SSC GD Vacancy 2023 : ಕಾನ್‌ಸ್ಟೆಬಲ್ ಹುದ್ದೆಗಳ ಸಂಖ್ಯೆ 50,187 ಕ್ಕೆ ಹೆಚ್ಚಿಸಿದ SSC
ಕೇಂದ್ರೀಯ ಸಶಸ್ತ್ರ ಪಡೆಗಳಾದ ಬಿಎಸ್‌ಎಫ್, ಸಿಆರ್‌ಪಿಎಫ್, ಎಸ್‌ಎಸ್‌ಎಫ್ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಕಾನ್‌ಸ್ಟೆಬಲ್/ರೈಫಲ್‌ಮ್ಯಾನ್/ಸೆಪಾ ಹುದ್ದೆಗಳ General Duty ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಶುಭ ಸುದ್ದಿ ನೀಡಿದೆ. ಸೋಮವಾರ ಮತ್ತೊಮ್ಮೆ ಹುದ್ದೆಗಳ ಸಂಖ್ಯೆಯನ್ನ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.
ಇತ್ತೀಚೆಗೆ, SSC ಹುದ್ದೆಗಳ ಸಂಖ್ಯೆಯನ್ನ 50,187 ಕ್ಕೆ ಹೆಚ್ಚಿಸುವುದಾಗಿ ಪ್ರಕಟಣೆ ಯಲ್ಲಿ ತಿಳಿಸಿದೆ. ಮೊದಲ CAPF ಜನರಲ್ ಡ್ಯೂಟಿ ಕಾನ್ಸ್ಟೇಬಲ್ ಉದ್ಯೋಗ ನೇಮಕಾತಿ ಅಧಿಸೂಚನೆಯಲ್ಲಿ, ಆಯೋಗ 24,369 ಪೋಸ್ಟ್ಗಳನ್ನ ಪ್ರಕಟಿಸಿತ್ತು. ನಂತರ ಕಳೆದ ವರ್ಷ ನವೆಂಬರ್ ನಲ್ಲಿ ಹುದ್ದೆಗಳ ಸಂಖ್ಯೆಯನ್ನು 45,284ಕ್ಕೆ ಹೆಚ್ಚಿಸಲು ನಿರ್ಧರಿಸಿತ್ತು. ಈ ವರ್ಷದ ಫೆಬ್ರವರಿಯಲ್ಲಿ 1,151 ಹುದ್ದೆಗಳನ್ನ ಸೇರಿಸಲಾಗಿದ್ದು, ಒಟ್ಟು ಹುದ್ದೆಗಳ ಸಂಖ್ಯೆಯನ್ನ 46,435 ಕ್ಕೆ ಹೆಚ್ಚಿಸಲಾಗಿದೆ. ಇತ್ತೀಚೆಗೆ, ಐಟಿಬಿಪಿ ಇಲಾಖೆಯಲ್ಲಿ ಇನ್ನೂ 3,257 ಹುದ್ದೆಗಳ ಸೇರ್ಪಡೆಯೊಂದಿಗೆ ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ 50,187 ಕ್ಕೆ ಏರಿದೆ.
ಇದರೊಂದಿಗೆ ಬಿಎಸ್‌ಎಫ್‌ನಲ್ಲಿ 21,052 ಹುದ್ದೆಗಳು, ಸಿಐಎಸ್‌ಎಫ್‌ನಲ್ಲಿ 6,060 ಹುದ್ದೆಗಳು, ಸಿಆರ್‌ಪಿಎಫ್‌ನಲ್ಲಿ 11,169 ಹುದ್ದೆಗಳು, ಎಸ್‌ಎಸ್‌ಬಿಯಲ್ಲಿ 2,274 ಹುದ್ದೆಗಳು, ಐಟಿಬಿಪಿಯಲ್ಲಿ 5,642 ಹುದ್ದೆಗಳು, ಎಆರ್‌ಎಸ್‌ಎಫ್‌ನಲ್ಲಿ 3,601 ಹುದ್ದೆಗಳು ಏರಿಕೆಯಾಗಿವೆ.
ಈ ನಡುವೆ ಕಾನ್‌ಸ್ಟೆಬಲ್ (ಜಿಡಿ) / ರೈಫಲ್‌ಮ್ಯಾನ್ (ಜಿಡಿ) ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಈ ವರ್ಷದ ಜನವರಿಯಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಯಿತು. ಈ ಪರೀಕ್ಷೆಯ ಪ್ರಾಥಮಿಕ ಉತ್ತರ ಕೀಯನ್ನು ಫೆಬ್ರವರಿ 18 ರಂದು ಬಿಡುಗಡೆ ಮಾಡಲಾಗಿದ್ದು, ಫಲಿತಾಂಶ ಪ್ರಕಟವಾದ ನಂತರ ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸಿ ಅಂತಿಮ ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು.
SSC GD Vacancy 2023 : SSC has increased the number of constable posts to 50,187….