SRH vs PBKS Match preview : ಪಂಜಾಬ್ ತಂಡದ ಪ್ಲೇಯಿಂಗ್ 11
ಏಪ್ರಿಲ್ 17. 15ನೇ ಆವೃತ್ತಿಯ ಐಪಿಎಲ್ ಟೂರ್ನಿ. ಮ್ಯಾಚ್ ನಂಬರ್ 28. ಸಮಯ -ಮಧ್ಯಾಹ್ನ 3.30. ಡಿ.ವೈ. ಪಾಟೀಲ್ ಅಂಗಣ. ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ ತಂಡಗಳ ಮುಖಾಮುಖಿ
ಪಂಜಾಬ್ ತಂಡಕ್ಕೆ ಈವರೆಗೂ ಉತ್ತಮ ಆರಂಭದ ಕೊರತೆ ಕಾಣುತ್ತಿತ್ತು. ಆದ್ರೆ ಕಳೆದ ಪಂದ್ಯದಲ್ಲಿ ಆ ಸಮಸ್ಯೆಗೆ ಪರಿಹಾರ ಸಿಕ್ಕಂತೆ ಆಗಿದೆ. ಮಯಾಂಕ್ ಅಗರ್ ವಾಲ್ ಫಾರ್ಮ್ ಗೆ ಬಂದಿರೋದು ತಂಡಕ್ಕೆ ಬೂಸ್ಟ್ ನೀಡಿದೆ.
ಇನ್ನುಳಿದಂತೆ ಶಿಖರ್ ಧವನ್, ಜಾನಿ ಬೈರ್ ಸ್ಟೋ, ಲಿಯಾಮ್ ಲಿವಿಂಗ್ ಸ್ಟೋನ್, ಶಾರೂಕ್ ಖಾನ್, ಒಡಿಯನ್ ಸ್ಮಿತ್ ತಂಡದ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ.
ಇವರಿಗೆ ಜಿತೇಶ್ ಶರ್ಮಾ ಕೂಡ ಉತ್ತಮ ಸಾಥ್ ನೀಡುತ್ತಿದ್ದಾರೆ. ಇತ್ತ ಬೌಲಿಂಗ್ ನಲ್ಲಿ ಕಗಿಸೋ ರಬಾಡ, ವೈಭವ್ ಅರೋರ ಉತ್ತಮ ಫಾರ್ಮ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಉಳಿದಂತೆ ರಾಹುಲ್ ಚಹಾರ್, ಅರ್ಷದೀಪ್ ಸಿಂಗ್ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಬೇಕಿದೆ.
ಇಂದಿನ ಪಂದ್ಯದಲ್ಲಿ ಪಂಜಾಬ್ ತಂಡದಲ್ಲಿ ಬದಲಾವಣೆಗಳು ಆಗುವುದು ತೀರಾ ಕಡಿಮೆ.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ಮಯಾಂಕ್ ಅಗರ್ ವಾಲ್ (ನಾಯಕ)
ಶಿಖರ್ ಧವನ್
ಜಾನಿ ಬೇರ್ ಸ್ಟೋವ್
ಲಿಯಾಮ್ ಲಿವಿಂಗ್ ಸ್ಟೋನ್
ಶಾರೂಕ್ ಖಾನ್
ಜಿತೇಶ್ ಶರ್ಮಾ
ಒಡಿಯನ್ ಸ್ಮಿತ್
ಕಾಗಿಸೊ ರಬಾಡ
ರಾಹುಲ್ ಚಾಹರ್
ಆರ್ಶದೀಪ್ ಸಿಂಗ್
ಪಂಜಾಬ್ ಕಿಂಗ್ಸ್ ತಂಡ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದೆ. ಅದೇ ಜೋಷ್ ನಲ್ಲಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಆವೃತ್ತಿಯಲ್ಲಿ ಪಂಜಾಬ್ ಐದು ಪಂದ್ಯಗಳನ್ನು ಆಡಿದೆ. ಇದರಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
SRH vs PBKS Match preview Punjab team Playing 11