ಭಾರತಕ್ಕೆ ಧನ್ಯವಾದ ಅರ್ಪಿಸಿದ ಶ್ರೀಲಂಕಾ
ಕೊಲೊಂಬೋ : ಆರ್ಥಿಕವಾಗಿ ಕುಸಿದಿದ್ದ ಶ್ರೀಲಂಕಾಕ್ಕೆ ಭಾರತ ಸಹಾಯ ಮಾಡಿದ್ದು, ಭಾರತಕ್ಕೆ ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಧನ್ಯವಾದವನ್ನು ಸಲ್ಲಿಸಿದ್ದಾರೆ.
ಸೋಮವಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿದ ಶ್ರೀಲಂಕಾದ ಅಧ್ಯಕ್ಷ, ಆಹಾರ ಮತ್ತು ಔಷಧಿ ಸೇರಿದಂತೆ ಅಗತ್ಯ ಸರಕುಗಳ ಆಮದುಗಾಗಿ ಯುಡಿಎಸ್ 1 ಬಿಲಿಯನ್ ಕ್ರೆಡಿಟ್ ಲೈನ್ ಅನ್ನು ಒದಗಿಸಿದ್ದಕ್ಕಾಗಿ ಭಾರತಕ್ಕೆ ಧನ್ಯವಾದ ಹೇಳಿದರು.
Pleased to call on President @GotabayaR of Sri Lanka.
Reviewed various dimensions of our close neighbourly relationship.
Assured him of India’s continued cooperation and understanding. pic.twitter.com/xAvCEuxhYV
— Dr. S. Jaishankar (@DrSJaishankar) March 28, 2022
ಭಾರತ ಮತ್ತು ಶ್ರೀಲಂಕಾ ನಡುವಿನ ರಾಜತಾಂತ್ರಕ ಸಂಬಂಧ ಏರ್ಪಟ್ಟು 75 ವರ್ಷಗಳಾಗಿವೆ, ಈ ಹಿನ್ನಲೆಯಲ್ಲಿ 75ನೇ ವಾರ್ಷಿಕೋತ್ಸವ ನೆನಪಿಗಾಗಿ ನಾಣ್ಯಗಳು ಮತ್ತು ಅಂಚೆಚೀಟಿ ಬಿಡುಗಡೆ ಸೇರಿದಂತೆ ಹಲವಾರು ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಜೈಶಂಕರ್, ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರನ್ನು ಭೇಟಿ ಮಾಡಲು ಸಂತೋಷವಾಗಿದೆ. ನಮ್ಮ ನೆರೆಹೊರೆಯ ಸಂಬಂಧದ ವಿವಿಧ ಆಯಾಮಗಳನ್ನು ಪರಿಶೀಲಿಸಲಾಗಿದೆ. ಭಾರತದ ನಿರಂತರವಾಗಿ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.
ಮೂರು ದಿನಗಳ ಕಾಲ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಶ್ರೀಲಂಕಾ ಪ್ರವಾಸದಲ್ಲಿದ್ದು, ಇಂದಿನಿಂದ ಕೊಲಂಬೊದಲ್ಲಿ ಪ್ರಾರಂಭವಾಗುವ 5ನೇ ಬಿಮ್‍ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.