Sunil Gavaskar | ಐರ್ಲೆಂಡ್ ಸಿರೀಸ್ ಗೆ ಆತ ತಂಡದಲ್ಲಿರಬೇಕಿತ್ತು
1 min read
sunil-gavaskar-backs rahul tewatia saaksha tv
Sunil Gavaskar | ಐರ್ಲೆಂಡ್ ಸಿರೀಸ್ ಗೆ ಆತ ತಂಡದಲ್ಲಿರಬೇಕಿತ್ತು
ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ 17 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.
ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ.
ಅದೇ ರೀತಿ ಟೀಂ ಇಂಡಿಯಾದ ಹಿರಿಯ ಆಟಗಾರರು ಕೂಡ ಸರಣಿಯಿಂದ ಹೊರಗುಳಿದಿದ್ದಾರೆ.
ಬಿಸಿಸಿಐ ಯುವ ಆಟಗಾರರಾದ ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್ ಮತ್ತು ರಾಹುಲ್ ತ್ರಿಪಾಠಿ ಅವರಿಗೆ ಟಿ20 ವಿಶ್ವಕಪ್‌ನತ್ತ ಗಮನ ಹರಿಸಲು ಅವಕಾಶ ನೀಡಿದೆ.
ಐರ್ಲೆಂಡ್ ಸರಣಿಗಾಗಿ ಐಪಿಎಲ್ ನಲ್ಲಿ ಮಿಂಚಿದ ರಾಹುಲ್ ತೆವಾಟಿಯಾ ಆಯ್ಕೆ ಆಗುತ್ತಾರೆ ಎಂಬ ನಿರೀಕ್ಷೆಯಿತ್ತು.
ಆದರೆ, ಆಯ್ಕೆಗಾರರು ಮತ್ತೊಮ್ಮೆ ತೆವಾಟಿಯಾಗೆ ನಿರಾಸೆ ಉಳಿಸಿದ್ದಾರೆ.

ಐರ್ಲೆಂಡ್ ವಿರುದ್ಧದ ಸರಣಿಗೆ ರಾಹುಲ್ ತೆವಾಟಿಯಾ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕಿತ್ತು ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
“ರಾಹುಲ್ ತೆವಾಟಿಯಾ ಅದ್ಭುತ ಆಟಗಾರ. ಅವರನ್ನು ಐಪಿಎಲ್‌ನಲ್ಲಿ ಹಲವು ಬಾರಿ ನೋಡಿದ್ದೇವೆ. ತೆವಾಟಿಯಾ ಒಂದೇ ಕೈಯಿಂದ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.
ಮೈದಾನದಾದ್ಯಂತ ಶಾಟ್‌ಗಳನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆ.
ಆದ್ದರಿಂದ ಅವರನ್ನು ಐರ್ಲೆಂಡ್ ಪ್ರವಾಸಕ್ಕೆ 18ನೇ ಆಟಗಾರನಾಗಿ ಆಯ್ಕೆ ಮಾಡಬೇಕಿತ್ತು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.