ಕೆಜಿಎಫ್-2 ಸಿನಿಮಾದ ನಂತ್ರ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಯಾವುದು…? ಎಂಬ ಪ್ರಶ್ನೆ ರಾಕಿಭಾಯ್ ಅಭಿಮಾನಿಗಳಲ್ಲಿ ಗಿರಕಿ ಹೊಡೆಯುತ್ತಿದೆ. ಸದ್ಯ ಯಶ್ ಕೆಜಿಎಫ್-2 ಸಿನಿಮಾದ ಬ್ಯುಸಿಯಲ್ಲಿದ್ದಾರೆ. ಆದರೂ ಯಶ್ ರ ಮುಂದಿನ ಸಿನಿಮಾ ಬಗ್ಗೆ ಗಾಂಧಿನಗರದಲ್ಲಿ ಭಾರಿ ಚರ್ಚೆ ಆಗುತ್ತಿದೆ. ಅಂದ್ಹಾಗೆ ಕೆಲ ದಿನಗಳ ಹಿಂದೆ ‘ಮಫ್ತಿ’ ನಿರ್ದೇಶಕ ನರ್ತನ್ ಜೊತೆಗೆ ಯಶ್ ಸಿನಿಮಾದ ಮಾಡುವ ಸುದ್ದಿಯೂ ಹರಿದಾಡಿತ್ತು. ಆನಂತರದಲ್ಲಿ ನರ್ತನ್, ಯಶ್ ಅವ್ರಿಗೆ ಸಿನಿಮಾ ಮಾಡುವ ಚಿಂತನೆಯಲ್ಲಿರೋದು ನಿಜ ಎಂದಿದ್ದರು. ಇದರ ಬೆನ್ನಲ್ಲೇ ಈ ಸಿನಿಮಾದಲ್ಲಿ ತಮನ್ನಾ ನಾಯಕಿನಾಗಿ ನಟಿಸ್ತಾರೆ ಅನ್ನೋ ಸುದ್ದಿ ಹರಿದಾಡ್ತಿತ್ತು. ಇದೀಗ ಈ ಬಗ್ಗೆ ನಿರ್ದೇಶಕ ನರ್ತನ್ ಮಾತನಾಡಿದ್ದು, ಯಶ್ ಗೆ ಈ ತಿಂಗಳ ಅಂತ್ಯದಲ್ಲಿ ಸ್ಟೋರಿ ರೀಡಿಂಗ್ ಕೊಡ್ತೀನಿ ಎಂದಿದ್ದಾರೆ. ಸಿನಿಮಾದ ಕೆಲಸಗಳು ಆರಂಭವಾಗಿದ್ದು, ‘ಸ್ಕ್ರಿಪ್ಟಿಂಗ್ ವರ್ಕ್ ಹಂತ ಹಂತವಾಗಿ ಸಾಗುತ್ತಿದೆ. ಸ್ಕ್ರಿಪ್ಟ್ ಫೈನಲ್ ಆದಲ್ಲಿ, ಈ ತಿಂಗಳು ಯಶ್ ಅವ್ರಿಗೆ ಸ್ಟೋರಿ ರೀಡಿಂಗ್ ಕೊಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಯಶ್ ಅವರು ಸದ್ಯ ಕೆಜಿಎಫ್ ಚಾಪ್ಟರ್-2 ಶೂಟಿಂಗ್ ನಲ್ಲಿದ್ದಾರೆ. ಕಥೆಯನ್ನು ಮತ್ತಷ್ಟು ಚೆಂದಗೊಳಿಸಲು ಸಮಯಾವಕಾಶವಿದೆ. ಯಾವ ಜಾನರ್ ಎಂದು ಇನ್ನೂ ಫಿಕ್ಸ್ ಆಗಿಲ್ಲ. ಎಲ್ಲವೂ ಫೈನಲ್ ಆದ್ಮೇಲೆ ಅಧಿಕೃತ ಮಾಹಿತಿ ನೀಡ್ತೀನಿ ಎಂದು ನರ್ತನ್ ತಿಳಿಸಿದ್ದಾರೆ.
ಮಫ್ತಿ ಸಿನಿಮಾದ ಬಳಿಕ ನಿರ್ದೇಶಕ ನರ್ತನ್ ಶಿವಣ್ಣ ಜೊತೆಗೆ “ಭೈರತಿ ರಣಗಲ್ಲು” ಸಿನಿಮಾ ಮಾಡುವುದಾಗಿ ಘೋಷಿಸಿದ್ದರು.