Starbucks: ಕಾಫಿ ದಿಗ್ಗಜ ಸಂಸ್ಥೆಯ ಸಿಇಒ ಆಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ನೇಮಕ..
ಭಾರತೀಯ ಮೂಲದ ವ್ಯಕ್ತಿಗಳು ವಿಶ್ವ ದರ್ಜೆಯ ದಿಗ್ಗಜ ಕಂಪನಿಗಳ ಸಿಇಒಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತೀಯ ಮೂಲದವರೇ ವಿಶ್ವದರ್ಜೆಯ 9 ಕಾರ್ಪೊರೇಟ್ ದೈತ್ಯ ಕಂಪನಿಗಳ ಸಿಇಒ ಆಗಿರುವುದು ವಿಶೇಷ.
ಇತ್ತೀಚೆಗಷ್ಟೇ ವಿಶ್ವದ ಮುಂಚೂಣಿಯಲ್ಲಿರುವ ಕಾಫಿ ದಿಗ್ಗಜ ಸ್ಟಾರ್‌ಬಕ್ಸ್ ಕಾರ್ಪೊರೇಷನ್ (ಸ್ಟಾರ್‌ಬಕ್ಸ್) ಕಂಪನಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ಅವರನ್ನು ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಮಾಡಿದೆ. ನೇಮಕ ಮಾಡಲಾಗುತ್ತಿದೆ ಎಂದು ಘೋಷಿಸಿದೆ.
ಲಕ್ಷ್ಮಣ್ ನರಸಿಂಹನ್ ಅವರು ಅಕ್ಟೋಬರ್ 1 ರಿಂದ ಸ್ಟಾರ್ ಬಕ್ಸ್ ನ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ, ಪ್ರಸ್ತುತ ಸ್ಟಾರ್ ಬಕ್ಸ್ ಸಿಇಒ ಹೊವಾರ್ಡ್ ಸುಹುಲ್ಟ್ಜ್ ಅವರ ಸ್ಥಾನವನ್ನ ವಹಿಸಿಕೊಳ್ಳಲಿದ್ದಾರೆ.ಲಕ್ಷ್ಮಣ್ ನರಸಿಂಹನ್ ಅವರು ಈ ಹಿಂದೆ ರೆಕಿಟ್ ಸಿಇಒ ಆಗಿ ಕೆಲಸ ನಿರ್ವಹಿಸಿದ್ದಾರೆ. Reckitt ಡ್ಯೂರೆಕ್ಸ್ ಕಾಂಡೋಮ್ಗಳು, ಎನ್ ಫ್ಯಾಮಿಲಿ ಬೇಬಿ ಫಾರ್ಮುಲಾ, ಮೂಸಿನೆಕ್ಸ್ ಕೋಲ್ಡ್ ಸಿರಪ್ ಅನ್ನು ತಯಾರಿಸುತ್ತದೆ. ಲಕ್ಷ್ಮಣ್ ರೆಕಿಟ್‌ನಿಂದ ನಿರ್ಗಮಿಸುವುದಾಗಿ ಘೋಷಿಸಿದ ನಂತರ, ಕಂಪನಿಯ ಷೇರುಗಳು ಶೇಕಡಾ 4 ರಷ್ಟು ಕುಸಿದಿವೆ.
ಸ್ಟಾರ್‌ಬಕ್ಸ್ ಅಮೆರಿಕದಲ್ಲಿ 200ಕ್ಕೂ ಹೆಚ್ಚು ಕಾಫಿ ಶಾಪ್‌ಗಳನ್ನು ಹೊಂದಿದೆ. ಹಣದುಬ್ಬರ, ಹೆಚ್ಚಿದ ಸಿಬ್ಬಂದಿ ವೇತನ ಮತ್ತು ಕೋವಿಡ್ ನಿಬಂಧನೆಗಳು ಸಾಗರೋತ್ತರ ಮಾರುಕಟ್ಟೆಗಳಲ್ಲಿ ವ್ಯಾಪರ ಕುಸಿಯುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ನರಸಿಂಹನ್ ಅವರು ಸ್ಟಾರ್ ಬಕ್ಸ್ ಸಿಇಒ ಆಗಿ ಸೇರಲಿದ್ದಾರೆ.ಈ ಹಿಂದೆ ನರಸಿಂಹನ್ ಅವರು ಪೆಪ್ಸಿಕೋದಲ್ಲಿ ಗ್ಲೋಬಲ್ ಚೀಫ್ ಕಮರ್ಷಿಯಲ್ ಆಫೀಸರ್ ಆಗಿ ಕಾರ್ಯನಿರ್ವಹಿಸಿದ್ದರು.








