ಬೆಂಗಳೂರು: ತಿರುಪತಿ ಕಾಲ್ತುಳಿತ (Tirupati Stampede) ದುರಂತ ಪ್ರಕರಣದ ನಂತರ ಈಗ ಬೆಂಗಳೂರಿನಲ್ಲಿನ ಟಿಟಿಡಿ ದೇವಸ್ಥಾನದ (TTD Temple) ಭದ್ರತೆಯನ್ನು ಪೊಲೀಸರು ಪರಿಶೀಲಿಸಿದ್ದಾರೆ.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಟಿಟಿಡಿ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆ ಕುರಿತು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಾಳೆ ಭಕ್ತರ ಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಪರಿಶೀಲಿಸಿದ್ದಾರೆ. ಹೀಗಾಗಿ ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಗಳ ಅಳವಡಿಕೆ ಮಾಡಲಾಗಿದೆ.
ಪೊಲೀಸರು ಕ್ಯೂ ಸಿಸ್ಟಮ್ ಹೆಚ್ಚಳಕ್ಕೆ ಹೇಳಿದ್ದಾರೆ. ಕ್ಯೂ ಸಿಸ್ಟಮ್ ಇನ್ನೂ ಹೆಚ್ಚು ಮಾಡುತ್ತೇವೆ. ಬ್ಯಾರಿಕೇಡ್ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ಹೆಚ್ಚು ಜನ ಸಿಬ್ಬಂದಿ ನೇಮಕ ಮಾಡುವಂತೆ ಸೂಚಿಸಿದ್ದಾರೆ. ಅಲ್ಲದೇ, ಸ್ಥಳೀಯರು ಪಾಸ್ ಕೊಡುವಂತೆ ದೇವಸ್ಥಾನದಲ್ಲಿ ಗಲಾಟೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.