ಅಸ್ಸಾಂ : ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಮುಂದಿನ ದಿನಗಳಲ್ಲಿ ಅಸ್ಸಾಂನ ಸಿಎಂ ಆಗಲಿದ್ದಾರಾ.. ಹೀಗೊಂದು ಪ್ರಶ್ನೆ ಈಗ ಭಾರೀ ಚರ್ಚೆಯಲ್ಲಿದೆ. ಅದಕ್ಕೆ ಕಾರಣವೂ ಇದೆ.
ಯಾಕೆಂದರೆ ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಆಗಿ ರಂಜನ್ ಗೊಗೊಯಿ ಅವರು ಆಯ್ಕೆಯಾಗುವ ಅವಕಾಶವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ತರುಣ್ ಗೊಗೊಯಿ ಅವರು ಹೇಳಿದ್ದಾರೆ. ಬಿಜೆಪಿ ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ ರಂಜನ್ ಗೊಗೊಯಿ ಅವರ ಹೆಸರಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಿರೀಕ್ಷಿತ ಸಿಎಂ ಅಭ್ಯರ್ಥಿಯಾಗಿಯೂ ಕೂಡ ಅಂಗೀಕರಿಸಬಹುದು ಎಂದು ತರುಣ್ ಗೊಗೊಯಿ ಅವರು ಹೇಳಿದ್ದಾರೆ.
ಅಲ್ಲದೇ ಈ ಸಂಬಂಧ ಟ್ವೀಟ್ ಮಾಡಿರುವ ತರುಣ್ ಗೋಗೋಯಿ ಅವರು ‘ಎಲ್ಲವೂ ರಾಜಕೀಯ. ಅಯೋಧ್ಯೆ ರಾಮಮಂದಿರ ವಿವಾದ ಕುರಿತು ರಂಜನ್ ಗೊಗೊಯಿ ಅವರು ನೀಡಿದ ತೀರ್ಪಿನಿಂದ ಬಿಜೆಪಿಗೆ ಬಹಳ ಸಂತೋಷವಾಗಿದೆ. ಈ ಹಿನ್ನೆಲೆ ಅವರು ರಾಜಕೀಯ ಪ್ರವೇಶ ಮಾಡಿ ರಾಜ್ಯಸಭಾ ಸ್ಥಾನವನ್ನು ಅಂಗೀಕರಿಸಿದ್ದರು. ಅವರು ಸುಲಭವಾಗಿ ಮಾನವ ಹಕ್ಕುಗಳ ಕಮಿಷನ್‍ನಲ್ಲಿ ಅಧ್ಯಕ್ಷರಾಗಬಹುದಿತ್ತು. ಅವರು ರಾಜ್ಯಸಭಾ ಸದಸ್ಯ ಸ್ಥಾನವನ್ನು ಏಕೆ ನಿರಾಕರಿಸಲಿಲ್ಲ? ಅವರಿಗೆ ರಾಜಕೀಯ ಆಶ್ರಯವಿದೆ. ಆದ್ದರಿಂದಲೇ ನಾಮಿನೇಷನ್ ಅಂಗೀಕರಿಸಿದ್ದರು’ ಎಂದು ಕಿಡಿಕಾರಿದ್ದಾರೆ.