`ಕಬ್ಜ’ ವರ್ಲ್ಡ್ ಗೆ `ಭಾರ್ಗವ್ ಬಕ್ಷಿ ಸುದೀಪ್’ ಎಂಟ್ರಿ : ಹೀರೋನಾ..? ವಿಲನ್ನಾ..?
ಸಂಕ್ರಾಂತಿ ಹಬ್ಬಕ್ಕೆ ಕಬ್ಜ ಚಿತ್ರತಂಡ ಯಾರೂ ನಿರೀಕ್ಷೆ ಮಾಡಿದ ಸಪ್ರ್ರೈಸ್ ಕೊಟ್ಟಿದೆ. ಈ ಸಪ್ರ್ರೈಸ್ ಭಾರತೀಯ ಚಿತ್ರರಂಗವನ್ನ ಬೆರಗುಗೊಳಿಸಿದೆ. ರಿಯಲ್ ಸ್ಟಾರ್ ಉಪೇಂದ್ರ ಅಡ್ಡಕ್ಕೆ ಬಾದ್ ಷಾ ಕಿಚ್ಚ ಸುದೀಪ್ ಎಂಟ್ರಿಕೊಟ್ಟಿದ್ದಾರೆ.
ಹೌದು..! ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಬಹು ನಿರೀಕ್ಷಿತ ಸಿನಿಮಾಗಳ ಪೈಕಿ ಆರ್. ಚಂದ್ರು ನಿರ್ದೇಶನದ ಕಬ್ಜ ಕೂಡ ಒಂದು. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಮೋಷನ್ ಪೋಸ್ಟರ್ ಗಳ ಮೂಲಕ ಭಾರಿ ಸದ್ದು ಮಾಡಿತ್ತು.
ರೆಟ್ರೋ ಕಾಲದ ಅಂಡರ್ ವರ್ಲ್ಡ್ ಕಥೆಯನ್ನ ಈ ಸಿನಿಮಾ ಹೊಂದಿದ್ದು, ಭಾರಿ ಕುತೂಹಲ ಕೆರಳಿಸಿದೆ. ಇದು ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದಾಗಿದೆ.
ಐ ಲವ್ ಯೂ ಸಿನಿಮಾ ಬಳಿಕ ಆರ್ ಚಂದ್ರು-ಉಪೇಂದ್ರ ಜೋಡಿ ಮತ್ತೆ ಒಂದಾಗಿರೋದು ಚಿತ್ರದ ವಿಶೇಷವಾಗಿತ್ತು. ಇದೀಗ ಕಬ್ಜ ವರ್ಲ್ಡ್ ಗೆ ಸ್ಯಾಂಡಲ್ ವುಡ್ ನ ಬಾದ್ ಷಾ ಕಿಚ್ಚ ಸುದೀಪ್ ಎಂಟ್ರಿಕೊಟ್ಟಿದ್ದು, ಮತ್ತಷ್ಟು ಕುತೂಹಲ ಹೆಚ್ಚಿದೆ.
ಸುದೀಪ್ ಅವರ ಪಾತ್ರದ ಟೀಸರ್ ಅನ್ನು ಇಂದು ಚಿತ್ರತಂಡವು ಬಿಡುಗಡೆ ಮಾಡಿದೆ. ‘ಕಬ್ಜ’ ಸಿನಿಮಾದಲ್ಲಿ 70-80 ರ ದಶಕದ ಅಂಡರ್ರ್ಲ್ಡ್ ಕತೆಯನ್ನು ತೆರೆ ಮೇಲೆ ಬಿಚ್ಚಿಡಲಿದ್ದು, ಸಿನಿಮಾದಲ್ಲಿ ಸುದೀಪ್ ಅವರು ಭಾರ್ಗವ್ ಬಕ್ಷಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟೀಸರ್ನಲ್ಲಿ ಸುದೀಪ್ ಚಿತ್ರದ ಜೊತೆಗೆ ಭಾರ್ಗವ್ ಬಕ್ಷಿ, 1947 ಟು 1986 ಎಂದಿದೆ. ಅಂದ್ರೆ 70-80 ರ ದಶಕದ ಅಂಡರ್ ವರ್ಲ್ಡ್ ಡಾನ್ ಆಗಿ ಸುದೀಪ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಿನಿಮಾದ ಕತೆಯನ್ನು ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಡೆವಲಪ್ ಮಾಡಿ ಕೊಟ್ಟಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತವಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel