ಸಿಡಿ ಪ್ರಕರಣ : ನಾವು ಯಾವುದೇ ತಪ್ಪು ಮಾಡಿಲ್ಲ , ತಪ್ಪು ಮಾಡೋದು ಇಲ್ಲ – ಸುಧಾಕರ್

1 min read

ಸಿಡಿ ಪ್ರಕರಣ : ನಾವು ಯಾವುದೇ ತಪ್ಪು ಮಾಡಿಲ್ಲ , ತಪ್ಪು ಮಾಡೋದು ಇಲ್ಲ – ಸುಧಾಕರ್

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಚಾರವಾಗಿ ಆರೋಗ್ಯ ಸಚಿವ ಡಾ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ರಾಜಕೀಯ ಪಿತೂರಿ ಷಡ್ಯಂತ್ರ ನಡೆಯುತ್ತಿದೆ. ಮಾಧ್ಯಮಗಳನ್ನು ಉಪಯೋಗಿಸಿಕೊಂಡು ತೇಜೋವಧೆ ಮಾಡಲಾಗುತ್ತಿದೆ. ಅನೇಕ ವರ್ಷಗಳಿಂದ ಗಳಿಸಿದ ಹೆಸರನ್ನು ಹಾಳು ಮಾಡುವಂತದ್ದು ಹೊಸ ಸಂಸ್ಕೃತಿ ಆಗಿದೆ. ಇತಿಶ್ರಿ ಹಾಡಬೇಕು ಹಾಗೆಯೇ ಬಲವಾದ ಕಾನೂನು ತರಬೇಕೆಂಬುದನ್ನು ಸರ್ಕಾರ ಚಿಂತನೆ ನಡೆಸುತ್ತಿದೆ. ನಾವು ಆರು ಜನ ಅಷ್ಟೆ ಅಲ್ಲ ಇನ್ನು ಹೆಚ್ಚು ಜನ ಮಂತ್ರಿಗಳು ಕೂಡ ಕೋರ್ಟ್ ಗೆ ಹೋಗುವವರಿದ್ದಾರೆ ಎಂದಿದ್ದಾರೆ.

ಸಿಎಂ ಸಲಹೆ ಮೇರೆಗೆ ಕೋರ್ಟ್ ಮೊರೆ ಹೋದ್ರಾ ಬಾಂಬೆ ಫ್ರೆಂಡ್ಸ್..?

ಇದೇ ವೇಳೆ ಕಾನೂನು ಸಚಿವರ ಜೊತೆ ಹಾಗು ಸಿಎಂ ಜೊತೆ ಈ ಬಗ್ಗೆ ಮಾತನಾಡಿದ್ದೇವೆ. ಎಲ್ಲಾ ಕ್ಷೇತ್ರದಲ್ಲಿಯೂ ಇದು ನಡೆಯುತ್ತಿದೆ. ಯಾವ ರೀತಿ ಷಡ್ಯಂತ್ರ ನಡೆತುತ್ತಿದೆ ಎಂಬುದು ಗೊತ್ತಾಗುತ್ತಿದೆ. ನೈಜತೆ ಇದ್ದರೆ ಹೊರಬರಲಿ ನಾವ್ಯಾರು ಕಾನೂನಿಗಿಂತ ದೊಡ್ಡವರಲ್ಲ. ಆದರೆ ಸುಳ್ಳು ಹಾಗೂ ತಪ್ಪು ಪ್ರಚಾರ ಸರಿಯಲ್ಲ. ಈ ರೀತಿ ಇದ್ದಾಗ ಕಾನೂನು ಮೆಟ್ಟಿಲು ಯಾಕೆ ಹತ್ತಲ್ಲ.. ಜನರ ಮುಂದೆ ಖಳನಾಯಕರನ್ನಾಗಿ ಮಾಡಲು ತಮ್ಮ ಬೇಳೆ ಬೇಯಿಸಿಕೊಳ್ಳಲಿ ಹೀಗೆ ಮಾಧ್ಯಮಗಳ ಮುಂದೆ ಬರ್ತಾರೆ. ರಷ್ಯಾ, ದುಬೈ ನಿಂದ ಅಪ್ಲೋಡ್ ಮಾಡಿಸೋದು ಹೀಗೆ ಮಾಡಿ ಷಡ್ಯಂತ್ರ ಮಾಡಲಾಗುತ್ತಿದೆ. ಸಾರ್ವಜನಿಕ ಬದುಕಿನಲ್ಲಿ ನಮ್ಮ ನೈಜತೆ, ವ್ಯಕ್ತಿತ್ವ ರೂಪಿಸಿದವರು ಬದ್ದತೆ ಇರುತ್ತದೆ. ಯಾವುದೇ ವಿಚಾರ ಬಂದಾಗ ಪರಾಮರ್ಷಿಸಿ 24 ಗಂಟೆನೂ ಹಾಕಿ. ಇವಾಗ ಕೇವಲ ನಾವು 6 ಜನ ಸಚಿವರು, ಶಾಸಕರು ಅಲ್ಲ ಮುಂದೆ ಇನ್ನೂ ಹೆಚ್ಚು ಕೋರ್ಟ್ ಗೆ ಹೋಗುತ್ತಾರೆ. ಸತ್ಯವಂತರಿಗೆ ಭಯ ಇಲ್ಲ ಆದರೆ ಹಿಟ್ ಅಂಡ್ ರನ್ ಮಾಡುವ ಜನರಿಗೆ ಭಯ ಬೀಳಬೇಕಾಗಿದೆ ಎಂದಿದ್ದಾರೆ.

ಕೋಮುವಾದ, ಜಾತ್ಯತೀತವಾದ ಎನ್ನುವುದು ಡೋಂಗಿ : ಹೆಚ್ ಡಿ ಕುಮಾರಸ್ವಾಮಿ

ಅಲ್ದೇ ಮೊದಲ ದಿನ ಸಂತ್ರಸ್ತೆ ಎಂದು ಹೇಳಿದ್ದಾರೆ. ಆದರೆ ಅವರು ಇಲ್ಲಿಯವರೆಗೆ ಯಾಕೆ ಮುಂದೆ ಬಂದಿಲ್ಲ. ಆಕೆಯ ಕುಟುಂಬ ಕೂಡ ಮುಂದೆ ಬಂದಿಲ್ಲ. ಅವಳು ಯಾರು ಏನೂ ಎಂಬುದು ಗೊತ್ತಿಲ್ಲ. ಯಾಕೆ ಟಾರ್ಗೆಟ್ ಮಾಡ್ತಾ ಇದ್ದಾರೆ ಅನ್ನೋದು ಗೊತ್ತಿಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ.  ತಪ್ಪು ನಾವು ಮಾಡೋದು ಇಲ್ಲ ಎಂದಿದ್ದಾರೆ.

BIGG BOSS 8 :  ಜೈಲು ಸೇರಿದ ಮೊದಲ ಸ್ಪರ್ಧಿ ಧನುಶ್ರೀ..! ಕೇವಲ ಗಂಜಿ ಕುಡಿಯುವ ಶಿಕ್ಷೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd