ಮಡಿಕೇರಿ: ರಾಜ್ಯದಲ್ಲಿ ಕೊರೊನಾ ಸೋಂಕಿನ ಅಬ್ಬರ ಕಡಿಮೆಯಾಗುತ್ತಿದ್ದು, ನಿಧಾನವಾಗಿ ಉದ್ಯಮಗಳು ಆರಂಭವಾಗುತ್ತಿವೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಕೊಡಗಿನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ಆದೇಶಿಸಿದ್ದಾರೆ.
ವರ್ಷಾಂತ್ಯದಲ್ಲಿ ಪ್ರವಾಸಿ ತಾಣಗಳು, ರೆಸಾರ್ಟ್, ಹೋಂಸ್ಟೇ, ಹೊಟೇಲ್, ರೆಸ್ಟೋರೆಂಟ್‍ಗಳಲ್ಲಿ ಪ್ರವಾಸಿಗರ ಹರಿವು ಹೆಚ್ಚಾಗುವ ಕಾರಣ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು, ವಿಫಲವಾದರೆ ರೆಸಾರ್ಟ್, ಹೋಟೇಲ್, ಹೋಂಸ್ಟೇ ಮಾಲೀಕರೇ ನೇರ ಹೊಣೆಯಾಗಲಿದ್ದಾರೆ. ಈಗಾಗಲೇ ಅಲ್ಲಲ್ಲಿ ನಾಮಫಲಕ ಅಳವಡಿಸುವ ಕಾರ್ಯ ಪೂರ್ಣಗೊಂಡಿದ್ದು ಪ್ರವಾಸಿ ತಾಣದಲ್ಲಿ ನಿಯಮ ಉಲ್ಲಂಘಿಸಿದರೆ ದಂಡ ಬೀಳುವುದು ಖಚಿತ.

ನ್ಯೂ ಇಯರ್ ಗೆ ಬೈಲುಕುಪ್ಪೆ ಬಂದ್
ಕುಶಾಲನಗರ ಹೊರವಲಯದ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಗಡಿಗ್ರಾಮ ಬೈಲುಕುಪ್ಪೆ ಟಿಬೆಟ್ ನಿರಾಶ್ರಿತರ ಕ್ಯಾಂಪಿನ ಗೋಲ್ಡನ್ ಟೆಂಪಲ್ ಪ್ರವೇಶಕ್ಕೆ ಇನ್ನು ಹತ್ತು ದಿನ ನಿರ್ಬಂಧ ಹೇರಲಾಗಿದೆ. ಇದೇ ತಿಂಗಳ 26 ವರೆಗೆ ಸ್ಯಾನಿಟೈಸಿಂಗ್ ಮತ್ತಿತ್ತರ ಕೆಲಸ ಮಾಡಿಕೊಳ್ಳುವ ನಿಟ್ಟಿನಲ್ಲಿ ಸ್ವತಃ ಕ್ಯಾಂಪಿನ ಆಡಳಿತ ಮಂಡಳಿ ನಿಭರ್ಂಧ ಹೇರಿ ಆದೇಶ ಹೊರಡಿಸಿದೆ.
ಜತೆಗೆ ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೈಲುಕುಪ್ಪೆಯ ಟಿಬೆಟ್ ಕ್ಯಾಂಪಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








