ADVERTISEMENT
Thursday, August 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಳವಳ್ಳಿಯಲ್ಲಿ ಮರುಕಳಿಸಿದ ಸುಳ್ವಾಡಿ ಘಟನೆ; ಮಾರಮ್ಮನ ಪ್ರಸಾದ ಸೇವಿಸಿ 100ಕ್ಕೂ ಮಂದಿ ಅಸ್ವಸ್ಥ..!

Kariyappa N by Kariyappa N
October 28, 2020
in Newsbeat, Samagra karnataka, ನ್ಯೂಸ್ ಬೀಟ್, ರಾಜ್ಯ
prasada poison
Share on FacebookShare on TwitterShare on WhatsappShare on Telegram

ಮಂಡ್ಯ: ಚಾಮರಾಜನಗರದ ಸುಳ್ವಾಡಿ ಕಿಚ್‍ಗುತ್ತಿ ಮಾರಮ್ಮನ ವಿಷ ಪ್ರಸಾದ ಸೇವನೆ ಪ್ರಕರಣ ಜನಮಾನಸದಿಂದ ಮಾಸುವ ಮುನ್ನವೇ ಅಂತಹದ್ದೇ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ವಿಶೇಷ ಪೂಜೆ ನಡೆಯುತ್ತದೆ. ಊರಿನ ಮುಖಂಡರೊಬ್ಬರು ಮಗಳ ಮದುವೆ ಪ್ರಯುಕ್ತ ಕಳೆದ ರಾತ್ರಿ ಊರಿನ ಮಾರಮ್ಮನ ದೇವಾಲಯದಲ್ಲಿ ಪೂಜೆ ಮಾಡಿಸಿ ಪ್ರಸಾದದ ರೂಪದಲ್ಲಿ ಪುಳಿಯೋಗರೆ ಮಾಡಿ ವಿತರಿಸಿದ್ದರು.
ಆದರೆ, ಪುಳಿಯೋಗರೆ ಸೇವೆನೆ ಮಾಡಿದ್ದ 100ಕ್ಕೂ ಹೆಚ್ಚು ಮಂದಿಯಲ್ಲಿ ಕೆಲವರಿಗೆ ಕಳೆದ ರಾತ್ರಿ ವಾಂತಿ-ಬೇಧಿ ಕಾಣಿಸಿಕೊಂಡಿದೆ. ಕೂಡಲೇ ಅಸ್ವಸ್ಥರನ್ನು ಹಲಗೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.


ಮತ್ತೆ ಬೆಳಿಗ್ಗೆ ಮತ್ತಷ್ಟು ಜನರಿಗೆ ವಾಂತಿ, ಬೇಧಿ ಕಾಣಿಸಿಕೊಂಡ ಪರಿಣಾಮ ಅವರೂ ಹಲಗೂರು ಆಸ್ಪತ್ರೆಗೆ ಬಂದಿದ್ದಾರೆ. ಒಂದೇ ಊರಿನ ನೂರಾರು ಮಂದಿ ಆಸ್ಪತ್ರೆಗೆ ಬಂದಿರುವುದು ವೈದ್ಯರಿಗೆ ಆತಂಕ ಮೂಡಿಸಿದೆ.
ವಿಚಾರಿಸಿದಾಗ ಗ್ರಾಮದ ದೇವರ ಪ್ರಸಾದ ತಿಂದು ಅವಾಂತರ ಆಗಿರುವುದು ತಿಳಿದಿದೆ. ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆ ಲಿಂಗಪಟ್ಟಣ ಗ್ರಾಮಕ್ಕೆ ವೈದ್ಯಾಧಿಕಾರಿಗಳ ತಂಡ ಆಗಮಿಸಿದೆ. ಪ್ರಸಾದ ತಿಂದ ಬಹುತೇಕರಿಗೆ ವಾಂತಿ, ಬೇಧಿ, ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಚಿಕಿತ್ಸೆ ಬಳಿಕ ಬಹುತೇಕರು ಚೇತರಿಸಿಕೊಂಡಿದ್ದಾರೆ. ಅಸ್ವಸ್ಥಗೊಂಡ ಕೆಲವರನ್ನು ಮಂಡ್ಯ ಹಾಗೂ ಮಳವಳ್ಳಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಫುಡ್ ಪಾಯಿಸನ್ ಕಾರಣ ಘಟನೆ ನಡೆದಿದೆ ಎಂದು ಸ್ಥಳೀಯ ವೈದ್ಯರು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಮಂಚೇಗೌಡ, ಮಳವಳ್ಳಿ ಡಿವೈಎಸ್ಪಿ ಪೃಥ್ವಿ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು.

Related posts

ಶೋಷಿತರೇ ಎಚ್ಚರ, ನಿಮ್ಮಲ್ಲೇ ಬೆಂಕಿ ಹಚ್ಚುವವರಿದ್ದಾರೆ:ರಾಜಕೀಯ ನಿವೃತ್ತಿಯಾದರೂ ಹೋರಾಟ ನಿಲ್ಲದು- ಒಳ ಮೀಸಲಾತಿ ಜಾರಿಗೆ ನಾನು ಬದ್ಧ ಎಂದ ಸಿದ್ದರಾಮಯ್ಯ

ಶೋಷಿತರೇ ಎಚ್ಚರ, ನಿಮ್ಮಲ್ಲೇ ಬೆಂಕಿ ಹಚ್ಚುವವರಿದ್ದಾರೆ:ರಾಜಕೀಯ ನಿವೃತ್ತಿಯಾದರೂ ಹೋರಾಟ ನಿಲ್ಲದು- ಒಳ ಮೀಸಲಾತಿ ಜಾರಿಗೆ ನಾನು ಬದ್ಧ ಎಂದ ಸಿದ್ದರಾಮಯ್ಯ

August 27, 2026
ವಂದೇ ಮಾತರಂ ಸಂಪೂರ್ಣ ಹಾಡಲ್ಲ ಕೇವಲ ಮೊದಲ ಎರಡು ಚರಣಗಳಿಗಷ್ಟೇ ನಮ್ಮ ಸರ್ಕಾರ ಬದ್ಧ:ಪಕ್ಷದ ಸಿದ್ಧಾಂತವೇ ನಮಗೆ ಪರಮೋಚ್ಚ- ಸಿಎಂ ಡಿ ಕೆ ಶಿವಕುಮಾರ್

ವಂದೇ ಮಾತರಂ ಸಂಪೂರ್ಣ ಹಾಡಲ್ಲ ಕೇವಲ ಮೊದಲ ಎರಡು ಚರಣಗಳಿಗಷ್ಟೇ ನಮ್ಮ ಸರ್ಕಾರ ಬದ್ಧ:ಪಕ್ಷದ ಸಿದ್ಧಾಂತವೇ ನಮಗೆ ಪರಮೋಚ್ಚ- ಸಿಎಂ ಡಿ ಕೆ ಶಿವಕುಮಾರ್

August 27, 2026


ದೇವರ ಪ್ರಸಾದ ತಯಾರು ಮಾಡುವಾಗ ಫುಡ್ ಪಾಯಿಸನ್ ಆಗಿರುವ ಶಂಕೆ ಮೇರೆಗೆ ಪ್ರಸಾದ ಹಾಗೂ ನೀರಿನ ಸ್ಯಾಂಪಲನ್ನು ಪಡೆದು ಪರೀಕ್ಷೆಗೆ ಕಳಿಸಿಕೊಡಲಾಗಿದೆ. ಗ್ರಾಮದಲ್ಲಿ ಬಹುತೇಕರು ಚೇತರಿಸಿಕೊಂಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾವುದೇ ಆತಂಕಪಡುವ ಅಗತ್ಯ ಇಲ್ಲ ಎಂದು ಡಿಹೆಚ್‍ಒ ತಿಳಿಸಿದ್ದಾರೆ.
ಸುಳ್ವಾಡಿ ಘಟನೆ ಮಾದರಿಯಲ್ಲೇ ನಡೆದಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯದ ಆತಂಕ ಇಲ್ಲ. ಗ್ರಾಮದಲ್ಲೇ ವೈದ್ಯರ ತಂಡ ಬೀಡುಬಿಟ್ಟಿದ್ದು, ಅಸ್ವಸ್ಥರಿಗೆ ಚಿಕಿತ್ಸೆ ನೀಡಿ ಅವರ ಆರೋಗ್ಯದ ಮೇಲೆ ನಿಗಾವಹಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ದೇವಾಲಯಗಳಲ್ಲಿ ಪ್ರಸಾದ ವಿತರಣೆಗೆ ಅವಕಾಶ ಇಲ್ಲ. ಆದರೂ, ಪ್ರಸಾದ ವಿತರಣೆ ಮಾಡಿರುವುದು ಕೋವಿಡ್ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಹೀಗಾಗಿ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮಳವಳ್ಳಿ ತಹಶೀಲ್ದಾರ್ ಚಂದ್ರಮೌಳಿ ಮಾಹಿತಿ ನೀಡಿದ್ದಾರೆ.

ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಸುಳ್ವಾಡಿ ದುರಂತ
2018ರ ಡಿಸೆಂಬರ್ 14ರಂದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ಕಿಚ್‍ಗುತ್ ಮಾರಮ್ಮನ ದೇವಾಲಯದ ಗೋಪುರ ನಿರ್ಮಾಣಕ್ಕಾಗಿ ಭೂಮಿ ಪೂಜೆ ಮಾಡಲಾಗಿತ್ತು. ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರಿಗೆಂದು ಪ್ರಸಾದ ತಯಾರಿಸಿ ವಿತರಣೆ ಮಾಡಲಾಗಿತ್ತು. ಈ ಪ್ರಸಾದದಲ್ಲಿ ಕ್ರಿಮಿನಾಶಕ ಬೆರೆಸಿದ್ದರಿಂದ ವಾಂತಿ ಬೇಧಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದ 17 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಬಳಿಕ ದೇಶಾದ್ಯಂತ ಆತಂಕ ಸೃಷ್ಟಿಯಾಗಿ ದೇವಸ್ಥಾನಗಳಲ್ಲಿ ವಿತರಣೆ ಮಾಡುವ ಪ್ರಸಾದದ ಬಗ್ಗೆಯೇ ಜನರು ಅನುಮಾನ ಮೂಡಿಸುವಂತೆ ಮಾಡಿದೆ.

sulvadi case
ಸುಳ್ವಾಡಿಯಲ್ಲಿ ವಿಷಪ್ರಸಾದ ಸೇವಿಸಿ ಬದುಕಿಳಿದ ಹಲವರು ಇಂದಿಗೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಸುಳ್ವಾಡಿ ಘಟನೆ ಕೇವಲ ಭಾರತ ಮಾತ್ರವಲ್ಲದೆ, ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಮಳವಳ್ಳಿಯ ಲಿಂಗಪಟ್ಟಣದ ಗ್ರಾಮದ ಪ್ರಸಾದ ಸೇವನೆ ಪ್ರಕರಣ ಜನರ ಆತಂಕಕ್ಕೆ ಕಾರಣವಾಗಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: 100 people sickMalavalliMandyamaramma templeSulwadi incidenttemple prasada
ShareTweetSendShare
Join us on:

Related Posts

ಶೋಷಿತರೇ ಎಚ್ಚರ, ನಿಮ್ಮಲ್ಲೇ ಬೆಂಕಿ ಹಚ್ಚುವವರಿದ್ದಾರೆ:ರಾಜಕೀಯ ನಿವೃತ್ತಿಯಾದರೂ ಹೋರಾಟ ನಿಲ್ಲದು- ಒಳ ಮೀಸಲಾತಿ ಜಾರಿಗೆ ನಾನು ಬದ್ಧ ಎಂದ ಸಿದ್ದರಾಮಯ್ಯ

ಶೋಷಿತರೇ ಎಚ್ಚರ, ನಿಮ್ಮಲ್ಲೇ ಬೆಂಕಿ ಹಚ್ಚುವವರಿದ್ದಾರೆ:ರಾಜಕೀಯ ನಿವೃತ್ತಿಯಾದರೂ ಹೋರಾಟ ನಿಲ್ಲದು- ಒಳ ಮೀಸಲಾತಿ ಜಾರಿಗೆ ನಾನು ಬದ್ಧ ಎಂದ ಸಿದ್ದರಾಮಯ್ಯ

by Shwetha
August 27, 2026
0

ಬೆಂಗಳೂರು : ಅಧಿಕಾರ ಇರಲಿ, ಬಿಡಲಿ ಶೋಷಿತರ ಮತ್ತು ಅವಕಾಶ ವಂಚಿತರ ಪರವಾದ ನನ್ನ ಧ್ವನಿ ಸದಾ ಮೊಳಗುತ್ತಲೇ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

ವಂದೇ ಮಾತರಂ ಸಂಪೂರ್ಣ ಹಾಡಲ್ಲ ಕೇವಲ ಮೊದಲ ಎರಡು ಚರಣಗಳಿಗಷ್ಟೇ ನಮ್ಮ ಸರ್ಕಾರ ಬದ್ಧ:ಪಕ್ಷದ ಸಿದ್ಧಾಂತವೇ ನಮಗೆ ಪರಮೋಚ್ಚ- ಸಿಎಂ ಡಿ ಕೆ ಶಿವಕುಮಾರ್

ವಂದೇ ಮಾತರಂ ಸಂಪೂರ್ಣ ಹಾಡಲ್ಲ ಕೇವಲ ಮೊದಲ ಎರಡು ಚರಣಗಳಿಗಷ್ಟೇ ನಮ್ಮ ಸರ್ಕಾರ ಬದ್ಧ:ಪಕ್ಷದ ಸಿದ್ಧಾಂತವೇ ನಮಗೆ ಪರಮೋಚ್ಚ- ಸಿಎಂ ಡಿ ಕೆ ಶಿವಕುಮಾರ್

by Shwetha
August 27, 2026
0

ಬೆಂಗಳೂರು: ರಾಷ್ಟ್ರೀಯ ಗೀತೆ ವಂದೇ ಮಾತರಂ ಗಾಯನದ ಕುರಿತು ನಡೆಯುತ್ತಿರುವ ರಾಜಕೀಯ ಜಟಾಪಟಿಯ ನಡುವೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರಾಜ್ಯ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ....

ಪರಮೇಶ್ವರ್ ಗೆ ಡಿಸಿಎಂ ಪಟ್ಟ ಸಿಕ್ಕಿದ್ದರ ಹಿಂದೆ ನಾನಿದ್ದೆ ಗಾಂಧಿ ಭವನದಲ್ಲಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

ಪರಮೇಶ್ವರ್ ಗೆ ಡಿಸಿಎಂ ಪಟ್ಟ ಸಿಕ್ಕಿದ್ದರ ಹಿಂದೆ ನಾನಿದ್ದೆ ಗಾಂಧಿ ಭವನದಲ್ಲಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

by Shwetha
August 27, 2026
0

ಬೆಂಗಳೂರು: ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಒಳ ಮೀಸಲಾತಿ ಕುರಿತ ವಿಚಾರ ಸಂಕಿರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಒಂದು ಹೇಳಿಕೆ ಇದೀಗ ಕರ್ನಾಟಕ ರಾಜಕಾರಣದ...

ಆರೆಸ್ಸೆಸ್ ವಿರುದ್ಧ ಒಂದೂ ಪ್ರಕರಣವಿಲ್ಲ ಎಂದು ಒಪ್ಪಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ :ಹಗಲಿನಲ್ಲಿ ದ್ವೇಷದ ಮಾತು ಸದನದಲ್ಲಿ ಸತ್ಯದ ಉತ್ತರ ಆರೆಸ್ಸೆಸ್ ವಿಚಾರದಲ್ಲಿ ಕಾಂಗ್ರೆಸ್ ಬಣ್ಣ ಬಯಲು ಮಾಡಿದ್ರಾ ಸುನೀಲ್ ಕುಮಾರ್!?

ಆರೆಸ್ಸೆಸ್ ವಿರುದ್ಧ ಒಂದೂ ಪ್ರಕರಣವಿಲ್ಲ ಎಂದು ಒಪ್ಪಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ :ಹಗಲಿನಲ್ಲಿ ದ್ವೇಷದ ಮಾತು ಸದನದಲ್ಲಿ ಸತ್ಯದ ಉತ್ತರ ಆರೆಸ್ಸೆಸ್ ವಿಚಾರದಲ್ಲಿ ಕಾಂಗ್ರೆಸ್ ಬಣ್ಣ ಬಯಲು ಮಾಡಿದ್ರಾ ಸುನೀಲ್ ಕುಮಾರ್!?

by Shwetha
August 27, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರೆಸ್ಸೆಸ್ ವಿರುದ್ಧ ಸದಾ ವಾಗ್ದಾಳಿ ನಡೆಸುವ ಕಾಂಗ್ರೆಸ್ ನಾಯಕರಿಗೆ ಇದೀಗ ಸದನದಲ್ಲೇ ಮುಖಭಂಗವಾಗಿದೆ. ಆರೆಸ್ಸೆಸ್ ಸಂಘಟನೆಯು ಯಾವುದೇ ಗಲಭೆ ಅಥವಾ...

ಕನ್ನಡಿಗರ ದಬ್ಬಾಳಿಕೆ ಸಹಿಸಲ್ಲ ಎಂದು ಗುಡುಗಿದ ಟೈಗರ್ ಆಫ್ ಜಸ್ಟೀಸ್ ಅಧ್ಯಕ್ಷ ಗಡಿ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಬಿಗ್ ಸ್ಕೆಚ್

ಕನ್ನಡಿಗರ ದಬ್ಬಾಳಿಕೆ ಸಹಿಸಲ್ಲ ಎಂದು ಗುಡುಗಿದ ಟೈಗರ್ ಆಫ್ ಜಸ್ಟೀಸ್ ಅಧ್ಯಕ್ಷ ಗಡಿ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಬಿಗ್ ಸ್ಕೆಚ್

by Shwetha
August 27, 2026
0

ಚಾಮರಾಜನಗರ: ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳಿಂದ ನಡೆದ ಮೂವರು ಶಂಕಿತ ಬೇಟೆಗಾರರ ಎನ್‌ಕೌಂಟರ್ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಘಟನೆಯನ್ನು ಮುಂದಿಟ್ಟುಕೊಂಡು ರಾಜ್ಯದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram