Asia Cup | ಶ್ರೀಲಂಕಾಗೆ ಮತ್ತೊಂದು ಶಾಕ್

1 min read
sri-lanka-likely-lose-asia-cup-2022-hosting-rights saaksha tv

Asia Cup | ಶ್ರೀಲಂಕಾಗೆ ಮತ್ತೊಂದು ಶಾಕ್

ಏಷ್ಯಾ ಕಪ್ 2022 ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ಶ್ರೀಲಂಕಾದಲ್ಲಿ ನಡೆಯಲಿದೆ. ಆದ್ರೆ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಅನ್ನು ಬೇರೆಡೆಗೆ ಸ್ಥಳಾಂತರಿಸಲು ಐಸಿಸಿ ಮುಂದಾಗಿದೆ ಎನ್ನಲಾಗಿದೆ.

 ಭಾನುವಾರ (ಏಪ್ರಿಲ್ 17) ದುಬೈನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತ್ರೈಮಾಸಿಕ ಸಭೆಯಲ್ಲಿ ಸ್ಥಳ ಬದಲಾವಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.

sri-lanka-likely-lose-asia-cup-2022-hosting-rights saaksha tv

ಈ ವರ್ಷದ ಏಷ್ಯನ್ ಕಪ್ ಟಿ20 ಮಾದರಿಯಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸುತ್ತಿವೆ.

ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ತಂಡಗಳು ಈಗಾಗಲೇ ಪಂದ್ಯಾವಳಿಗೆ ಅರ್ಹತೆ ಪಡೆದಿವೆ.

ಅರ್ಹತಾ ಪಂದ್ಯಾವಳಿಯ ನಂತರ ಮತ್ತೊಂದು ತಂಡ ಸೇರಿಕೊಳ್ಳಲಿದೆ. ಕಳೆದ ಏಷ್ಯನ್ ಟಿ20 ಕಪ್ 2016 ಬಾಂಗ್ಲಾದೇಶದಲ್ಲಿ ನಡೆದಿತ್ತು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd