Strict action against rule-breaking private buses-ನಿಯಮಗಳನ್ನು ಉಲ್ಲಂಘಿಸುವ ಖಾಸಗಿ ಪ್ರವಾಸಿ ಬಸ್ ನಿರ್ವಾಹಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ ಕೇರಳ ಸರ್ಕಾರ
ಪಾಲಕ್ಕಾಡ್‌ನ ವಡಕ್ಕೆಂಚೇರಿ ಖಾಸಗಿ ಬಸ್ ಅಪಘಾತದ ನಂತರ ನಿಯಮಗಳನ್ನು ಉಲ್ಲಂಘಿಸುವ ಪ್ರವಾಸಿ ಬಸ್‌ಗಳ ವಿರುದ್ಧ ತಮ್ಮ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕೇರಳ ಸಾರಿಗೆ ಸಚಿವ ಆಂಟನಿ ರಾಜು ಸೋಮವಾರ ತಿಳಿಸಿದ್ದಾರೆ.
ಬಸ್‌ನಲ್ಲಿ ಪ್ರತಿ ಹೆಚ್ಚುವರಿ ಫಿಟ್ಟಿಂಗ್‌ಗೆ ₹ 10,000 ದಂಡ ವಿಧಿಸಲಾಗುವುದು ಮತ್ತು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ವಾಹನ ಕಂಡುಬಂದಲ್ಲಿ ಜಿಲ್ಲಾ ಸಾರಿಗೆ ಅಧಿಕಾರಿಗಳೆ ಜವಾಬ್ದಾರರು ಎಂದು ರಾಜು ತಿಳಿಸಿದ್ದರೆ.
“ನಾವು ಕಾನೂನು ಉಲ್ಲಂಘಿಸುವವರ ಮೇಲೆ ನಿಗಾವಹಿಸುತ್ತೆವೆ. ಸ್ಪೀಡ್ ಗವರ್ನರ್ ಟ್ಯಾಂಪರ್ ಮಾಡಿದ್ದರೆ ಮಾಲೀಕರು ಮತ್ತು ಬಸ್ ಕಾರ್ಮಿಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಸಚಿವರು ಹೇಳಿದರು.
ಅಕ್ಟೋಬರ್ 6 ರಂದು ಸಂಭವಿಸಿದ ವಡಕ್ಕೆಂಚೇರಿ ಖಾಸಗಿ ಬಸ್ ಅಪಘಾತದಲ್ಲಿ ಐದು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದರು ಮತ್ತು ಸುಮಾರು 38 ಮಂದಿ ಗಾಯಗೊಂಡಿರುವ ಬಗ್ಗೆ ವರದಿ ಸಲ್ಲಿಸಿದ ನಂತರ ಈ ನಿಯಮ ಜಾರಿಗೊಳಿಸಲಾಗಿದೆ.
ವರದಿಯಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸಚಿವರಿಗೆ ತಿಳಿಸಲಾಗಿದೆ.
ಅಪಘಾತದ ನಂತರ ಕೇರಳ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿದೆ ಮತ್ತು ಆಗಾಗ್ಗೆ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುವ ಖಾಸಗಿ ಬಸ್ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಲದಿದ್ದಕ್ಕಾಗಿ ಸಾರಿಗೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ.
ಖಾಸಗಿ ವಾಹನಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯವಾಗಿದ್ದರೂ, ಕಡ್ಡಾಯ ಪರೀಕ್ಷೆಗಳ ಸಮಯದಲ್ಲಿ ಮಾತ್ರ ಅದನ್ನು ಅಳವಡಿಸುತ್ತಾರೆ ಮತ್ತು ಪರೀಕ್ಷೆ ಮುಗಿದ ನಂತರ ತಗೆದು ಹಾಕುತ್ತರೆ ಎಂದು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಹೈ ಬೀಮ್ ಲೈಟ್ ಮತ್ತು ಕರ್ಕಶ ಹಾರ್ನ್‌ಗಳನ್ನು ಹೈಕೋರ್ಟ್ ನಿಷೇಧಿಸಿತ್ತು ಆದರೆ ಇನ್ನೂ ಅನೇಕ ಬಸ್‌ಗಳು ಅವುಗಳನ್ನು ಅಳವಡಿಸಿಕೊಂಡಿವೆ .ಅದೇ ರೀತಿ ಸಾರಿಗೆ ಇಲಾಖೆ ಬಸ್ ಗಳಿಗೆ ಕಲರ್ ಕೋಡ್ ನೀಡಿದ್ದರೂ ನಿಯಮ ಪಾಲನೆಯಾಗುವುದು ಅಪರೂಪವಾಗಿದೆ ಎಂದು ತಿಳಿಸಿದ್ದಾರೆ.
ವಾಹನಗಳು ಅಕ್ರಮ ಫಿಟ್ಟಿಂಗ್‌ಗಳು, ಅಚ್ಚುಕಟ್ಟಾದ ಬಣ್ಣಗಳು ಮತ್ತು ಹೈ ಬೀಮ್ ಲೈಟ್‌ಗಳಿಂದ ಅಲಂಕರಿಸಿರುವುದು ಕಂಡುಬಂದರೆ ತಕ್ಷಣವೇ ಫಿಟ್‌ನೆಸ್ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಸಾರಿಗೆ ಇಲಾಖೆಗೆ ಹೈಕೋರ್ಟ್ ಸೂಚಿಸಿದೆ.
ಪ್ರತಿ ಖಾಸಗಿ ಬಸ್‌ಗೆ ಮೀಸಲಾದ ಅಧಿಕಾರಿಯನ್ನು ನಿಯೋಜಿಸಲಾಗುವುದು ಮತ್ತು ಅವರು ವಾರಕ್ಕೊಮ್ಮೆ ತಪಾಸಣೆ ನಡೆಸಿ ವರದಿಯನ್ನು ಇಡಬೇಕು ಎಂದು ಸಚಿವರು ಹೇಳಿದರು.
“ಇದು ಕೇವಲ ಬಸ್‌ಗಳಿಗೆ ಅಲ್ಲ, ಕಾರುಗಳು ಮತ್ತು ಮೋಟಾರ್ ಸೈಕಲ್‌ಗಳು ಸಹ ಈ ನಿಯಮಗಳ ಅಡಿಯಲ್ಲಿ ಬರುತ್ತವೆ” ಎಂದು ಅವರು ತಿಳಿಸಿದ್ದಾರೆ.
ಪ್ರವಾಸಿ ಬಸ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ಅನ್ನು ಹಿಂಬದಿಯಿಂದ ನಿಲ್ಲಿಸಿದ ನಂತರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಸೆಲಿಯೋಸ್ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹೊತ್ತ ಟೂರಿಸ್ಟ್ ಬಸ್ ಎರ್ನಾಕುಲಂನಿಂದ ಊಟಿಗೆ ಹೊರಟಿದ್ದರೆ, ಕೆಎಸ್‌ಆರ್‌ಟಿಸಿ ಬಸ್ ಕೊಯಮತ್ತೂರಿಗೆ ತೆರಳುತ್ತಿತ್ತು.
ವಡಕ್ಕೆಂಚೇರಿ ಬಸ್ ಅಪಘಾತದಲ್ಲಿ ಮೃತಪಟ್ಟವರಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ಐವರು ವಿದ್ಯಾರ್ಥಿಗಳು, ಒಬ್ಬರು ಶಿಕ್ಷಕರು ಮತ್ತು ಮೂವರು ಪ್ರಯಾಣಿಕರು ಸೇರಿದ್ದಾರೆ.
ಒಟ್ಟು 38 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Strict action private buses: Strict action against rule-breaking private buses: Kerala Transport Minister








