ಇಂಗ್ಲಿಷ್ ಓದಲು ಕಷ್ಟವೆಂದು ವಿಷ ಸೇವಿಸಿದ ವಿದ್ಯಾರ್ಥಿ
ಊರ್ಡಿಗೆರೆ ಸರ್ಕಾರಿ ಶಾಲೆಯ 7 ನೇ ತರಗತಿ ವಿದ್ಯಾರ್ಥಿ
ತುಮಕೂರಿನ ಊರ್ಡಿಗೆರೆಯಲ್ಲಿ ಘಟನೆ
ಜಿಲ್ಲಾಸ್ಪತ್ರೆಯಲ್ಲಿ ಬಾಲಕಿನಿಗೆ ಚಿಕಿತ್ಸೆ , ಪ್ರಾಣಾಪಾಯದಿಂದ ಪಾರು
ವಿದ್ಯಾಭ್ಯಾಸದ ಒತ್ತಡ ಮಕ್ಕಳ ಮೇಲೆ ಕೆಲವೊಮ್ಮೆ ಮಾನಸಿಕವಾಗಿ ವ್ಯತಿರಿಕ್ತ ಪರಿಣಾಮ ಬೀರಿ ಅವರಿಂದ ಕೆಲ ದುಡುಕಿನ ಕೆಲಸಗಳನ್ನ ಮಾಡಿಸುತ್ತೆ.. ಇಲ್ಲೊಬ್ಬ ಹುಡುಗ ಇಂಗ್ಲಿಷ್ ಓದಲು ಕಷ್ಟವಾಗ್ತಿದೆ ಎಂಬ ಒಂದೇ ಒಂದು ಸಣ್ಣ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.. ಈ ಘಟನೆ ನಡೆದಿರೋದು ತುಮಕೂರಿನ ಊರ್ಡಿಗೆರೆಯಲ್ಲಿ.. ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ 7 ನೇ ತರಗತಿ ಬಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ..
ಇಂಗ್ಲಿಷ್ ಓದಲು ಕಷ್ಟವಾಗ್ತಿರೋದ್ರಿಂದ ತಾನು ಶಾಲೆಗೆ ಹೋಗುವುದಿಲ್ಲ ಎಂದು ಬಾಲಕ ಹಠ ಹಿಡಿದಿದ್ದಾನೆ.. ಆದರೆ ಪೋಷಕರು ಆತನನ್ನ ಶಾಲೆಗೆ ಹೋಗುವಂತೆ ಒತ್ತಾಯಿಸಿದ್ದಾರೆ.. ಈ ನಡುವೆ ಪೋಷಕರ ಜೊತೆಗೆ ವಾಗ್ವಾದದ ಬಳಿಕ ಬಾಲಕ ಮನೆಯಲ್ಲೇ ಕುಸಿದು ಬಿದ್ದುದ್ದು ತಕ್ಷಣವೇ ಜಿಲ್ಲಾಸ್ಪತ್ರೆಗೆ ಆತನನ್ನ ದಾಖಲಿಸಲಾಗಿದೆ.. ವೈದ್ಯರು ಚಿಕಿತ್ಸೆ ನೀಡಿದ್ದು ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ..