನು ಉರುಳಿಸಿದ್ದಾರೆ. ಹಾಗೇ 75 ಏಕದಿನ ಪಂದ್ಯಗಳಲ್ಲಿ ವಿಕೆಟ್ ಕಬಳಿಸಿದ್ದಾರೆ. 2007ರ ಟಿ-ಟ್ವೆಂಟಿ ಮತ್ತು 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲೂ ಶ್ರೀಶಾಂತ್ ಇದ್ರು. ಇನ್ನು ಶ್ರೀಶಾಂತ್ ಆಟದಷ್ಟೇ ವಿವಾದಕ್ಕೂ ಕಾರಣರಾಗಿದ್ದರು. ಮೈದಾನದಲ್ಲಿ ಅವರ ಆಕ್ರಮಣಕಾರಿ ಪ್ರವೃತ್ತಿಯನ್ನು ಹಿಡಿತದಲ್ಲಿಟ್ಟುಕೊಳ್ಳುವುದೇ ನಾಯಕನಿಗೆ ದೊಡ್ಡ ತಲೆನೋವಾಗಿತ್ತು. ಹಾಗೇ ಹರ್ಭಜನ್ ಸಿಂಗ್ ಜೊತೆ ಮಾತು ಬೆಳೆಸಿಕೊಂಡು ಕಪಾಳ ಮೋಕ್ಷ ಕೂಡ ಮಾಡಿಕೊಂಡಿದ್ದರು. ಆಸ್ಟ್ರೇಲಿಯಾ ಆಟಗಾರರ ವಿರುದ್ಧವಂತೂ ಜಗಳಕ್ಕೆ ಮುಗಿ ಬೀಳ್ತಾ ಇದ್ರು. ಈ ನಡುವೆ ರಾಜಕೀಯವಾಗಿಯೂ ಶ್ರೀಶಾಂತ್ ಗುರುತಿಸಿಕೊಂಡಿದ್ದರು. ತಿರುವನಂತಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶ್ರೀಶಾಂತ್, ಕಾಂಗ್ರೆಸ್‍ನ ವಿ.ಎಸ್. ಶಶಿ ತರೂರು ವಿರುದ್ಧ ಸೋಲು ಅನುಭವಿಸಿದ್ದರು.

Tags: bcciICCkerala ranaj teamspot fixingsreeshanthteam india
ShareTweetSendShare
Join us on:

Related Posts

hardik-pandya-tirupati-balaji-darshan-news

Teamindia – ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದ ಹಾರ್ದಿಕ್ ಪಾಂಡ್ಯ..! ಬಾಲಾಜಿಗೆ ಮುಡಿಕೊಟ್ಟಿರುವುದು ಯಾಕೆ ಪಾಂಡ್ಯಾ..?

by admin
August 2, 2026
0

ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ತಮ್ಮ ಗೆಳತಿ ಮಹೀಕಾ ಶರ್ಮಾ ಜೊತೆ ಹಾರ್ದಿಕ್ ಪಾಂಡ್ಯ ತಿರುಮಲ ವೆಂಕಟೇಶ್ವರನಿಗೆ...

jaismine-lamboria-life-story-commonwealth-games-gold

cwg-2026- ಆಸ್ಪತ್ರೆಯಿಂದ ಕಾಮನ್‌ವೆಲ್ತ್ ಚಿನ್ನದವರೆಗೆ..! ಬಾಕ್ಸಿಂಗ್ ರಾಣಿಯ ಹೋರಾಟದ ಯಶೋಗಾಥೆ..!

by admin
August 2, 2026
0

ಸುಮಾರು ಒಂದುವರೆ ತಿಂಗಳ ಹಿಂದೆ. ಆಕೆ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಳು. ಗ್ಲೌಸ್ ಧರಿಸಿ ಅಭ್ಯಾಸ ನಡೆಸಬೇಕಿದ್ದ ಕೈಗಳಿಗೆ ಚಿಕಿತ್ಸೆಯ ಸೂಜಿಗಳು ಚುಚ್ಚಿಕೊಂಡಿದ್ದವು. ಹಲವು ದಿನಗಳ ಕಾಲ...

ecchara-5-rashigalige-shani-kata-mooru-dina-astrology-kannada

Astro-ಎಚ್ಚರ.. ಎಚ್ಚರ.. ನಾಳೆಯಿಂದ ಮೂರು ದಿನ ಈ 5 ರಾಶಿಯವರಿಗೆ ಶನಿಕಾಟ..!

by admin
August 2, 2026
0

ನಾಳೆಯಿಂದ ಮೂರು ದಿನ ಕೆಲ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಬೇಕು. ಈ ದಿನ ಶನಿ ಹಾಗೂ ಚಂದ್ರನ ಸಂಯೋಗದಿಂದಾಗಿ ಅತ್ಯಂತ ಅಶುಭ ಯೋಗ ಸೃಷ್ಟಿಯಾಗಲಿದೆ. ಇದು ಕೆಲ...

84 ರೂಪಾಯಿಗೆ ಪೆಟ್ರೋಲ್ ಸಿಗಲೇಬೇಕು- ಆಗಸ್ಟ್ 4ಕ್ಕೆ ಪ್ರಧಾನಿ ನಿವಾಸ ಮುತ್ತಿಗೆ ಹಾಕಲಿರುವ ಕೇಜ್ರಿವಾಲ್:ರಾಹುಲ್ ಗಾಂಧಿ ಹಾದಿಯಲ್ಲಿ ಕೇಜ್ರಿವಾಲ್!

84 ರೂಪಾಯಿಗೆ ಪೆಟ್ರೋಲ್ ಸಿಗಲೇಬೇಕು- ಆಗಸ್ಟ್ 4ಕ್ಕೆ ಪ್ರಧಾನಿ ನಿವಾಸ ಮುತ್ತಿಗೆ ಹಾಕಲಿರುವ ಕೇಜ್ರಿವಾಲ್:ರಾಹುಲ್ ಗಾಂಧಿ ಹಾದಿಯಲ್ಲಿ ಕೇಜ್ರಿವಾಲ್!

by Shwetha
August 2, 2026
0

ನವದೆಹಲಿ: ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಭಾರಿ ಹೋರಾಟಕ್ಕೆ ಕರೆ ನೀಡಿದೆ. ಆಗಸ್ಟ್ 4 ರಂದು ದೆಹಲಿಯ ಮಾಜಿ...

ಮಳೆಯ ಅಬ್ಬರದಿಂದ ಕಾವೇರಿ ಜಲಾಶಯಗಳಿಗೆ ಒಳಹರಿವು ಹೆಚ್ಚಳ

ಮಳೆಯ ಅಬ್ಬರದಿಂದ ಕಾವೇರಿ ಜಲಾಶಯಗಳಿಗೆ ಒಳಹರಿವು ಹೆಚ್ಚಳ

by Shwetha
August 2, 2026
0

ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆಆರ್‌ಎಸ್‌,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram