ಸದ್ಯಕ್ಕೆ ಹೈದ್ರಾಬಾದ್ ನಲ್ಲಿ ಪ್ಯಾಂಟಮ್ ಚಿತ್ರದ ಶೂಟಿಂಗ್ ನಲ್ಲಿ ಕಿಚ್ಚ ಸುದೀಪ್ ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿಯೂ ರಕ್ಷಾಬಂಧನಕ್ಕೆ ಸುದೀಪ್ ಅವರು ಸಾಮಾಜಿಕ ಜಾಲತಾಣದ ಮೂಲಕ ಬಿಲೇಟೆಡ್ ವಿಷ್ ಮಾಡಿದ್ದು, ಅವರ ಪೋಸ್ಟ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಹಳೆಯ ಫೊಟೋಗಳು ಹಾಗೂ ಈಗಿನ ಫೋಟೋಗಳನ್ನು ಹಂಚಿಕೊಂಡಿರುವ ಸುದೀಪ್ ಅವರ ಪೋಸ್ಟ್ ಗೆ ಅವರು ಕೊಟ್ಟಿರುವ ಅಡಿಬರಹವೂ ಗಮನ ಸೆಳೆದಿದೆ. “ಆಗಿನ ಸಹೋದರ, ಈಗಿನ ಸಹೋದರ, ಎಂದೆಂದಿಗೂ ಸಹೋದರ” ಎಂದು ಬರೆದುಕೊಳ್ಳುವ ಮೂಲಕ ಸಹೋದರ ಹಾಗೂ ಸಹೋದರಿಯರ ನಡುವಿನ ಬಾಂಧವ್ಯವವನ್ನು ತಿಳಿಸಿದ್ದಾರೆ.
ಇನ್ನೂ ಈ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿರುವ ಸುದೀಪ್ ಅವರ ಅಕ್ಕ ಸುಜಾತಾ ಅವರು ‘’ನೀನು ಎಂದೆಂದಿಗೂ ನಮ್ಮ ಪುಟಾಣಿ ತಮ್ಮ. ನಿನ್ನನ್ನು ಮುದ್ದು ಮಾಡಲು ನಾವು ಯಾವಾಗಲೂ ಸಿದ್ಧ. ನಮಗಿಂತ ನೀನು ಚಿಕ್ಕವನು ಎಂಬುದನ್ನು ನಾವು ಸದಾ ನಿನಗೆ ನೆನಪಿಸುತ್ತೇವೆ” ಎಂದು ಹಾಸ್ಯಸ್ಪದವಾಗಿ ಹೇಳಿಕೊಂಡು ತಮ್ಮನ ಮೇಲಿನ ಪ್ರೀತಿಯನ್ನು ತೋರಿಸಿಕೊಂಡಿದ್ದಾರೆ.
ಅಲ್ದೇ “ನೀನು ಯಾವಾಗಲೂ ನಮಗಾಗಿ ಇರುತ್ತೀಯಾ ‘ಡಿ’. ನಾವು ನಿನ್ನನ್ನು ತುಂಬಾ ಪ್ರೀತಿಸುತ್ತೇವೆ. ಸದಾ ಆಶೀರ್ವಾದವಿರಲಿ ಕಂದಾ” ಎಂದು ಭಾವಪೂರ್ಣವಾಗಿ ಬರೆದುಕೊಂಡಿರುವ ಅವರ ಸಹೋದರಿಯ ಅಡಿಬರಹ ಮನಸ್ಸಿಗೆ ನಾಟುವಂತಿದೆ. ಇನ್ನೂ ಸುದೀಪ್ ಅವರು ಹಂಚಿಕೊಂಡಿರುವ ಫೋಟೋಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.