SSC ವಿವಿಧ ಪರೀಕ್ಷೆಗಳ ದಿನಾಂಕ ಬಿಡುಗಡೆ – ಸಂಪೂರ್ಣ ಮಾಹಿತಿ
ನವದೆಹಲಿ : SSC ವಿವಿಧ ಪರೀಕ್ಷೆಗಳ ದಿನಾಂಕ ಬಿಡುಗಡೆಯಾಗಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ ಸಿಬ್ಬಂದಿ ಆಯ್ಕೆ ಆಯೋಗ ಅಥವಾ ಎಸ್ಎಸ್ಸಿ ಕಾನ್ಸ್ಟೇಬಲ್ಗಳ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ (ಸಾಮಾನ್ಯ ಕರ್ತವ್ಯ ಅಥವಾ ಜಿಡಿ) ದಿನಾಂಕ ನಿಗದಿಯಾಗಿದೆ. ನವೆಂಬರ್ ನಿಂದ ಡಿಸೆಂಬರ್ ವರೆಗೂ SSS ವಿವಿಧ ಪರೀಕ್ಷೆಗಳು ನಡೆಯಲಿದೆ. ಆಯೋಗವು ಇಂದು ಬಿಡುಗಡೆ ಮಾಡಿದ ಪ್ರಕಟಣೆಯಲಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ಅಸ್ಸಾಂ ರೈಫಲ್ಸ್ ಗೆ ಎಸ್ಎಸ್ಸಿ ಕಾನ್ಸ್ಟೇಬಲ್ ಜಿಡಿ ನೇಮಕಾತಿಗೆ ಪರೀಕ್ಷೆ ನಡೆಎಸಲಾಗ್ತಿದೆ.
ಕೊಲ್ಕತ್ತಾ – ಬಿಜೆಪಿ ಸಂಸದನ ಮನೆ ಮೇಲೆ ಬಾಂಬ್ ದಾಳಿ – ಟಿಎಂಸಿ ಕೈವಾಡ..?
SSC ಕಾನ್ಸ್ಟೇಬಲ್ GD ಪರೀಕ್ಷೆಯು ನವೆಂಬರ್ 16, 2021 ರಿಂದ ಡಿಸೆಂಬರ್ 15, 202 ರವರೆಗೆ ನಡೆಯಲಿದೆ. ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ (CHSL) ಪರೀಕ್ಷೆಯ ಕೌಶಲ್ಯ ಪರೀಕ್ಷೆ 2019, ನವೆಂಬರ್ 3, 2021 ರಂದು ನಡೆಯಲಿದೆ.ದೆಹಲಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಪರೀಕ್ಷೆ 2020 ರಲ್ಲಿ ಸಬ್ ಇನ್ಸ್ಪೆಕ್ಟರ್ ನೇಮಕಾತಿಯ ಪೇಪರ್ 2 ನವೆಂಬರ್ 8, 2021 ರಂದು ನಡೆಯಲಿದೆ. SSC ಈ ವರ್ಷ ನವೆಂಬರ್ 11 ರಿಂದ 15 ರವರೆಗೆ ಸ್ಟೆನೋಗ್ರಾಫರ್ ಗ್ರೇಡ್ ‘C’ & ‘D’ ಪರೀಕ್ಷೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಿದೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆ ಕೆಲ ಷರುತ್ತುಗಳು ಅನ್ವಯವಾಗಿರಲಿದ್ದು, ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿರುತ್ತೆ. ಹೆಚ್ಚಿನ ಅಪ್ಡೇಟ್ಗಳಿಗಾಗಿ ಅಭ್ಯರ್ಥಿಗಳು ಆಯೋಗದ ವೆಬ್ಸೈಟ್ಗೆ ನಿಯಮಿತ ಅಂತರದಲ್ಲಿ ಭೇಟಿ ನೀಡುವಂತೆ ಸೂಚಿಸಲಾಗಿದೆ. ಎಸ್ಎಸ್ಸಿ ಕಾನ್ಸ್ಟೇಬಲ್ ಜಿಡಿ ನೇಮಕಾತಿಗಾಗಿ, ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ದೈಹಿಕ ಗುಣಮಟ್ಟ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.








