ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಏರಿಸಿದ ರಾಜ್ಯ ಸರ್ಕಾರ
ಕೋವಿಡ್ ಲಾಕ್ ಡೌನ್ ನಿಂದ ಈಗಾಗಲೇ ಆರ್ಥಿಕವಾಗಿ ತತ್ತರಿಸಿರುವ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸರ್ಕಾರ ಮತ್ತೊಂದು ಪೆಟ್ಟು ಕೊಟ್ಟಿದೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕವನ್ನು 10 ಸಾವಿರ ರೂ.ಗಳಷ್ಟು ಏರಿಕೆ ಮಾಡಿ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಶಾಕ್ ನೀಡಿದೆ. ಈ ಶುಲ್ಕ ಏರಿಕೆ ಮತ್ತೊಂದು ಹೊರೆಯಾಗಿ ಪರಿಣಮಿಸಿದೆ.
ಈ ಮೊದಲು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ 23,810 ರೂಪಾಯಿ ಇತ್ತು ಈಗ ಸರ್ಕಾರ 10000 ಸಾವಿರ ರಿಕೆ ಮಾಡಿರುವ ಕಾರಣ ವಿದ್ಯಾರ್ಥಿಗಳು ಈಗ 33,810 ರೂಪಾಯಿಗಳನ್ನು ಪಾವತಿಸಬೇಕಿದೆ. ರಾಜ್ಯ ಸರ್ಕಾರ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಜೊತೆಗೆ ಖಾಸಗಿ ಎಂಜಿನಿಯರಿಂಗ್ ಕಾಲೇಜು ಮತ್ತು ಡೀಮ್ಡ್ ವಿವಿಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳಿಗೂ ತನ್ನ ಹೊಸ ಶುಲ್ಕ ನೀತಿಯನ್ನು ಅನ್ವಯಿಸಿದೆ.
ಈ ಹಿಂದೆ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಶುಲ್ಕ ಹೆಚ್ಚಿಸಲು ಮನವಿ ಮಾಡಿದ್ದರೂ ಸರ್ಕಾರ ಇದಕ್ಕೆ ನಿರಾಕರಿಸಿತ್ತು. ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಿಗೆ ದಾಖಲಾಗುತ್ತಿದ್ದರು. ಇದೀಗ ಶುಲ್ಕ ಏರಿಕೆಯಿಂದ ಅವರುಗಳ ಮೇಲೆ ಮತ್ತಷ್ಟು ಹೊರೆ ನೀಡಿದೆ.