ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಇಲಾಖೆಯಿಂದ ನೋಟಿಸ್‌ಗಳನ್ನು ಜಾರಿಗೊಳಿಸಿರುವುದನ್ನು ವಿರೋಧಿಸಿ ಬಿಜೆಪಿ MLC ಸಿಟಿ ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಸಣ್ಣ ವ್ಯಾಪಾರಿಗಳು ಈಗ ತಮ್ಮ ವ್ಯಾಪಾರವನ್ನು ಮುಚ್ಚುವ ಸ್ಥಿತಿಗೆ ಬಂದುಬಿಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಸಣ್ಣ ವ್ಯಾಪಾರಿಗಳಿಗೆ ನೋಟಿಸ್‌ಗಳನ್ನು ನೀಡಲಾಗಿದೆ. ಇದರಿಂದ ವ್ಯಾಪಾರಿಗಳು ಭಯಭೀತರಾಗಿದ್ದಾರೆ. ತಮ್ಮ ತಮ್ಮ ಬಿಸಿನೆಸ್ ಮುಚ್ಚಿ ಊರಿಗೆ ಹೋಗುವ ಪರಿಸ್ಥಿತಿ ಬರುತ್ತಿದೆ. ಸರ್ಕಾರ ತನ್ನ ಖಜಾನೆ ತುಂಬಿಕೊಳ್ಳಲು ಇದನ್ನು ಮಾಡುತ್ತಿದೆ, ಎಂದು ಸಿಟಿ ರವಿ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬುದನ್ನು ಸರಳವಾಗಿ ಒಪ್ಪಿಕೊಳ್ಳಲಿ. ಅದನ್ನು ಮುಚ್ಚಲು ಸಣ್ಣ ವ್ಯಾಪಾರಿಗಳನ್ನು ಗೋಳು ಹೊಯ್ದುಕೊಳ್ಳೋದು ಸರಿಯಲ್ಲ. ಖಜಾನೆ ತುಂಬಿಸಿಕೊಳ್ಳಬೇಕೆಂದು ಬಡ ವ್ಯಾಪಾರಿಗಳಿಗೆ ಶೋಷಣೆ ಮಾಡುವುದು ಸರ್ಕಾರದ ನೀತಿಗೆ ತಕ್ಕದ್ದು ಅಲ್ಲ, ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.








